ಭಾರತವು ‘ಸನಾತನ ಧರ್ಮ’ದ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸಬೇಕು ! – ಕೇರಳದ ರಾಜ್ಯಪಾಲ ಆರೀಫ ಖಾನ

ಹಿಂದೂ ಧರ್ಮದ ವಿಷಯದಲ್ಲಿ ಶಿಕ್ಷಣ ನೀಡುವುದು ಆವಶ್ಯಕವಾಗಿರುವುದನ್ನು ಪ್ರತಿಪಾದಿಸಿದರು !

ತಿರುವನಂತಪುರಮ್‌ (ಕೇರಳ) – ಭಾರತದಲ್ಲಿ ಯೋಗ್ಯ ಶಿಕ್ಷಣದ ಪ್ರಸಾರ ಮಾಡಿ ಭಾರತದ ಪ್ರಾಚೀನ ಸಂಸ್ಕೃತಿ ಹಾಗೂ ಸನಾತನ ಧರ್ಮದ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸುವುದು ಆವಶ್ಯಕವಾಗಿದೆ. ಈ ದಿಶೆಯಲ್ಲಿ ಹೋಗುವುದೆಂದರೆ ನಮಗೆ ಹಿಂದೆ ಹೋಗಲಿಕ್ಕಿದೆ ಎಂದಾಗಿರದೇ ಸನಾತನ ಸಿದ್ಧಾಂತಗಳನ್ನು ಪುನರುಜ್ಜೀವಿತಗೊಳಿಸುವುದಾಗಿದೆ. ಇದು ಶಿಕ್ಷಣದ ಹೊರತು ಸಾಧ್ಯವಿಲ್ಲ, ಎಂಬ ಹೇಳಿಕೆಯನ್ನು ಕೇರಳದ ರಾಜ್ಯಪಾಲರಾದ ಆರೀಫ ಮಹಂಮದ ಖಾನರವರು ನೀಡಿದ್ದಾರೆ. ಅವರು ಉತ್ತರಪ್ರದೇಶದ ಶಹಜಹಾಂಪೂರ ಜಿಲ್ಲೆಯಲ್ಲಿ ಒಂದು ಖಾಸಗೀ ಶಾಲೆಯ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಖಾನರವರು ಮಾತನಾಡುತ್ತ ಹೀಗೆ ಹೇಳಿದರು …

೧. ಸ್ವಾಮೀ ವಿವೇಕಾನಂದರು, ಮಾನವೀ ಜೀವನದ ಉದ್ದೇಶವು ಜ್ಞಾನಪ್ರಾಪ್ತಿ ಮಾಡುವುದಾಗಿದ್ದು ನಮೃತೆಯು ಈ ಜ್ಞಾನದ ಪರಿಣಾಮವಾಗಿದೆ. ನಮೃತೆಯಿರುವ ವ್ಯಕ್ತಿಯನ್ನು ಯಾರೂ ಕಡಿಮೆ ಎಂದು ತಿಳಿಯಲು ಸಾಧ್ಯವಿಲ್ಲ.

೨. ಭಾರತವು ವಿವಿಧ ಸಮುದಾಯಗಳ ಸಮೂಹವಾಗಿದೆ. ಇಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಲಾಗುತ್ತದೆ. ನಮ್ಮ ದೇಶವು ಯಾವಾಗಲೂ ಸತ್ಯ ಮತ್ತು ಅಹಿಂಸೆಯನ್ನು ಪುರಸ್ಕರಿಸುತ್ತದೆ. ಈ ಸಂಗತಿಯನ್ನು ಎಲ್ಲರೂ ಗಮನಕ್ಕೆ ತೆಗೆದುಕೊಳ್ಳಬೇಕು.

೩. ಇಸ್ಲಾಂ, ಯಹೂದಿ ಹಾಗೂ ಕ್ರೈಸ್ತರ ನಡುವೆ ಯಾವುದೇ ರೀತಿಯ ಭೇದಭಾವವಾಗದಿರುವ ಏಕೈಕ ದೇಶ ಭಾರತವಾಗಿದೆ ಮೆದಿನಾದ ನಂತರ ಮೊದಲ ಮಸೀದಿಯನ್ನು ಭಾರತದಲ್ಲಿಯೇ ನಿರ್ಮಿಸಲಾಗಿತ್ತು ಮತ್ತು ಅದನ್ನು ಓರ್ವ ಹಿಂದೂ ರಾಜನು ನಿರ್ಮಿಸಿದ್ದನು.