ಭ್ರಷ್ಟ ನೌಕರರಿಗೆ ಗಲ್ಲು ಶಿಕ್ಷೆ ನೀಡಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ಮದ್ರಾಸ್ ವಿಶ್ವವಿದ್ಯಾಲಯದ ಇಬ್ಬರು ಭ್ರಷ್ಟ ನೌಕರರಿಗೆ ಬಡ್ತಿ ನೀಡಿದ ಪ್ರಕರಣ

ಭ್ರಷ್ಟಾಚಾರದ ಆರೋಪ ಇರುವವರಿಗೆ ಬಡ್ತಿ ನೀಡುವವರ ಮೇಲೆಯೂ ಕ್ರಮ ಕೈಗೊಳ್ಳಬೇಕು ! ಇಂದು ಭಾರತದಲ್ಲಿ ಭ್ರಷ್ಟಾಚಾರವೇ ಶಿಷ್ಟಾಚಾರವಾಗಿದ್ದು ಭ್ರಷ್ಟರನ್ನೇ ಗೌರವಿಸಲಾಗುತ್ತದೆ, ಇದು ಭ್ರಷ್ಟ ನೌಕರರಿಗೆ ಬಡ್ತಿ ನೀಡಿದ ಪ್ರಕರಣದಿಂದ ಗಮನಕ್ಕೆ ಬರುತ್ತದೆ !

ಚೆನ್ನೈ (ತಮಿಳುನಾಡು) – ಭ್ರಷ್ಟಾಚಾರ ಆರೋಪವಿರುವ ಮದ್ರಾಸ್ ವಿಶ್ವವಿದ್ಯಾಲಯದ ನೌಕರರಿಬ್ಬರಿಗೆ ಬಡ್ತಿ ನೀಡಿದ್ದನ್ನು ವಿರೋಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಈ ಅರ್ಜಿಯ ಆಲಿಕೆಯ ಸಮಯದಲ್ಲಿ, ‘ಇಂತಹ ನೌಕರರಿಗೆ ಗಲ್ಲು ಶಿಕ್ಷೆ ನೀಡಬೇಕು’, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ವೀರಾಪಂಡಿ ಮತ್ತು ಸೆಲ್ವಿ ಎಂಬ ಇಬ್ಬರು ನೌಕರರಿಗೆ ಸಹಾಯಕ ಗ್ರಂಥಪಾಲ ಎಂದು ಬಡ್ತಿ ನೀಡಲಾಗಿತ್ತು.