ಹೊಸ ದೆಹಲಿ – ಕುತುಬ್ ಮಿನಾರ್‌ನ ಇತಿಹಾಸವನ್ನು ಕುತುಬ್ ಮಿನಾರ್ ಸ್ವತಃ ಹೇಳುತ್ತದೆ ಮತ್ತು ಅದರ ಮೇಲೆ ಎಲ್ಲವನ್ನೂ ಬರೆಯಲಾಗಿದೆ. ಇದು ದೇವಾಲಯಗಳ ಅವಶೇಷಗಳಿಂದ ಕಟ್ಟಲ್ಪಟ್ಟಿದೆ. ಯಾವುದರ ಕೆಳಗೆ ಏನಿದೆ ಎಂದು ಯಾರಿಗೆ ತಿಳಿದಿದೆ ? ಜಾಮಾ ಮಸೀದಿಯ ಕೆಳಗೆ ಏನೋ ಇದೆ ಎನ್ನುತ್ತಾರೆ. ಈಗ ಅಂತಹ ಎಲ್ಲಾ ರಚನೆಗಳನ್ನು ನಾಶಮಾಡಿ. ತಾಜ್ ಮಹಲ್ ಮತ್ತು ಕೆಂಪು ಕೋಟೆಯನ್ನು ನಾಶಮಾಡಿ. ಜಾಮಾ ಮಸೀದಿಯನ್ನು ಧ್ವಂಸ ಮಾಡಿ ಮತ್ತು ನಿಮಗೆ ಏನು ಸಿಗುತ್ತದೆ ಅದು ಬೆಳಕಿಗೆ ಬರುತ್ತದೆ, ಎಂದು ಲೇಖಕ ಮತ್ತು ಇತಿಹಾಸಕಾರ ಎಸ್. ಇರ್ಫಾನ್ ಹಬೀಬ್ ಅವರು `ಆಜ್ ತಕ್’ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
Prominent historian Irfan Habib in an exclusive interview with ETV Bharat tried to put facts straight regarding the destruction of temples at #Varanasi and #Mathura by Mughal emperor Aurangzeb.#Mughals #GyanvapiMosque #GyanvapiSurvey https://t.co/wbLM9rTgFM
— ETV Bharat (@ETVBharatEng) May 23, 2022
ಇರ್ಫಾನ್ ಹಬೀಬ್ ಮಂಡಿಸಿದ ಸೂತ್ರಗಳು
ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಯಿತು !
ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿರುವುದನ್ನು ಇತಿಹಾಸ ಎಂದಿಗೂ ಅಲ್ಲಗಳೆಯುವುದಿಲ್ಲ. ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿವೆ. ಈಗ ಮಾಡಲಾಗುತ್ತಿರುವ ದಾವೆಗಳು ಮೊದಲ ಬಾರಿಗೆ ಮುಂದೆ ಬರುತ್ತಿವೆ. ಅವೆಲ್ಲವೂ ಹಸಿಸುಳ್ಳು! ಸಂಪೂರ್ಣ ಕಟ್ಟಡವನ್ನು ನೆಲಸಮ ಮಾಡಬೇಕು. ಎಲ್ಲವೂ ಹೊರಬರುತ್ತದೆ. ಇಷ್ಟೆಲ್ಲಾ ವಾದ ಮಾಡುವ ಅಗತ್ಯವಿಲ್ಲ. (ಇದೆಲ್ಲವನ್ನು ಮುಸ್ಲಿಂ ಪಕ್ಷಗಳಿಗೆ ಹಬೀಬ್ ಏಕೆ ಹೇಳುತ್ತಿಲ್ಲ ? – ಸಂಪಾದಕರು)
ಔರಂಗಜೇಬ್ ತನ್ನ ಅಧಿಕಾರವನ್ನು ತೋರಿಸಲು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸುತ್ತಿದ್ದನು !
ಎಲ್ಲವನ್ನೂ ಮೊದಲ ಬಾರಿಗೆ ಹೇಳಲಾಗುತ್ತಿದೆ, ಈ ದಾವೆ ಸುಳ್ಳಾಗಿದೆ. ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಇತಿಹಾಸಕಾರರಲ್ಲಿ ಪುರಾವೆಗಳಿವೆ. ನೀವು ಇತಿಹಾಸವನ್ನು ನೋಡಿದರೆ, ಔರಂಗಜೇಬನ ಅನೇಕ ಫರ್ಮಾನುಗಳು (ಕಟ್ಟಳೆ) ಇವೆ ಎಂದು ನೀವು ಗಮನಿಸಬಹುದು, ಅದರಲ್ಲಿ ದೇವಾಲಯಗಳನ್ನು ಕೆಡವಲಾಯಿತು ಮತ್ತು ಅವುಗಳ ಸ್ಥಳದಲ್ಲಿ ಮಸೀದಿಗಳನ್ನು ನಿರ್ಮಿಸಲಾಯಿತು ಎಂದು ಇತಿಹಾಸಕಾರರು ಬರೆಯುತ್ತಾರೆ; ಏಕೆಂದರೆ ಔರಂಗಜೇಬನು ತನ್ನ ಅಧಿಕಾರವನ್ನು ತೋರಿಸಲು ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟುತ್ತಿದ್ದನು. (ಔರಂಗಜೇಬನು ದೇವಾಲಯಗಳನ್ನು ಕೆಡವಿದ್ದು ಅಧಿಕಾರವನ್ನು ತೋರಿಸಲು ಅಲ್ಲ, ಆದರೆ ಹಿಂದೂಗಳ ಮೇಲೆ ದಾಳಿ ಮಾಡಲು ಮತ್ತು ಅವರಿಗೆ ಕಿರುಕುಳ ನೀಡಲು ಎಂಬುದೇ ನಿಜವಾದ ಇತಿಹಾಸವಾಗಿದೆ ! – ಸಂಪಾದಕರು)
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವಿಲ್ಲ, ಕಾರಂಜಿ ಇದೆ !
