ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದ ಕುಂಭಾಶಿಯ ಶ್ರೀ ಮಹಾಗಣಪತಿ !

ಶ್ರೀ ಗಣೇಶನು ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದನು. ಭೀಮನು ಆ ಖಡ್ಗದಿಂದ ಕುಂಭಾಸುರನನ್ನು ವಧಿಸಿ ಅಗಸ್ತಿಋಷಿಗಳ ಯಜ್ಞದಲ್ಲಿನ ವಿಘ್ನವನ್ನು ದೂರಗೊಳಿಸಿದನು. ‘ಕುಂಭಾಶಿ ಹೆಸರು ಕುಂಭಾಸುರನ ಹೆಸರಿನಿಂದ ಪ್ರಚಲಿತವಾಗಿರಬಹುದು’, ಎನ್ನುತ್ತಾರೆ.

ಶ್ರೀರಂಗಪಟ್ಟಣದ ಆಂಜನೇಯ ದೇವಸ್ಥಾನವನ್ನು ಕೆಡವಿ ಜಮಾ ಮಸೀದಿಯನ್ನು ನಿರ್ಮಿಸಿದ್ದ ಟಿಪು !

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಗರದ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಆಂಜನೇಯ ದೇವಸ್ಥಾನವಿತ್ತು. ಟಿಪ್ಪು ಸುಲ್ತಾನ್ ಅದನ್ನು ಕೆಡವಿ ಅಲ್ಲಿ ದೇವಾಲಯದ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯು ೧೯೩೫ ರಲ್ಲಿ ವರದಿ ಮಾಡಿರುವ ಮಾಹಿತಿ ಈಗ ಬೆಳಕಿಗೆ ಬಂದಿದೆ.

‘ಭಾರತದಲ್ಲಿರುವ ಮುಸ್ಲಿಮರು ಮೊಘಲರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ; ಆದರೆ ಮೊಘಲ್ ಬಾದಶಾಹಗಳ ಪತ್ನಿ ಯಾರಾಗಿದ್ದರು ?’(ಅಂತೆ) – ಅಸಾದುದ್ದೀನ್ ಓವೈಸಿ ಪ್ರಶ್ನೆ

ಭಾರತದಲ್ಲಿನ ಮುಸ್ಲಿಮರು ಮೊಘಲರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ; ಆದರೆ ಮೊಘಲ್ ಬಾದಶಾಹಗಳ ಪತ್ನಿ ಯಾರಾಗಿದ್ದರು ? ಎಂದು ಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಶ್ನೆಯನ್ನು ಕೇಳಿದ್ದಾರೆ.

`ಕುತುಬ್ ಮಿನಾರ್ ಅನ್ನು ದೇವಾಲಯಗಳ ಅವಶೇಷಗಳಿಂದ ನಿರ್ಮಿಸಲಾಗಿದೆ!'(ಅಂತೆ) – ಇತಿಹಾಸಕಾರ ಇರ್ಫಾನ್ ಹಬೀಬ್

ಕುತುಬ್ ಮಿನಾರ್ ಯಾವುದೇ ಅವಶೇಷಗಳಿಂದ ನಿರ್ಮಿತವಾಗಿರದೇ, ಇದು ಹಿಂದೆ ಹಿಂದೂ ರಾಜನಿಂದ ನಿರ್ಮಿಸಲ್ಪಟ್ಟ ಮೂಲ ರಚನೆಯಾಗಿದೆ. ಅದರ ಪ್ರದೇಶದಲ್ಲಿ ೨೭ ದೇವಾಲಯಗಳನ್ನು ಕೆಡವಲಾಗಿದೆ ಮತ್ತು ಆ ಅವಶೇಷಗಳಿಂದ ಮಸೀದಿಯನ್ನು ನಿರ್ಮಿಸಲಾಗಿದೆ

ದೆಹಲಿಯಲ್ಲಿನ `ಔರಂಗಜೇಬ ಲೇನ್’ಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಲು ಭಾಜಪದ ಮನವಿ

ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು!

ಕೇಂದ್ರ ಸರಕಾರ ಕುತುಬ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣನ ಬೇಡಿಕೆ

ಕುತುಬ ಮಿನಾರ್ ಮತ್ತು ತಾಜಮಹಲ ಸಧ್ಯಕ್ಕೆ ಭಾರತ ಸರಕಾರದ ಅಧೀನದಲ್ಲಿವೆ. ಆದ್ದರಿಂದ ಸರಕಾರ ಕುತುಬ್ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನ ನಾಯಕ ಪ್ರಮೋದ ಕೃಷ್ಣನ್ ಇವರು ಇಟ್ಟಿದ್ದಾರೆ.

