ಶ್ರೀರಾಮ, ಶ್ರೀಕೃಷ್ಣ ಹಾಗೂ ಭಗವದ್ಗೀತೆ, ಮಹಾಭಾರತ, ರಾಮಾಯಣ ಮತ್ತು ಗೋಮಾತೆಗೆ ರಾಷ್ಟ್ರೀಯ ಗೌರವ ದೊರೆಯಬೇಕು !

೧. ‘ಭಾರತದ ಕಾನೂನು ಮಂಡಳಿಗಳು ಶ್ರೀರಾಮ, ಶ್ರೀಕೃಷ್ಣ ಹಾಗೂ ರಾಮಾಯಣ, ಮಹಾಭಾರತ ಇವುಗಳನ್ನು ಭಾರತೀಯ ಸಂಸ್ಕೃತಿಯ ಮುಖ್ಯ ಸ್ರೋತಗಳೆಂದು ಮತ್ತು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಬೇಕು’. ಎಂದು ನ್ಯಾಯಾಲಯವು ಸೂಚಿಸುವುದು

೬ ಅಕ್ಟೋಬರ್ ೨೦೨೧ ರಂದು ಉತ್ತರಪ್ರದೇಶದ ಪ್ರಯಾಗರಾಜ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿ ಶೇಖರ ಯಾದವರವರು ಹಾಥರಸದ ಆಕಾಶ ಜಾಟವ ಇವನ ಜಾಮೀನು ಅರ್ಜಿಗೆ ತೀರ್ಪನ್ನು ಕೊಡುತ್ತಿದ್ದರು. ಆಕಾಶ ಜಾಟವ ಇವನು ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಬಗ್ಗೆ ಅವಮಾನಾತ್ಮಕ ಮತ್ತು ಅಶ್ಲೀಲವಾಗಿ ಟೀಕಿಸಿದ್ದನು. ಹಾಗಾಗಿ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಕೆಳಗಿನ ನ್ಯಾಯಾಲಯವು ಅವನಿಗೆ ಜಾಮೀನನ್ನು ನಿರಾಕರಿಸಿತ್ತು. ಆದುದರಿಂದ ಆತ ಜಾಮೀನು ಪಡೆಯಲು ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ. ಈ ಜಾಮೀನಿನ ಮೇಲೆ ತೀರ್ಪು ನೀಡುವಾಗ ನ್ಯಾಯಮೂರ್ತಿ ಶೇಖರ ಯಾದವರು, “ಭಾರತೀಯ ಸಂವಿಧಾನವು ಪ್ರತಿಯೊಬ್ಬರಿಗೆ ದೇವರ ಮೇಲೆ ಶ್ರದ್ಧೆಯನ್ನು ಇಡಬೇಕೋ ಅಥವಾ ಇಡಬಾರದೋ, ಎಂಬುದರ ಸ್ವಾತಂತ್ರ್ಯವನ್ನು ನೀಡಿದೆ; ಆದರೆ ಯಾರಿಗೆ ದೇವರು, ಧರ್ಮ, ಇತರರ ಶ್ರದ್ಧಾಸ್ಥಾನಗಳು ಮತ್ತು ಆದರ್ಶದ ಮೇಲೆ ಶ್ರದ್ಧೆ ಇಲ್ಲವೋ, ಅವರು ಇತರರ ಶ್ರದ್ಧಾಸ್ಥಾನಗಳನ್ನು ಟೀಕಿಸಬಾರದು. ಇದಕ್ಕೆ ಸಂವಿಧಾನವು ಅನುಮತಿಯನ್ನು ನೀಡುವುದಿಲ್ಲ. ಈ ರೀತಿ ಟೀಕಿಸಿದರೆ  ಶ್ರದ್ಧಾವಂತ ಜನರ ಶ್ರದ್ಧೆಯ ಅವಮಾನವಾಗುತ್ತದೆ ಮತ್ತು ಸಾಮಾಜಿಕ ಶಾಂತಿ ಹದಗೆಟ್ಟು ಹಿಂಸಾಚಾರ ಹರಡಬಹುದು. ಇದರಿಂದ ವಾತಾವರಣ ಕೆಡಬಹುದು”, ಎಂದು ಹೇಳಿದರು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ನ್ಯಾಯಮೂರ್ತಿಗಳು ಇದೇ ತೀರ್ಪುಪತ್ರದಲ್ಲಿ, ನಿಜವಾಗಿ ನೋಡಿದರೆ ‘ಭಾರತದ ಕಾನೂನುಮಂಡಳಿಗಳು ಭಾರತೀಯ ಸಂಸ್ಕೃತಿಯ ಮುಖ್ಯ ಸ್ರೋತಗಳಾದ ಶ್ರೀರಾಮ, ಶ್ರೀಕೃಷ್ಣ, ಹಾಗೆಯೇ ರಾಮಾಯಣ, ಮಹಾಭಾರತ ಇಂತಹ ಪವಿತ್ರ ಗ್ರಂಥಗಳನ್ನು ರಾಷ್ಟ್ರೀಯ ಆಸ್ತಿಯೆಂದು ಅಥವಾ ರಾಷ್ಟ್ರೀಯ ಪ್ರತೀಕಗಳೆಂದು ಘೋಷಿಸಬೇಕು’, ಎಂದು ಹೇಳಿದರು. ನ್ಯಾ. ಯಾದವ ಇವರು ಹೀಗೆ ಹೇಳಿದಾಕ್ಷಣ ಹಿಂದೂದ್ರೋಹಿಗಳ ಹೊಟ್ಟೆ ನೋಯತೊಡಗಿತು; ಆದರೆ ‘ಆರೋಪಿಯು ೧೦ ತಿಂಗಳುಗಳಿಂದ ಸೆರೆಮನೆಯಲ್ಲಿದ್ದು ಈ ಕ್ರಿಮಿನಲ್ ಖಟ್ಲೆಯು ಯಾವಾಗ ಪ್ರಾರಂಭವಾಗುವುದು ? ಮತ್ತು ಯಾವಾಗ ಮುಗಿಯುವುದು  ? ಎಂಬುದು ಖಚಿತವಿಲ್ಲ’, ಎಂಬ ಕಾರಣ ನೀಡಿ ನ್ಯಾಯಮೂರ್ತಿಗಳು ಆಕಾಶ ಜಾಟವ ಇವನಿಗೆ ಜಾಮೀನು ನೀಡಿದರು.

