17 ವರ್ಷದ ಮುಸಲ್ಮಾನ ಯುವತಿ ಹಿಂದೂ ಯುವಕನ ಜೊತೆಗೆ ವಿವಾಹವಾದಳು !
ಚಂಡಿಗಡ – ಮುಸಲ್ಮಾನ ಯುವತಿ ಹದಿಹರೆಯ ವಯಸ್ಸಿಗೆ ಪ್ರವೇಶ ಮಾಡಿದನಂತರ `ಮುಸ್ಲಿಂ ಪರ್ಸನಲ್ ಲಾ’ದಿಂದಾಗಿ ಆಕೆ ಸ್ವಂತ ಇಚ್ಛೆಯಿಂದ ಯಾರ ಜೊತೆ ಬೇಕಾದರೂ ಮದುವೆ ಮಾಡಿಕೊಳ್ಳಬಹುದು, ಇದರಲ್ಲಿ ಆಕೆಯ ತಂದೆ-ತಾಯಿ ಅಥವಾ ಸಂಬಂಧಿಕರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಎಂದು ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ಸಮಯದಲ್ಲಿ ನ್ಯಾಯಾಲಯವು ಕುಟುಂಬ ಮತ್ತು ಸಂಬಂಧಿಕರು ಇವರನ್ನು ವಿರೋಧಿಸಿ ಹಿಂದೂ ಯುವಕನ ಜೊತೆಗೆ ವಿವಾಹ ಮಾಡಿಕೊಳ್ಳುವ 17 ವರ್ಷದ ಮುಸಲ್ಮಾನ ಯುವತಿ ಮತ್ತು ಆಕೆಯ ಪತಿಗೆ ರಕ್ಷಣೆ ನೀಡುವ ಆದೇಶ ನೀಡಲಾಗಿದೆ.
Muslim girl can marry on attaining puberty: Punjab and Haryana High Courthttps://t.co/geUmfIWMVW
— OpIndia.com (@OpIndia_com) December 26, 2021
ನ್ಯಾಯಮೂರ್ತಿ ಹರನರೇಶ ಸಿಂಹ ಗಿಲ್ ಇವರು, ಮುಸ್ಲಿಂ ಯುವತಿಯ ವಿವಾಹ `ಮುಸ್ಲಿಂ ಪರ್ಸನಲ್ ಲಾ’ ಮೂಲಕ ಮಾಡಲಾಗುತ್ತದೆ, ಈ ಕಾನೂನು ಸ್ಪಷ್ಟವಾಗಿದೆ. ಸರ ದಿನಶಾಹ ಫರದುನಜಿ ಮುಲ್ಲಾ ಇವರ `ಪ್ರಿನ್ಸಿಪಲ್ ಆಫ್ ಮೊಹಮ್ಮದ್ ಲಾ’ (ಮಹಮ್ಮದ್ ಕಾನೂನಿನಲ್ಲಿನ ತತ್ತ್ವಗಳು) ಹೆಸರಿನ ಪುಸ್ತಕದಲ್ಲಿನ ಕಲಮ್ 195 ರ ಪ್ರಕಾರ ಅರ್ಜಿದಾರ ಯುವತಿ 17 ವರ್ಷದವಲಾಗಿದ್ದರಿಂದ ಆಕೆ ತನ್ನ ಇಚ್ಛೆಯ ವ್ಯಕ್ತಿಯ ಜೊತೆಗೆ ವಿವಾಹ ಮಾಡಿಕೊಳ್ಳಲು ಸಕ್ಷಮವಾಗಿದ್ದಾಳೆ. ಅದೇ ರೀತಿ ಅರ್ಜಿ ಸಲ್ಲಿಸಿರುವ ಮದುಮಗನ ವಯಸ್ಸು ಕೂಡ 33 ವರುಷ ಆಗಿದೆ. ಆದ್ದರಿಂದ ಅರ್ಜಿದಾರ ಯುವತಿ ಮುಸ್ಲಿಂ ಪರ್ಸನಲ್ ಲಾ ಪ್ರಕಾರ ವಿವಾಹಯೋಗ್ಯ ವಯಸ್ಸಿನವಳಾಗಿದ್ದಾಳೆ. ಕೇವಲ ಅರ್ಜಿದಾರ ಅವರ ಕುಟುಂಬದ ಸದಸ್ಯರು ಇಚ್ಛೆಯ ವಿರುದ್ಧ ವಿವಾಹ ನಡೆದಿದೆ; ಎಂದು ಅವರನ್ನು ಸಂವಿಧಾನದ ಮೂಲಭೂತ ಅಧಿಕಾರಗಳಿಂದ ವಂಚಿತ ಇರಿಸಲು ಸಾಧ್ಯವಿಲ್ಲ. ಎಂಬ ಭಯ ಅರ್ಜಿದಾರರ ಮನಸ್ಸಿನಿಂದ ತೆಗೆದುಹಾಕುವ ಅವಶ್ಯಕತೆಯಿದೆ ಎಂದು ಹೇಳಿದೆ.