ಎಸ್.ಡಿ.ಪಿ.ಐ. ಈ ಜಿಹಾದಿ ಸಂಘಟನೆಯ ಮತಾಂಧ ನಾಯಕನ ಜಾಮೀನು ತಿರಸ್ಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ !

ಬೆಂಗಳೂರಿನಲ್ಲಿ ಆಗಸ್ಟ್ ೨೦೨೦ ರಲ್ಲಾದ ಹಿಂಸಾಚಾರದ ಪ್ರಕರಣ

ಬೆಂಗಳೂರು : ಆಗಸ್ಟ್ ೨೦೨೦ ರಲ್ಲಿ ಪೂರ್ವ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ಸೋಶಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ (‘ಎಸ್.ಡಿ.ಪಿ.ಐ.’ಯ) ನಾಯಕ ಇಮ್ರಾನ್ ಅಹಮದ್ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಪೀಠವು ಅಹಮದ್ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿಯನ್ನು ಪರಿಗಣಿಸಿ ಅವರ ವಿರುದ್ಧದ ಆರೋಪಗಳು ಸಮಂಜಸವಾಗಿದೆ ಎಂದು ಹೇಳಿದೆ. ಅಹಮದ್ ಅವರ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ತಿರಸ್ಕರಿಸಿತ್ತು. ಆದ್ದರಿಂದ ಅಹಮದನು ಜಾಮೀನು ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು.

ಆಗಸ್ಟ್ ೧೨, ೨೦೨೦ ರಂದು, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸೋದರಳಿಯನು ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರಿಂದ ಮತಾಂಧರು ಆಕ್ರೋಶಗೊಂಡಿದ್ದರು. ಅದನ್ನು ಖಂಡಿಸಲು ಮೂರ್ತಿ ನಿವಾಸದ ಎದುರು ಜಮಾಯಿಸಿದರು. ನಂತರ ಗುಂಪು ಹಿಂಸಾಚಾರಕ್ಕೆ ತಿರುಗಿ ಶ್ರೀನಿವಾಸ ಮೂರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಿತು. ಪೊಲೀಸರು ಗುಂಪನ್ನು ತಡೆಗಟ್ಟಲು ಪ್ರಯತ್ನಿಸಿದರು. ಆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ೩ ಮಂದಿ ಸಾವನ್ನಪ್ಪಿದ್ದರು. ಎಸ್.ಡಿ.ಪಿ.ಐ.ನ ಕಾರ್ಯಕರ್ತರೇ ಹಿಂಸಾಚಾರ ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುತ್ತಾ ಅಹಮದ್‌ನನ್ನು ಬಂಧಿಸಲಾಗಿತ್ತು.