೨. ಹಿಂದೂ ಸಂಸ್ಕೃತಿ, ಹಿಂದೂ ದೇವತೆಗಳು ಮತ್ತು ಹಿಂದೂಗಳ ಶ್ರದ್ಧಾಸ್ಥಾನಗಳ ಅವಮಾನವನ್ನು ತಡೆಗಟ್ಟಲು ಸಂಸತ್ತು ‘ರಾಷ್ಟ್ರೀಯ ಸ್ತರದಲ್ಲಿ ಕಾನೂನನ್ನು ರೂಪಿಸಬೇಕು’, ಎಂದು ನ್ಯಾಯಮೂರ್ತಿಗಳಿಂದ ಸೂಚನೆ

ನ್ಯಾಯಮೂರ್ತಿ ಶೇಖರ ಯಾದವ ಇವರು ಮಾತನ್ನು ಮುಂದುವರಿಸುತ್ತಾ “ಶ್ರೀರಾಮ, ಶ್ರೀಕೃಷ್ಣ, ಹಾಗೆಯೇ ರಾಮಾಯಣ, ಶ್ರೀಮದ್ಭಾಗವತ ಕಥೆಯನ್ನು ಬರೆದ ಮಹರ್ಷಿ ವ್ಯಾಸರು ಮತ್ತು ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿ ಇವರು ಭಾರತೀಯ ಸಾಂಸ್ಕೃತಿಕ ವರ್ಷಾಕಾಲದ ಅವಿಭಾಜ್ಯ ಅಂಗವಾಗಿದ್ದಾರೆ. ಆದುದರಿಂದ ರಾಷ್ಟ್ರೀಯ ಸ್ತರದಲ್ಲಿ ಅವರ ಗೌರವವನ್ನು ಕಾಪಾಡಲು ಸಂಸತ್ತಿನಲ್ಲಿ ಕಾನೂನನ್ನು ರೂಪಿಸಬೇಕು. ಆಕಾಶ ಜಾಟವ ಇವನು ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ ಆಕ್ಷೇಪಾರ್ಹ ಹೇಳಿಕೆಯಿಂದ ಬಹುಸಂಖ್ಯಾತ ನಾಗರಿಕರ ಶ್ರದ್ಧೆಗೆ ಘಾಸಿಯಾಗಿದೆ. ಒಂದು ವೇಳೆ ನ್ಯಾಯಾಲಯವು ಸೌಮ್ಯ ನಿಲುವನ್ನು ತೆಗೆದುಕೊಂಡರೆ ಇಂತಹ ವ್ಯಕ್ತಿಗಳ ಧೈರ್ಯ ಹೆಚ್ಚಾಗುತ್ತದೆ”, ಎಂದು ಹೇಳಿದರು.

ನ್ಯಾಯಾಲಯದ ಈ ನಿರ್ಣಯದಿಂದ ಒಂದು ಗಮನಕ್ಕೆ ಬರುವ, ವಿಷಯವೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಧಾರ್ಮಿಕ ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ. ದುರದೃಷ್ಟವಶಾತ್ ಭಾರತದಲ್ಲಿ ಧರ್ಮನಿಂದನೆಗಾಗಿ ಕಠಿಣ ಕಾನೂನು ಇಲ್ಲದಿರುವುದರಿಂದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಲು ಬರುವುದಿಲ್ಲ. ಆದುದರಿಂದಲೇ ದೊಡ್ಡ ಪ್ರಮಾಣದಲ್ಲಿ ಹಿಂದೂ ದೇವತೆಗಳ ಅವಮಾನವಾಗುವಂತಹ ಜಾಹೀರಾತುಗಳನ್ನು ನೀಡಲಾಗುತ್ತದೆ, ಉದಾ. ಮಹಾಶಿವರಾತ್ರಿಯ ಸಮಯದಲ್ಲಿ ಶಿವನು ‘ಗಾಗಲ್’ (ತಂಪು ಕನ್ನಡಕ) ಹಾಕಿಕೊಂಡಿರುವುದನ್ನು ತೋರಿಸುವುದು, ಗಣೇಶಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗಿನ ಕಾಲದಲ್ಲಿ ಶ್ರೀ ಗಣೇಶನ ಕೈಯಲ್ಲಿ ವಿವಿಧ ಉತ್ಪಾದನೆಗಳನ್ನು ತೋರಿಸುವುದು ಇತ್ಯಾದಿ. ಇತರ ಹಬ್ಬಗಳ ಸಮಯದಲ್ಲಿಯೂ ಹಿಂದೂಗಳ ದೇವತೆಗಳ ವಿಡಂಬನೆ ಮತ್ತು ಅಪಹಾಸ್ಯತ್ಮಾಕವಾಗಿ ಮಾಡುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳು, ವಾರ್ತಾವಾಹಿನಿಗಳು ಮತ್ತು ವಾರ್ತಾಪತ್ರಿಕೆಗಳಲ್ಲಿ ಜಾಹೀರಾತುಗಳು ಪ್ರಕಾಶಿತವಾಗುತ್ತವೆ. ಅನೇಕ ಬಾರಿ ವಿರೋಧಿಸಿದರೂ ಪೊಲೀಸರು ಗಣೇಶೋತ್ಸವದ ಸಮಯದಲ್ಲಿ ಶ್ರೀ ಗಣೇಶನ ಮಾಧ್ಯಮದಿಂದ ಜನರಿಗೆ ಸಾರ್ವಜನಿಕ ನಿಯಮಗಳನ್ನು ಕಲಿಸುತ್ತಾರೆ. ಇತರ ಪಂಥದವರ ಸಂದರ್ಭದಲ್ಲಿ ಅವರು ಹೀಗೆ ಮಾಡಬಹುದೇ ? ಎಲ್ಲಿಯ ವರೆಗೆ ಭಾರತದಲ್ಲಿ ಧರ್ಮನಿಂದನೆಯ ಕಾನೂನು ಬರುವುದಿಲ್ಲವೋ, ಎಲ್ಲಿಯ ವರೆಗೆ ಆರೋಪಿಗಳ ಮೇಲೆ ಕಠಿಣ ಕಲಮ್‌ಗಳನ್ನು ಹಾಕಲಾಗುವುದಿಲ್ಲವೋ ಮತ್ತು ಎಲ್ಲಿಯ ವರೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವುದಿಲ್ಲವೋ, ಅಲ್ಲಿಯವರೆಗೆ ಇದನ್ನು ತಡೆಯಲು ಆಗುವುದಿಲ್ಲ. ಅನೇಕ ದೇಶಗಳಲ್ಲಿ ಧರ್ಮನಿಂದನೆಯ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗಳಿವೆ; ಆದರೆ ಭಾರತದಲ್ಲಿ ಅದಕ್ಕೆ ತೀರಾ ಅತ್ಯಲ್ಪ ಶಿಕ್ಷೆಗಳಿವೆ. ಹೀಗಿರುವುದರಿಂದಲೇ ಧರ್ಮದ್ರೋಹಿ ಜನರು ಕಾನೂನಿಗೆ ಹೆದರದೇ ಹಿಂದೂ ದೇವತೆಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರ ಮತ್ತು ಸಂಸತ್ತು ನ್ಯಾಯಾಲಯವು ಸೂಚಿಸಿದಂತೆ ಉಪಾಯಯೋಜನೆಯನ್ನು ಮಾಡುವುದು ಆವಶ್ಯಕವಾಗಿದೆ.

