ವಿವಾಹಿತ ಮಹಿಳೆಯೊಂದಿಗಿನ ವಾಸ್ತವ್ಯವು ‘ಲಿವ್ ಇನ್’ ಅಲ್ಲ; ವ್ಯಭಿಚಾರದ ಅಪರಾಧವಾಗಿದೆ! – ಅಲಹಾಬಾದ್ ಉಚ್ಚ ನ್ಯಾಯಾಲಯ

ವಿವಾಹವಾಗಿರುವಾಗ ಇತರ ಪುರುಷರೊಂದಿಗೆ ಪತಿ-ಪತ್ನಿಯಂತೆ ವಾಸಿಸುವುದು ‘ಲಿವ್ ಇನ್ ರಿಲೆಶನ್’ ಎಂದಾಗುವುದಿಲ್ಲ. ಅದು ವ್ಯಭಿಚಾರ ಮಾಡಿದಂತಹ ಅಪರಾಧವಾಗಿದೆ. ಇದಕ್ಕಾಗಿ ಪುರುಷರು ಅಪರಾಧಿಗಳಾಗುತ್ತಾರೆ ಎಂದು ಇಲ್ಲಿನ ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾಜಿ ಮಹಿಳಾ ನ್ಯಾಯಮೂರ್ತಿಗಳು ರಾಜ್ಯಪಾಲ ಪದವಿಯನ್ನು ಪಡೆಯಲು ೮ ಕೋಟಿ ೮೦ ಲಕ್ಷ ರೂಪಾಯಿಗಳ ಲಂಚ ನೀಡಿದ್ದರು!

ಲಂಚಗುಳಿತನದ ಪ್ರಕರಣದಲ್ಲಿ ಸದ್ಯ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎಮ್.ಪಿ ಇವರು ೧೯ ಜನವರಿಯಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮಹಿಳಾ ನ್ಯಾಯಾಧೀಶರ ವಿರುದ್ಧ ಕೇಂದ್ರೀಯ ಅಪರಾಧ ತನಿಖಾ ದಳಕ್ಕೆ ದೂರನ್ನು ದಾಖಲಿಸಿದ್ದಾರೆ.

ರಾಜ್ಯ ಸರಕಾರವು ಅನ್ವಯಿಸಿದ ಗೋಹತ್ಯೆ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ ಉಚ್ಚ ನ್ಯಾಯಾಲಯ

ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರವು ಅನ್ವಯಗೊಳಿಸಿದ ಗೋಹತ್ಯಾ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ ಎಂದು ನಿರ್ಧರಿಸಿದೆ. ನ್ಯಾಯಾಲಯದ ಈ ನಿರ್ಣಯದಿಂದ ನಿಷೇಧದ ಕಾರ್ಯಾಚರಣೆಯನ್ನು ಮಾಡಿಕೊಳ್ಳಲು ಸರಕಾರಕ್ಕೆ ಉಂಟಾಗಿದ್ದ ಅಡಚಣೆಯು ಸಹ ದೂರವಾಗಿದೆ.

ಹರಿದ್ವಾರ ಕುಂಭಮೇಳದಲ್ಲಿ ಆರೋಗ್ಯವಿಷಯದ ವ್ಯವಸ್ಥೆಯ ಸಿದ್ಧತೆಯ ಬಗ್ಗೆ ಅಹವಾಲನ್ನು ಕೇಳಿದ ಉತ್ತರಾಖಂಡ ಉಚ್ಚ ನ್ಯಾಯಾಲಯ

ಉತ್ತರಾಖಂಡ ಉಚ್ಚ ನ್ಯಾಯಾಯಲವು ಕೊರೊನಾ ಸಂಕಟದ ಹಿನ್ನೆಲೆಯಲ್ಲಿ ಹರಿದ್ವಾರ ಕುಂಭಮೇಳಕ್ಕಾಗಿ ವೆಂಟಿಲೇಟರ್, ತುರ್ತುನಿಗಾ ಘಟಕ, ಆಸ್ಲತ್ರೆಗಳಲ್ಲಿರುವ ಮಂಚಗಳ ಸಂಖ್ಯೆ, ಇವೇ ಮುಂತಾದ ವಿಷಯಗಳ ಮಾಹಿತಿಯ ವರದಿಯನ್ನು ೨೧ ಫೆಬ್ರವರಿ ಒಳಗೆ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಆದೇಶವನ್ನು ನೀಡಿದೆ ಏಕೆಂದರೆ ಇದರಿಂದ ವಸ್ತುಸ್ಥಿತಿ ಗಮನಕ್ಕೆ ಬರುತ್ತದೆ.

ಧರ್ಮದ ಅಧಿಕಾರವು ಬದುಕುವ ಅಧಿಕಾರಕ್ಕಿಂತ ದೊಡ್ಡದ್ದಲ್ಲ ! – ಮದ್ರಾಸ ಉಚ್ಚ ನ್ಯಾಯಾಲಯ

ಧಾರ್ಮಿಕ ವಿಧಿಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಮಾನವ ಜೀವನ ಹಕ್ಕಿಗೆ ಒಳಪಟ್ಟಿರಬೇಕು. ಬದುಕುವ ಹಕ್ಕಿಗಿಂತ ಧರ್ಮದ ಹಕ್ಕು ದೊಡ್ಡದಲ್ಲ. ಈ ಹಿನ್ನೆಲೆಯಲ್ಲಿ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರವು ಕೆಲವು ಕ್ರಮಗಳನ್ನು ತೆಗೆದುಕೊಂಡರೆ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವಾಗ ಸ್ಪಷ್ಟಪಡಿಸಿತು.

ಇತರ ಧರ್ಮದವರು ದೇವಸ್ಥಾನದಲ್ಲಿ ಪ್ರವೇಶಿಸಿದರೆ ಆಕಾಶ ಬೀಳುತ್ತದೆಯೇ ? – ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಶ್ನೆ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥಾನ ಹಾಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಕಛೇರಿಗಳಲ್ಲಿ ಕಲಂ ೭ ರ ಅಡಿಯಲ್ಲಿ ಹಿಂದೂಯೇತರರಿಗೆ ಕೆಲಸ ನೀಡಲು ಅನುಮತಿಯನ್ನು ನೀಡಬಾರದು, ಎಂದು ಆಗ್ರಹಿಸುವ ೨ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ‘ಒಂದು ವೇಳೆ ಇತರ ಧರ್ಮದವರು ದೇವಸ್ಥಾನದೊಳಗೆ ಪ್ರವೇಶಿಸಿದರೆ, ಆಕಾಶ ಬೀಳುವುದೇ ?’, ಎಂದು ನ್ಯಾಯಾಲಯವು ಪ್ರಶ್ನಿಸಿದೆ.

ಪೊಲೀಸ್ ಪಡೆ ದೈಹಿಕ ಮತ್ತು ಮಾನಸಿಕ ಒತ್ತಡದಲ್ಲಿರುವುದರಿಂದ, ಅದರಲ್ಲಿ ಬದಲಾವಣೆಯಾಗುವವರೆಗೂ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕಷ್ಟ ! – ಮದ್ರಾಸ್ ಉಚ್ಚನ್ಯಾಯಾಲಯ

ಪೊಲೀಸ್ ಪಡೆ ದೈಹಿಕ ಮತ್ತು ಮಾನಸಿಕ ಒತ್ತಡದಲ್ಲಿದೆ. ಮಕ್ಕಳ ಜನ್ಮದಿನಕ್ಕೆ ಅಥವಾ ವಿವಾಹಗಳಿಗೆ ಕೆಲಸಕ್ಕೆ ರಜೆ ನಿರಾಕರಿಸಲಾಗುತ್ತದೆ. ಪರಿಣಾಮವಾಗಿ ಅನೇಕ ಜನರು ಆತ್ಮಹತ್ಯೆಯಂತಹ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾನೂನಿನ ಮೂಲಪಾಠವೂ ತಿಳಿದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಛೀಮಾರಿ

ಕರ್ನಾಟಕದ ಗೋವಿಂದರಾಜ ನಗರದ ಮಸೀದಿಯೊಂದರಲ್ಲಿ ನಮಾಜ್ ವೇಳೆ ಧ್ವನಿವರ್ಧಕದಿಂದ ನಿಗದಿತ ಡೆಸಿಬೆಲ್‌ಗಿಂತ ಹೆಚ್ಚು ಶಬ್ದ ಹೊರ ಹೊಮ್ಮುತ್ತಿರುವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಛೀಮಾರಿ ಹಾಕಿದೆ.

ಸಂಗಾತಿಯನ್ನು ಆರಿಸುವುದು ಯಾವುದೇ ಪ್ರಜ್ಞೆಯುಳ್ಳ ವ್ಯಕ್ತಿಯ ಮೂಲಭೂತ ಅಧಿಕಾರ ! – ಕರ್ನಾಟಕ ಉಚ್ಚ ನ್ಯಾಯಾಲಯ

ಸ್ವೇಚ್ಛೆಯಿಂದ ಸಂಗಾತಿಯನ್ನು ಆರಿಸುವುದು, ಯಾವುದೇ ಪ್ರಜ್ಞಾವಂತ ವ್ಯಕ್ತಿಯ ಮೂಲಭೂತ ಅಧಿಕಾರವಾಗಿದೆ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಈ ಅಧಿಕಾರವನ್ನು ನೀಡಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಒಂದು ಅರ್ಜಿಯನ್ನು ಆಲಿಸುವಾಗ ಹೇಳಿದೆ.

ಮಾಸ್ಕ್ ಹಾಕಿಕೊಳ್ಳದವರಿಗೆ ೫ ರಿಂದ ೧೫ ದಿನಗಳವರೆಗೆ ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಿ ! – ಗುಜರಾತ ಉಚ್ಚ ನ್ಯಾಯಾಲಯ

ಕೊರೋನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಜನರಿಗೆ ಯಾವುದಾದರೊಂದು ಕೋವಿಡ್ ಕೇಂದ್ರದಲ್ಲಿ ಕನಿಷ್ಠ ೫ ರಿಂದ ಗರಿಷ್ಠ ೧೫ ದಿನಗಳವರೆಗೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸಬೇಕು. ಅವರಿಂದ ದಿನಕ್ಕೆ ೪-೫ ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುವಂತೆ ಗುಜರಾತ ಉಚ್ಚನ್ಯಾಯಾಲಯ ಗುಜರಾತ್ ಸರಕಾರಕ್ಕೆ ಆದೇಶ ನೀಡಿದೆ.