ಹೊಸ ದೆಹಲಿ – ಕುತುಬ ಮಿನಾರ್ ಮತ್ತು ತಾಜಮಹಲ ಸಧ್ಯಕ್ಕೆ ಭಾರತ ಸರಕಾರದ ಅಧೀನದಲ್ಲಿವೆ. ಆದ್ದರಿಂದ ಸರಕಾರ ಕುತುಬ್ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನ ನಾಯಕ ಪ್ರಮೋದ ಕೃಷ್ಣನ್ ಇವರು ಇಟ್ಟಿದ್ದಾರೆ. ನಾವು ದೇಶದ ಜೊತೆಗೆ ಇದ್ದೇವೆ ಇದನ್ನು ಸಹ ಅವರು ಸ್ಪಷ್ಟಪಡಿಸಿದರು. ಕುತುಬ್ ಮಿನಾರಿಗೆ ವಿಷ್ಣು ಸ್ತಂಭ ಮತ್ತು ತಾಜಮಹಲಿಗೆ ತೇಜೋಮಹಲ್ ಘೋಷಿಸಲು ಹಿಂದೂ ಸಂಘಟನೆಗಳಿಂದ ಬೇಡಿಕೆಯಿದೆ. ಕಳೆದ ವಾರ ತಾಜಮಹಲಿನ ೨೨ ಕೋಣೆಗಳು ತೆರೆಯುವ ಮನವಿ ದಾಖಲಿಸಲಾಗಿದೆ.
#PramodKrishnam | कांग्रेस नेता प्रमोद कृष्णम का बड़ा बयान -“काशी में शिवलिंग नहीं मिलेगा तो कहां मिलेगा”#PramodKrishnam #Congress #AcharyaKrishnam #IndiaTV #gyanwapimasjid #GyanvapiMosque #kashi #KashiVishwanath #GyanwapiSurvey pic.twitter.com/GZl9FhnUUT
— India TV Hindi (@IndiaTVHindi) May 17, 2022
ಜ್ಞಾನವ್ಯಾಪಿ ವಿಷಯದಲ್ಲಿ ಪ್ರಮೋದ್ ಕೃಷ್ಣನ್ ಇವರು, ಜ್ಞಾನವ್ಯಾಪಿಯ ಸೂತ್ರ ಶ್ರದ್ಧೆ ಮತ್ತು ಭಾರತೀಯ ಜನರ ಭಾವನೆಗೆ ಅಂಟಿಕೊಂಡಿದೆ. ಅದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಈವರೆಗೆ ಶಿವಲಿಂಗ ಏಕೆ ಬಚ್ಚಿಡಲಾಯಿತು ಮತ್ತು ಯಾರು ಬಚ್ಚಿಟ್ಟರು ? ಹಾಗೆ ನೋಡಿದರೆ ಸಾಕ್ಷಿಯ ಆವಶ್ಯಕತೆ ಇಲ್ಲ. ಆದರೆ ನ್ಯಾಯ ವ್ಯವಸ್ಥೆ ಏನು ತೀರ್ಮಾನಿಸುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ ಅಧಿಕಾರದಲ್ಲಿರುವಾಗ ಅವರು ಹೀಗೆ ಏಕೆ ಮಾಡಲಿಲ್ಲ ಮತ್ತು ಕೃಷ್ಣನ್ ಇವರು ಇಷ್ಟು ವರ್ಷ ಈ ಬೇಡಿಕೆ ಏಕಿಡಲಿಲ್ಲ ? |