೨೦೨೧ ರಲ್ಲಿ ವಿಶ್ವದಾದ್ಯಂತ ೧೦ ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ – ವಿಶ್ವಸಂಸ್ಥೆ

ನ್ಯೂಯಾರ್ಕ್ – ವಿಶ್ವಸಂಸ್ಥೆಯ ‘ನಿರಾಶ್ರಿತರ ಏಜೆನ್ಸಿ’ಯ ವಾರ್ಷಿಕ ವರದಿಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಈ ವರದಿಯ ಪ್ರಕಾರ, ಹವಾಮಾನ ಬದಲಾವಣೆ ಮತ್ತು ವಿವಿಧ ವಿಪತ್ತುಗಳಿಂದಾಗಿ ೨೦೨೧ರಲ್ಲಿ ವಿಶ್ವದಾದ್ಯಂತ ೧೦ ಕೋಟಿಗಿಂತಲೂ ಹೆಚ್ಚಿನ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಭಾರತದಲ್ಲಿ ಈ ಸಂಖ್ಯೆಯು ೫೦ ಲಕ್ಷದಷ್ಟಿದೆ ಎಂದು ಅಂದಾಜಿಸಲಾಗಿದೆ. ಹಿಂಸೆ, ಮಾನವೀ ಹಕ್ಕುಗಳ ಉಲ್ಲಂಘನೆ, ಆಹಾರದ ಅಭದ್ರತೆ, ಹವಾಮಾನದ ವೈಪರಿತ್ಯ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಇತರ ತುರ್ತು ಪರಿಸ್ಥಿತಿಗಳು ಇಂತಹ ಬೃಹತ್ ಸ್ಥಳಾಂತರದ ಕಾರಣವಾಗಿದೆ.

ಈ ವರದಿಯ ಪ್ರಕಾರ, ೨೦೨೧ ರಲ್ಲಿ ಚೀನಾದಲ್ಲಿ ೬೦ ಲಕ್ಷ ಮತ್ತು ಫಿಲಿಪೈನ್ಸ್‌ನಲ್ಲಿ ೫೭ ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಬಲವಂತವಾಗಿ ಮನೆಗಳನ್ನು ತೊರೆಯಲ್ಪಟ್ಟವರ ಸಂಖ್ಯೆಯು ಹೆಚ್ಚಾಗಿದೆ ಎಂದು ಈ ವರದಿಯಲ್ಲಿ ಹೇಳಿದೆ.