ಐಸ್‌ಲ್ಯಾಂಡ್ ಜಗತ್ತಿನ ಎಲ್ಲಕ್ಕಿಂತ ಶಾಂತವಾದ ದೇಶ ಹಾಗೂ ಅಪಘಾನಿಸ್ತಾನ್ ಎಲ್ಲಕ್ಕಿಂತ ಅಶಾಂತವಾದ ದೇಶ !

‘ಗ್ಲೋಬಲ್ ಪೀಸ್ ಇಂಡೆಕ್ಸ್ – ೨೦೨೨’ನ ವಾರ್ಷಿಕ ವರದಿ

ಭಾರತ ೧೩೫ ನೇ ಸ್ಥಾನದಲ್ಲಿ !

ನವದೆಹಲಿ – ‘ಗ್ಲೋಬಲ್ ಪೀಸ ಇಂಡೆಕ್ಸ್ -೨೦೨೨’ ರ (ವಿಶ್ವಶಾಂತಿ ಸೂಚ್ಯಾಂಕ-೨೦೨೨) ವರದಿಯ ಪ್ರಕಾರ ಐಸ್‌ಲ್ಯಾಂಡ್ ಜಗತ್ತಿನ ಎಲ್ಲಕ್ಕಿಂತ ಶಾಂತವಾಗಿರುವ ದೇಶ ಎಂದು ಹೇಳಲಾಗಿದೆ ಹಾಗೂ ಅಪಘಾನಿಸ್ತಾನ ಎಲ್ಲಕ್ಕಿಂತ ಅಶಾಂತ ದೇಶವೆಂದು ಹೇಳಲಾಗಿದೆ. ಈ ಪಟ್ಟಿಯಲ್ಲಿ ಶಾಂತತೆಯ ಸಂದರ್ಭದಲ್ಲಿ ಭಾರತ ೧೩೫ ನೇ ಸ್ಥಾನದಲ್ಲಿದೆ. ಕಳೆದ ವರ್ಷ ಅದು ೧೩೮ ನೇ ಸ್ಥಾನದಲ್ಲಿತ್ತು.

೧. ೨೦೦೮ ರಿಂದ ಪ್ರಾರಂಭವಾಗಿರುವ ಈ ಸೂಚ್ಯಾಂಕದಲ್ಲಿ ಕಳೆದ ೧೫ ವರ್ಷದಿಂದ ಐಸ್‌ಲ್ಯಾಂಡ್ ಶಾಂತತೆಯ ಸಂದರ್ಭದಲ್ಲಿ ಮೊದಲ ಸ್ಥಾನದಲ್ಲಿ ಕಾಯಂ ಆಗಿದೆ. ಈ ವರ್ಷ ನ್ಯೂಜಿಲ್ಯಾಂಡ್ ಎರಡನೇ ಸ್ಥಾನದಲ್ಲಿ ಹಾಗೂ ಐರ್ಲ್ಯಾಂಡ್ ೩ ಹಾಗೂ ಡೆನ್ಮಾರ್ಕ್ ನಾಲ್ಕನೇ ಸ್ಥಾನದಲ್ಲಿದೆ. ಅಶಾಂತ ದೇಶದಲ್ಲಿ ಎಮೆನ್ ೨ ಹಾಗೂ ಸಿರಿಯ ಮೂರನೇ ಸ್ಥಾನದಲ್ಲಿದೆ. ವಿಶೇಷವೆಂದರೆ ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ.

೨. ಯುರೋಪ್ ಜಗತ್ತಿನ ಎಲ್ಲಕ್ಕಿಂತ ಶಾಂತ ಇರುವ ಪ್ರದೇಶ ಎಂದು ಹೇಳಲಾಗಿದೆ. ಯುರೋಪಿನ ೮ ದೇಶ ಶಾಂತತೆಯಲ್ಲಿ ಮೊದಲ ೧೦ ನೇ ಸ್ಥಾನದಲ್ಲಿದೆ.

ಹೇಗೆ ನಡೆಯುತ್ತದೆ ಮೌಲ್ಯಂಕನ !

ವಿಶ್ವಶಾಂತಿ ಸೂಚ್ಯಾಂಕದಲ್ಲಿ ‘ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ ಅಂಡ್ ಪೀಸ್’ನಿಂದ ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ದೇಶ, ಕ್ಷೇತ್ರ ಇವುಗಳ ಶಾಂತಿಯ ಮಟ್ಟದಲ್ಲಿ ಸ್ಥಿತಿಯ ಪ್ರಕಾರ ಅವರಿಗೆ ಅಂಕ ನೀಡಲಾಗುತ್ತದೆ. ಅಂತರ್ಗತ ಮತ್ತು ಅಂತರಾಷ್ಟ್ರೀಯ ಸಂಘರ್ಷ, ಸುರಕ್ಷೆ, ಸಾಮಾಜಿಕ ಸುರಕ್ಷೆ, ಸೈನ್ಯ ಮುಂತಾದ ೨೩ ಮಾನದಂಡಗಳ ಮೂಲಕ ಅದರ ಮೌಲ್ಯಂಕನ ನಡೆಸಲಾಗುತ್ತದೆ.

ಸಂಪಾದಕೀಯ ನಿಲುವು

* ಇದರಿಂದ ಭಾರತದಲ್ಲಿ ಆಶಾಂತತೆ ಇರುವುದು ಗಮನಕ್ಕೆ ಬರುತ್ತದೆ ! ಭಾರತ ಜಾತ್ಯಾತೀತ ಮತ್ತು ಮ. ಗಾಂಧಿ ಇವರ ದೇಶವಾಗಿದ್ದರೂ ದೇಶದಲ್ಲಿ ಶಾಂತತೆ ಇದೆ ಇದನ್ನು ತಿಳಿದುಕೊಳ್ಳಿ ! ಭಾರತವನ್ನು ಶಾಂತಿಪೂರ್ಣ ದೇಶ ಮಾಡುವುದಕ್ಕಾಗಿ ಭಾರತವನ್ನು ‘ಧರ್ಮಧಿಷ್ಟಿತ ದೇಶ’ ಮಾಡುವುದು ಅವಶ್ಯಕವಾಗಿದೆ. ಇಂತಹ ದೇಶದಲ್ಲಿನ ಜನರು ಧರ್ಮಾಚರಣೆಯಾಗಿರುತ್ತಾರೆ ಮತ್ತು ಅದರಿಂದ ತಮ್ಮ ತಮ್ಮಲ್ಲಿಯೇ ಶಾಂತಿ ನಿರ್ಮಾಣವಾಗುತ್ತದೆ !