ಜಿತೇಂದ್ರ ತ್ಯಾಗಿ ಇವರ ‘ಮೊಹಮ್ಮದ’ ಪುಸ್ತಕವನ್ನು ನಿಷೇಧಿಸುವಂತೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ದೆಹಲಿಯ ಉಚ್ಚ ನ್ಯಾಯಾಲಯ !

ನವ ದೆಹಲಿ – ಇಸ್ಲಾಂಅನ್ನು ತ್ಯಾಗ ಮಾಡಿ ಹಿಂದೂ ಧರ್ಮ ಸ್ವೀಕರಿಸಿರುವ ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರು ಬರೆದಿರುವ ‘ಮೊಹಮ್ಮದ್’ ಈ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಸಲ್ಲಿಸಿದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಈ ಪುಸ್ತಕದಲ್ಲಿ ಇಸ್ಲಾಂ, ಮಹಮ್ಮದ್ ಪೈಗಂಬರ ಮತ್ತು ಕುರಾನ್ ವಿರುದ್ಧ ಬರೆಯಲಾಗಿದೆ ಎಂಬ ಅರ್ಜಿಯಲ್ಲಿ ಹೇಳಲಾಗಿತ್ತು. ಕಮರ್ ಹಸನೈನ ಇವರು ಈ ಅರ್ಜಿಯನ್ನು ದಾಖಲಿಸಿ ತ್ಯಾಗಿ ಇವರಿಗೆ ಭವಿಷ್ಯದಲ್ಲಿ ಈ ರೀತಿಯ ಬರವಣಿಗೆ ಬರೆಯದಿರಲು ೨ ಕೋಟಿ ೫ ಲಕ್ಷ ರೂಪಾಯಿ ದಂಡ ವಿಧಿಸಬೇಕೆಂದು ಮನವಿಯ ಮೂಲಕ ಆಗ್ರಹಿಸಿದ್ದರು.

ನ್ಯಾಯಾಲಯವು ಅರ್ಜಿಯನ್ನು ತಳ್ಳಿಹಾಕುತ್ತಾ, ಈ ಅರ್ಜಿಗೆ ಯಾವುದೇ ಆಧಾರವಿಲ್ಲ. ಇದರಲ್ಲಿ ಯಾವ ಬೇಡಿಕೆ ಮಾಡಲಾಗಿದೆ, ಅದು ವೈಯಕ್ತಿಕ ಅಲ್ಲ. ಈ ಪ್ರಕರಣದಲ್ಲಿ ಅರ್ಜಿದಾರನಿಗೆ ವೈಯಕ್ತಿಕ ಅಥವಾ ಕಾನೂನಿನ ಪ್ರಕಾರ ಯಾವುದೇ ಹಾನಿಯಾಗಿಲ್ಲ. ಆದ್ದರಿಂದ ಇಂತಹ ಅರ್ಜಿಯ ಮೇಲೆ ಆಲಿಕೆ ನಡೆಸಲು ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ. ಆದ್ದರಿಂದ ಅದನ್ನು ತಳ್ಳಿ ಹಾಕಲಾಗಿದೆ ಎಂದು ಹೇಳಿದೆ.