ಪ್ರವಾದಿಯವರ ಅವಮಾನದ ವಿವಾದ ಭಾರತದ ಅಂತರಿಕ ವಿಚಾರ! – ಬಾಂಗ್ಲಾ ದೇಶ

ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಹಸನ ಮಹಮೂದ

ಢಾಕಾ(ಬಾಂಗ್ಲಾದೇಶ)– ಪ್ರವಾದಿ ಮೊಹಮ್ಮದ ಅವರ ಕುರಿತು ಅವಹೇಳನಕಾರಿ ಹೇಳಿಕೆಯ ವಿವಾದವು ಭಾರತದ ಅಂತರಿಕ ವಿಷಯವಾಗಿದೆ. ಹಾಗಾಗಿ ಬಾಂಗ್ಲಾ ದೇಶ ಸರಕಾರ ಪ್ರತಿಕ್ರಿಯಿಸಲು ಯಾವುದೇ ಕಾರಣವಿಲ್ಲ. ಇದು ಬಾಂಗ್ಲಾದೇಶದ ಹೊರಗಿನ ವಿಷಯವಾಗಿದೆ. ಅದು ಭಾರತದ ಪ್ರಶ್ನೆಯೆ ಹೊರತು ಬಾಂಗ್ಲಾದೇಶದ ಪ್ರಶ್ನೆಯಲ್ಲ. ಈ ಬಗ್ಗೆ ನಾವು ಪ್ರತಿಕ್ರಿಯಿಸಲು ಬಯಸುವದಿಲ್ಲ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಹಸನ ಮಹಮೂದ ಹೇಳಿದ್ದಾರೆ. ಢಾಕಾದಲ್ಲಿ ಭಾರತೀಯ ಪತ್ರಕರ್ತರೊಂದಿಗೆ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಂಡ ಭಾರತೀಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ನಾವು ವಿವಾದವನ್ನು ಉಲ್ಬಣಗೊಳಿಸುವದಿಲ್ಲ ಎಂದು ಅವರು ಹೇಳಿದರು.

ಇತರ ಇಸ್ಲಾಮಿಕ ರಾಷ್ಟ್ರಗಳು ಈ ವಿಷಯದಲ್ಲಿ ಭಾರತಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವಾಗ ಬಾಂಗ್ಲಾ ದೇಶವು ರಾಜಿ ನೀತಿಯನ್ನು ಅನುಸರಿಸುತ್ತದೆಯೇ? ಎಂದು ಕೇಳಿದಾಗ ಮಹಮೂದರು ಮುಂದಿನಂತೆ ಹೇಳಿದರು, “ನಾವು ಪ್ರವಾದಿಯವರ ಅವಮಾನವನ್ನು ಎಂದಿಗೂ ಸಹಿಸುವದಿಲ್ಲ; ಅದರೆ ಭಾರತ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದು ಅಲ್ಲಿನ ಕಾನೂನಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಈ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಲಾಗದು.

ಸಂಪಾದಕೀಯ ನಿಲುವು

* ಇದರ ಅರ್ಥ ಭಾರತವು “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸಲ್ಮಾನರು ಅವರ ದೇವಾಲಯಗಳ ಮೇಲೆ ದಾಳಿ ನಡೆಸುವುದು ಬಾಂಗ್ಲಾ ದೇಶದ ಅಂತರಿಕ ವಿವಾದ” ಎಂದು ಭಾರತವು ಹೇಳಬೇಕೆ, ಹಾಗೆ ಆಗುವದಿಲ್ಲ. ಅದು ಹಿಂದೂಗಳ ಮೇಲಾಗಿರುವ ಅತ್ಯಾಚಾರವಾಗಿದೆ. ಅವರದು ವಂಶಸಂಹಾರ ಮಾಡುವ ಪ್ರಯತ್ನವಾಗಿದೆ. ಆದ್ದರಿಂದ ಭಾರತ ಸರಕಾರವು ಯಾವಾಗಲೂ ಈ ಬಗ್ಗೆ ಮಾತನಾಡಬೇಕು ಮತ್ತು ಹಿಂದೂಗಳನ್ನು ರಕ್ಷಿಸಲು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು!