ಜ್ಞಾನವಾಪಿ ಮಸೀದಿಯ ಪರಿಶೀಲನೆ ನಡೆಯುವುದು

ಇಂದು ಹೊಸ ತಾರೀಖು ನಿರ್ಧರಿಸಲಿರುವ ನ್ಯಾಯಾಲಯ

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ದಿವಾನಿ ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಸ್ಥಾನದ ಪರಿಶೀಲನೆ ಮತ್ತು ಚಿತ್ರೀಕರಣ ಮಾಡುವ ಆದೇಶ ನೀಡಲಾಗಿತ್ತು. ಇದರಲ್ಲಿ ಶೃಂಗಾರ ಗೌರಿ ದೇವಸ್ಥಾನದ ಪರಿಶೀಲನೆ ಪೂರ್ಣಗೊಂಡಿದೆ. ಆದರೆ ಜ್ಞಾನವಾಪಿ ಮಸೀದಿಯ ಪರಿಶೀಲನೆಯ ಸಮಯದಲ್ಲಿ ಸ್ಥಳೀಯ ಮುಸಲ್ಮಾನರು ವಿರೋಧಿಸಿರುವುದರಿಂದ ಅದು ಮಾಡಲು ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ಮೇ ೯ ರಂದು ಬೆಳಗ್ಗೆ ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಆಯುಕ್ತ, ಮತ್ತು ಎರಡೂ ಪಕ್ಷಗಳ ನ್ಯಾಯವಾದಿಗಳು ಇವರು ಮಾಹಿತಿ ನೀಡಿದ ನಂತರ, ನ್ಯಾಯಾಲಯವು ಪರಿಶೀಲನೆ ಮಾಡಲಾಗುವುದೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಹಾಗೂ ಪರಿಶೀಲನೆ ನಡೆಸುವ ದಿನಾಂಕವನ್ನು ಇಂದು (ಮೇ ೧೦ ರಂದು) ಹೇಳಲಾಗುವುದು ಎಂದು ತಿಳಿಸಿದೆ.

ಮೊಕದ್ದಮೆಯಲ್ಲಿ ಹಿಂದೂ ಪಕ್ಷದಿಂದ ರಾಕಿ ಸಿಂಹ ಇವರು ಹಿಂದೆ ಸರಿದಿರುವ ವಾರ್ತೆ ಪ್ರಸಿದ್ಧವಾಗಿತ್ತು. ಆದರೆ ಅವರು ಮೇ ೯ ರಂದು ಸ್ಪಷ್ಟಪಡಿಸಿದರು ಏನೆಂದರೆ, ಅವರು ಮೊಕದ್ದಮೆಯಿಂದ ಹಿಂದೆ ಸರಿದಿಲ್ಲ. ರಾಕಿ ಸಿಂಹ ಇವರ ಜೊತೆಗೆ ಸೀತಾ ಸಾಹು, ಮಂಜು ವ್ಯಾಸ, ಲಕ್ಷ್ಮೀದೇವಿ ಮತ್ತು ರೇಖ ಪಾಠಕ ಇವರು ಕಕ್ಷಿದಾರರಾಗಿದ್ದಾರೆ.