ವಾಸ್ತುಶಾಸ್ತ್ರ
ಸಾವಿರಾರು ವರ್ಷಗಳ ಹಿಂದೆ ನಿಸರ್ಗ, ವಾಸ್ತು ಹಾಗೂ ಶರೀರ ಇವುಗಳ ನಡುವಿನ ಇಂಧನದ ಸಮತೋಲನವನ್ನು ವಾಸ್ತುಶಾಸ್ತ್ರದ ಮಾಧ್ಯಮದಿಂದ ಸಾಧಿಸುವ ಕಲೆಯು ಶ್ರೇಷ್ಠರಾದ ದ್ರಷ್ಟಾರರಿಗೆ ತಿಳಿದಿತ್ತು. ಮನೆಯಲ್ಲಿನ ಪ್ರತಿಯೊಂದು ವಸ್ತು ಹೇಗಿರಬೇಕು ಹಾಗೂ ಅದನ್ನು ಎಲ್ಲಿಡಬೇಕು, ಎಂಬುದರ ಬಗ್ಗೆ ಶ್ರೇಷ್ಠ ಹಿಂದೂ ವಾಸ್ತುಶಾಸ್ತ್ರದಲ್ಲಿ ಸೂಕ್ಷ್ಮವಾಗಿ ವಿಚಾರ ಮಾಡಲಾಗಿದೆ.