ಅದು ಶಿವಲಿಂಗ ಆಗಿರಲು ಹೇಗೆ ಸಾಧ್ಯ. ೪೦೦ ವರ್ಷಗಳಿಂದ ಜ್ಞಾನವಾಪಿ ಮಸೀದಿಯು ಇರುವಾಗ ಅದು ಹೇಗೆ ಉಳಿಯಲು ಸಾಧ್ಯ. ಮುಸ್ಲಿಮರು ಬಯಸಿದರೆ, ಅವರು ಶಿವಲಿಂಗವನ್ನು ನಾಶಪಡಿಸಬಹುದಿತ್ತು, ಅಂದರೆ ಮುಸ್ಲಿಮರು ಅದನ್ನು ಗೌರವಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. (ಮೊಘಲರಿಗೆ ಆ ಶಿವಲಿಂಗವನ್ನು ಧ್ವಂಸ ಮಾಡಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಕೈಕಾಲು ತೊಳೆಯುವ ಮುಖ ತೊಳೆಯುವ ಸ್ಥಳವನ್ನು ಮಾಡಿ ಶಾಶ್ವತವಾಗಿ ಅವಮಾನಿಸಬಹುದು ಎಂಬ ಸ್ಥಿತಿ ನಿರ್ಮಾಣ ಮಾಡಿದರು, ಇದು ಇತಿಹಾಸ ಮತ್ತು ವರ್ತಮಾನವಾಗಿದೆ, ಹಬೀಬ್ ಅದನ್ನು ಏಕೆ ಹೇಳುವುದಿಲ್ಲ ? – ಸಂಪಾದಕರು) ಅದು ಶಿವಲಿಂಗ ಅಲ್ಲ ಕೇವಲ ಕಾರಂಜಿ ಅಷ್ಟೇ. ದೊಡ್ಡ ಮಸೀದಿಗಳಲ್ಲಿ ಕಾರಂಜಿಗಳು ಎಲ್ಲೆಡೆ ಕಂಡುಬರುತ್ತವೆ. ಮಸೀದಿಯಲ್ಲಿ ವಜುಗಾಗಿ (ನಮಾಜ್ ಮಾಡುವ ಮೊದಲು ಕೈಕಾಲು ತೊಳೆಯುವುದು) ಸ್ಥಳವನ್ನು ಮಾಡಲಾಗಿದೆ. ಆಲಂಕಾರಿಕ ವಸ್ತುಗಳೆಂದು ಕಾರಂಜಿಗಳನ್ನು ಅಳವಡಿಸಲಾಗಿದೆ. (೪೦೦ ವರ್ಷಗಳ ಹಿಂದೆ ಕಾರಂಜಿ ಇತ್ತೇ ? ಆಗ ವಿದ್ಯುತ್ ಇತ್ತೇ ? ಕಾರಂಜಿ ಅಳವಡಿಸುವ ಬಗ್ಗೆ ಜ್ಞಾನವಾಪಿಯ ಶಿವಲಿಂಗದ ಬಳಿ ಏನೂ ಸಿಕ್ಕಿಲ್ಲ ಎಂದು ಹಬೀಬ್ ಏಕೆ ಹೇಳುವುದಿಲ್ಲ ? – ಸಂಪಾದಕರು)
ಸಂಪಾದಕೀಯ ನಿಲುವುಕುತುಬ್ ಮಿನಾರ್ ಯಾವುದೇ ಅವಶೇಷಗಳಿಂದ ನಿರ್ಮಿತವಾಗಿರದೇ, ಇದು ಹಿಂದೆ ಹಿಂದೂ ರಾಜನಿಂದ ನಿರ್ಮಿಸಲ್ಪಟ್ಟ ಮೂಲ ರಚನೆಯಾಗಿದೆ. ಇತಿಹಾಸಕಾರರು ಮತ್ತು ಪುರಾತತ್ವಶಾತಜ್ಞರು ಇದನ್ನು`ಸೂರ್ಯಸ್ತಂಭ’ ಎಂದು ಕರೆಯುತ್ತಾರೆ. ಅದರ ಪ್ರದೇಶದಲ್ಲಿ ೨೭ ದೇವಾಲಯಗಳನ್ನು ಕೆಡವಲಾಗಿದೆ ಮತ್ತು ಆ ಅವಶೇಷಗಳಿಂದ ಮಸೀದಿಯನ್ನು ನಿರ್ಮಿಸಲಾಗಿದೆ ಇದು ಇತಿಹಾಸವಾಗಿದೆ ಇದನ್ನು ಹಬೀಬ್ ಏಕೆ ಹೇಳುವುದಿಲ್ಲ ? |