ಏಷ್ಯಾ ಫುಟಬಾಲ ಕಪ ಸ್ಪರ್ಧೆಯ ಪಂದ್ಯಗಳು.
ಕೊಲಕಾತಾ(ಬಂಗಾಳ) – ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ ೨೦೨೩ ಫುಟಬಾಲ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅಫಘಾನಿಸ್ತಾನ ಭಾರತದ ವಿರುದ್ಧ ಸೋತಿದೆ. ಇದಾದ ಬಳಿಕ ಅಫಘಾನ ಆಟಗಾರರು ಭಾರತದ ಆಟಗಾರರನ್ನು ಹೊಡೆದರು. ಈ ವೇಳೆ ಉಭಯ ಆಟಗಾರರ ನಡುವೆ ಭಾರಿ ಹಣಾಹಣಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಫಘಾನಿಸ್ತಾನದ ವಿರುದ್ಧ ಕೊನೆಯ ಕ್ಷಣದಲ್ಲಿ ಭಾರತವು ಅಫಘಾನಿಸ್ತಾನದ ಆಟಗಾರರ ಮೇಲೆ ತಮ್ಮ ವಿಜಯ ಪಡೆದುದ್ದರಿಂದ ಅಫಘಾನ ಆಟಗಾರರಿಗೆ ತಮ್ಮ ಸೋಲು ಸಹಿಸಲಾರದೆ ಈ ಘಟನೆ ನಡೆದಿದೆ.
WATCH: Ugly fight breaks out between India, Afghanistan players after the Asian Cup qualifier game https://t.co/qWMKAQydyR
— TOI Sports News (@TOISportsNews) June 12, 2022
ಸಂಪಾದಕೀಯ ನಿಲುವು* ಅಫಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ನಂತರ ಅದರ ಆಟಗಾರರು ಕೂಡಾ ತಾಲಿಬಾನ ವೃತ್ತಿಯವರಾಗಿದ್ದಾರೆಂಬುದು ಸೂಚಿಸುತ್ತದೆ. ಈಗ ಫುಟಬಾಲ ವಿಶ್ವ ಸಂಘಟನೆಯು ಅಫಘಾನಿಸ್ತಾನದ ತಂಡವನ್ನು ನಿಷೇಧಿಸಬೇಕು! * ಭಾರತಕ್ಕೆ ಬಂದು ಭಾರತೀಯ ಆಟಗಾರರನ್ನು ಥಳಿಸುವ ಧೈರ್ಯವಿರುವ ಈ ಆಟಗಾರರನ್ನು ಬಂಧಿಸಿ ಭಾರತೀಯ ಜೈಲಿಗೆ ತಳ್ಳಬೇಕು! |