ದೆಹಲಿಯಲ್ಲಿನ `ಔರಂಗಜೇಬ ಲೇನ್’ಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಲು ಭಾಜಪದ ಮನವಿ

ನವದೆಹಲಿ – ಇಲ್ಲಿನ `ಔರಂಗಜೇಬ ಲೇನ್’ ಎಂದು ಬರೆದಿರುವ ಫಲಕದ ಮೇಲೆ ಭಾರತೀಯ ಜನತಾ ಯುವಾ ಮೋರ್ಚಾದ ಕಾರ್ಯಕರ್ತರು `ಬಾಬಾ ವಿಶ್ವನಾಥ ಮಾರ್ಗ’ ಎಂದು ಬರೆದ ಭಿತ್ತಿಪತ್ರವನ್ನು ಅಂಟಿಸಿದ್ದಾರೆ. `ಔರಂಗಜೇಬನು ದೇಶದ ಮೇಲಿನ ಕಪ್ಪು ಕಲೆಯಾಗಿದ್ದಾನೆ’ ಎಂಬ ಹೇಳಿಕೆಯನ್ನು ದೆಹಲಿಯ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾದ ವಾಸು ರಖಡರವರು ನೀಡಿದ್ದಾರೆ.

ವಾಸು ರಖಡರವರು ಮಾತನಾಡುತ್ತ `ಔರಂಗಜೇಬನಂತಹ ಆಕ್ರಮಣಕಾರನು ನಮ್ಮ ದೇವತೆಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾನೆ. ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಒಂದು ಶಿವಲಿಂಗವಿತ್ತು. ಇಂದು ನಾವು `ಔರಂಗಜೇಬ ಲೇನ್’ನ್ನು `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಬೇಕೆಂದು ಮನವಿ ಮಾಡಲು ಬಂದಿದ್ದೇವೆ. ದೆಹಲಿಯ ಸರಕಾರವು ಈ ರಸ್ತೆಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಬೇಕಾಗಿ ನಾವು ಇಚ್ಛಿಸುತ್ತೇವೆ. ಮೊಗಲ ಆಕ್ರಮಣಕಾರರು ನಮ್ಮ ದೇವತೆಗಳ ದೇವಸ್ಥಾನಗಳನ್ನು ಕೆಡವಿರುವುದು ಸಂಪೂರ್ಣ ಜಗತ್ತಿಗೇ ತಿಳಿದಿದೆ. ಅವರ ಇತಿಹಾಸವನ್ನು ನಮಗೆ ಕೊನೆಗಾಣಿಸಲಿಕ್ಕಿದೆ. ಈ ಹೆಸರನ್ನು ಇತಿಹಾಸದ ಯಾವುದೇ ಹಾಳೆಯ ಮೇಲೆ, ಯಾವುದೇ ರಸ್ತೆಯ ಮೇಲೆ ಬರೆಯಬೇಕೆಂದು ನಮಗೆ ಅನಿಸುವುದಿಲ್ಲ’ ಎಂದು ಹೇಳಿದರು.

ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು, ಎಂದು ಜನತೆಗೆ ಅನಿಸುತ್ತದೆ !-ಸಂಪಾದಕರು