ಹಿಂದುತ್ವನಿಷ್ಠರ ಸಂಘಟನೆಗಳ ಒಗ್ಗಟ್ಟಿನ ಯಶಸ್ಸು ! ಇದೇ ರೀತಿಯಲ್ಲಿ ಹಿಂದೂಗಳೆಲ್ಲ ಒಗ್ಗೂಡಿದರೆ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವ ಧೈರ್ಯ ಯಾರೂ ಮಾಡುವುದಿಲ್ಲ !- ಸಂಪಾದಕರು
ಭಾಗ್ಯನಗರ (ತೆಲಂಗಾಣಾ) – ಹಿಂದೂ ಸಂಘಟನೆಗಳ ವಿರೋಧದ ನಂತರ ಭಾಗ್ಯನಗರ (ತೆಲಂಗಾಣ)ದಲ್ಲಿ ಹಾಸ್ಯನಟ ಮುನಾವರ್ ಫಾರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ತೆಲಂಗಾಣಾ ರಾಜ್ಯದ ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ ಇವರು ಫಾರೂಕಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. (ಇದು ಹಿಂದೂದ್ವೇಷ ಅಲ್ಲವೇ ? – ಸಂಪಾದಕರು) ಈ ಕುರಿತು ಫಾರೂಕಿಯು `ಜನವರಿ 9 ರಂದು ಭಾಗ್ಯನಗರದಲ್ಲಿ ಕಾರ್ಯಕ್ರಮ ಮಾಡುವೆ’, ಎಂದು ಹೇಳಿದ್ದ. ಈ ಮಾಹಿತಿ ಸಿಕ್ಕಿದಾಶಕ್ಷಣ `ಹಿಂದೂ ಜಾಯಿಂಟ್ ಆಕ್ಷನ್ ಕಮಿಟಿ’, ಹಿಂದೂ ಜನಜಾಗೃತಿ ಸಮಿತಿ ಇತ್ಯಾದಿ 15 ಹಿಂದೂ ಸಂಘಟನೆಗಳು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ನೀಡಿ ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು. ಜೊತೆಗೆ ಧರ್ಮಾಭಿಮಾನಿಗಳಿಂದಲೂ ಈ ಬಗ್ಗೆ ಭಾರೀ ಸಂಖ್ಯೆಯಲ್ಲಿ ಟ್ವೀಟ್‍ಗಳು ಮಾಡಲಾಯಿತು. ಈ ಬಗ್ಗೆ ಭಾಜಪಸ ಶಾಸಕ ಟಿ. ರಾಜಾ ಸಿಂಗ್, ಭಾಜಪದ ರಾಜ್ಯಾಧ್ಯಕ್ಷ ಬಂಡಿ ಸಂಜಯ ಮತ್ತು ಭಾಜಪ ಸಂಸದ ಧರ್ಮಪುರಿ ಅರವಿಂದ ಇವರೂ ಕೂಡ ಕಾರ್ಯಕ್ರಮ ರದ್ದುಗೊಳಿಸುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೇ, ‘ಹಿಂದೂ ಜಾಯಿಂಟ ಆಕ್ಷನ್ ಕಮಿಟಿಯಿಂದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಬಗ್ಗೆ ಜನವರಿ 7 ರಂದು ಆಲಿಕೆ ಮಾಡಬೇಕಿತ್ತು; ಆದರೆ ಜನವರಿ 6 ರಂದು ಫಾರೂಕಿ ಕಾರ್ಯಕ್ರಮವನ್ನು ರದ್ದುಗೊಳಿಸಿದ. ಆದರೂ `ಫಾರೂಕಿಗೆ ಇನ್ನುಮುಂದೆ ಕಾರ್ಯಕ್ರಮ ನೀಡಲು ಅವಕಾಶ ನೀಡಬಾರದು’, ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.