ಮೊದಲನೇ ದಿನ ಜ್ಞಾನವಾಪಿ ಮಸೀದಿಯ ಶೇ. ೪೦ರಷ್ಟು ಸಮೀಕ್ಷೆ ಪೂರ್ಣ !

ಇಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ಮೇ ೧೪ರಂದು ಬೆಳಿಗ್ಗೆ ೮ ರಿಂದ ಮದ್ಯಾಹ್ನ ೧೨ರ ವರೆಗೆ ನಡೆಸಲಾಯಿತು. ಈ ಸಮೀಕ್ಷೆಯು ಶೇ. ೪೦ರಷ್ಟು ಪೂರ್ಣವಾಗಿದೆ. ಉಳಿದ ಸಮೀಕ್ಷೆಯು ಮೇ ೧೫ರಂದು ಪುನಃ ನಡೆಯಲಿದೆ. ಈ ಸಮೀಕ್ಷೆಯ ವರದಿಯನ್ನು ಮೇ ೧೭ರಂದು ನ್ಯಾಯಾಲಯದಲ್ಲಿ ಸಾದರಪಡಿಸಬೇಕಿದೆ.

ಜ್ಞಾನವಾಪಿ ಮಸೀದಿಯ ಪರಿಶೀಲನೆ ನಡೆಯುವುದು

ಇಲ್ಲಿಯ ದಿವಾನಿ ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಸ್ಥಾನದ ಪರಿಶೀಲನೆ ಮತ್ತು ಚಿತ್ರೀಕರಣ ಮಾಡುವ ಆದೇಶ ನೀಡಲಾಗಿತ್ತು. ಇದರಲ್ಲಿ ಶೃಂಗಾರ ಗೌರಿ ದೇವಸ್ಥಾನದ ಪರಿಶೀಲನೆ ಪೂರ್ಣಗೊಂಡಿದೆ.

ಭಾರತವು ‘ಸನಾತನ ಧರ್ಮ’ದ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸಬೇಕು ! – ಕೇರಳದ ರಾಜ್ಯಪಾಲ ಆರೀಫ ಖಾನ

ಭಾರತದಲ್ಲಿ ಯೋಗ್ಯ ಶಿಕ್ಷಣದ ಪ್ರಸಾರ ಮಾಡಿ ಭಾರತದ ಪ್ರಾಚೀನ ಸಂಸ್ಕೃತಿ ಹಾಗೂ ಸನಾತನ ಧರ್ಮದ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸುವುದು ಆವಶ್ಯಕವಾಗಿದೆ. ಈ ದಿಶೆಯಲ್ಲಿ ಹೋಗುವುದೆಂದರೆ ನಮಗೆ ಹಿಂದೆ ಹೋಗಲಿಕ್ಕಿದೆ ಎಂದಾಗಿರದೇ ಸನಾತನ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸುವುದಾಗಿದೆ.

‘ಕಾಮಸೂತ್ರ’ದ ಭೂಮಿಯಲ್ಲಿ ಲೈಂಗಿಕತೆಯ ಬಗ್ಗೆ ಸಾಮಾಜಿಕ ಚರ್ಚೆ ಮಾಡುವುದನ್ನು ಅಶ್ಲೀಲವೆಂದು ತಿಳಿಯುವುದು ಅಯೋಗ್ಯವಾಗಿದೆ !’ (ಅಂತೆ)

ಇಂದಿಗೂ ಹೆಚ್ಚಿನ ಹಿಂದೂ ಸಮಾಜವು ಧರ್ಮಾಚರಣೆಯನ್ನು ಮಾಡುತ್ತದೆ. ಹೀಗಿರುವಾಗ ಪಾಶ್ಚಾತ್ಯ ವಿಚಾರಸರಣಿಯನ್ನು ಹರಡಲು ಪ್ರಯತ್ನಿಸುವ ಪ್ರವೃತ್ತಿಗಳಿಗೆ ಸಮಯಕ್ಕೆ ಸರಿಯಾಗಿ ಪಾಠ ಕಲಿಸಲು ಸರಕಾರವು ಅವರ ವಿರುದ್ಧ ಕಾರ್ಯಾಚರಣೆಯನ್ನು ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !