ಭಾರತಮಾತೆ ಮತ್ತು ಭೂಮಾತೆಯ ವಿರುದ್ಧ ಅಪಮಾನಕಾರಿ ಹೇಳಿಕೆಗಳನ್ನು ನೀಡುವ ಪಾದ್ರಿಯ ಮೇಲಿನ ಅಪರಾಧವನ್ನು ರದ್ದುಗೊಳಿಸಲು ಮದ್ರಾಸ್ ಉಚ್ಚ ನ್ಯಾಯಾಲಯದಿಂದ ನಕಾರ !

ಇಂತಹ ತೀರ್ಪನ್ನು ನೀಡುವ ಮದ್ರಾಸ್ ಉಚ್ಛ ನ್ಯಾಯಾಲಯಕ್ಕೆ ಅಭಿನಂದನೆಗಳು ! ‘ನ್ಯಾಯಾಲಯವು ಇಂತಹ ಆರೋಪಿಗಳನ್ನು ದೋಷಿಗಳೆಂದು ನಿರ್ಧರಿಸಿ ಅವರಿಗೆ ಅತ್ಯಂತ ಕಠೋರ ಶಿಕ್ಷೆ ನೀಡಿದರೆ ಇತರ ಜನರ ಮೇಲೆ ಈ ಬಗ್ಗೆ ಭಯವಿರುವುದು, ಎಂದು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ !- ಸಂಪಾದಕರು

ಮದ್ರಾಸ್ ಉಚ್ಛ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ‘ಭಾರತ ಮಾತೆ’ ಮತ್ತು ‘ಭೂಮಾತೆ’ಯ ವಿರುದ್ಧ ಅಪಮಾನಕಾರಿ ಹೇಳಿಕೆಗಳನ್ನು ನೀಡುವ ಪಾದ್ರಿ ಜಾರ್ಜ್ ಪೊನ್ನಯಾರವರ ಮೇಲೆ ನೋಂದಾಯಿಸಲಾದ ಅಪರಾಧವನ್ನು ಹಿಂದೆ ಪಡೆಯಲು ಮದ್ರಾಸ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಪೊನ್ನಯಾರವರ ಮೇಲೆ ಕಲಂ 295 ಅ (ಧಾರ್ಮಿಕ ಭಾವನೆಯನ್ನು ನೋಯಿಸುವುದು) ಇದರ ಅನ್ವಯ ಅಪರಾಧವನ್ನು ನೋಂದಾಯಿಸಲಾಗಿದೆ. ಜುಲೈ 18, 2021 ರಂದು ಅವರು ಕನ್ಯಾಕುಮಾರಿಯಲ್ಲಿನ ಒಂದು ಕಾರ್ಯಕ್ರಮದಲ್ಲಿ ಅಪಮಾನಕಾರಿ ಹೇಳಿಕೆಯನ್ನು ನೀಡಿದ್ದರು. ನ್ಯಾಯಮೂರ್ತಿ ಜಿ. ಆರ್. ಸ್ವಾಮಿನಾಥನರವರು ತೀರ್ಪಿನ ಸಮಯದಲ್ಲಿ ‘ಭೂಮಾತೆಯನ್ನು ಗೌರವಿಸಲು ಚಪ್ಪಲಿಗಳನ್ನು ಹಾಕದೆ ನಡೆಯುವವರನ್ನು ಪೊನ್ನಯಾರವರು ಅವಹೇಳನ ಮಾಡಿದ್ದಾರೆ. ಪೊನ್ನಯಾರವರು ಭೂಮಾತೆ ಮತ್ತು ಭಾರತಮಾತೆಯನ್ನು ‘ಮಹಾಮಾರಿ ಮತ್ತು ಸ್ವಚ್ಛತೆಯ ಗೂಡು’ ಎಂದು ಉಲ್ಲೇಖಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲು ಇದಕ್ಕಿಂತ ಅಪಮಾನಕಾರಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಭಾರತಮಾತೆಯೊಂದಿಗೆ ಹಿಂದೂಗಳ ಭಾವನೆಯು ಬೆರೆತಿದೆ. ಭಾರತಮಾತೆಯು ಅನೇಕ ಹಿಂದೂಗಳಿಗೆ ದೇವತೆಯಾಗಿದ್ದಾಳೆ. ಯಾರಿಗೂ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಧಿಕಾರವಿಲ್ಲ. ಪೊನ್ನಯಾರವರು ಹಿಂದೂಗಳನ್ನು ಗುರಿಯಾಗಿಸಿದ್ದರು. ಅವರು ಹಿಂದೂಗಳನ್ನು ಬೇರೆ ಮತ್ತು ಮುಸಲ್ಮಾನ ಹಾಗೂ ಕ್ರೈಸ್ತರನ್ನು ಬೇರೆ ದೃಷ್ಟಿಯಿಂದ ನೋಡುತ್ತಾರೆ.

ಪೊನ್ನಯಾರವರು ಏನು ಹೇಳಿದ್ದರು ?

ಪೊನ್ನಯಾರವರು ನಾಗರಕೊಲಿಯಲ್ಲಿನ ಭಾಜಪದ ಸಂಸದರಾದ ಎಮ್. ಆರ್. ಗಾಂಧಿಯವರ ಮೇಲೆ ಟೀಕೆ ಮಾಡುವಾಗ ‘ಭಾರತ ಮಾತೆಗೆ ತೊಂದರೆ ನೀಡಲು ಇಚ್ಛೆ ಇಲ್ಲದಿರುವುದರಿಂದ ಗಾಂಧಿಯವರು ಚಪ್ಪಲಿಗಳನ್ನು ಧರಿಸುವುದಿಲ್ಲ. ‘ನಮ್ಮ ಕಾಲು ಹೊಲಸಾಗದಿರಲು ಮತ್ತು ಭಾರತಮಾತೆ ಯಿಂದ ನಮಗೆ ಯಾವುದೇ ರೋಗ ಬರದಿರಲಿ ಎಂದು ನಾವು ಕ್ರೈಸ್ತರು ಚಪ್ಪಲಿ ಧರಿಸುತ್ತೇವೆ” ಎಂದು ಹೇಳಿದ್ದರು.