೩. ‘ಕೇಂದ್ರ ಸರಕಾರವು ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಅದರಂತೆ ಒಂದು ಕಾನೂನನ್ನು ರೂಪಿಸಬೇಕು’, ಎಂದು ನ್ಯಾಯಮೂರ್ತಿಗಳು ಸೂಚಿಸುವುದು

ಇತ್ತೀಚೆಗೆ ನ್ಯಾ. ಯಾದವ ಇವರು ಕಟುಕನೊಬ್ಬನಿಗೆ ಜಾಮೀನು ನಿರಾಕರಿಸುತ್ತಾ, ‘ಕಟುಕನು ಗೋಹತ್ಯೆ ಮಾಡಿದ್ದಾನೆ. ಆದುದರಿಂದ ಉತ್ತರಪ್ರದೇಶ ಸರಕಾರದ ಕಾನೂನಿನಂತೆ ಅವನಿಗೆ ಜಾಮೀನು ನೀಡಲು ಬರುವುದಿಲ್ಲ’, ಎಂದು ಹೇಳಿದ್ದರು. ಈ ಸಮಯದಲ್ಲಿ ಗೋಹತ್ಯೆಯ ವಾಸ್ತವಿಕತೆಯನ್ನು ನೋಡಿ ನ್ಯಾ. ಯಾದವ ಇವರು ಖೇದದಿಂದ, “ಕೇಂದ್ರ ಸರಕಾರ ಮತ್ತು ಕಾನೂನು ರೂಪಿಸುವವರು ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಅದರಂತೆ ಕಾನೂನನ್ನು ರೂಪಿಸಬೇಕು”, ಎಂದು ಹೇಳಿದರು. ಗೋಮಾತೆಯ ಶಾಸ್ತ್ರೀಯ ಮಹತ್ವವನ್ನು ಹೇಳುವಾಗ ನ್ಯಾಯಮೂರ್ತಿ ಯಾದವ ಇವರು, “ಪ್ರಾಣಿಗಳಲ್ಲಿ ಕೇವಲ ಗೋಮಾತೆಯೊಂದೇ ಕಾರ್ಬನ್ ವಾಯು ತೆಗೆದುಕೊಂಡು ಪ್ರಾಣವಾಯುವನ್ನು ಬಿಡುತ್ತದೆ. ನಾವು ಗೋಮಾತೆಯ ಹತ್ತಿರವಿದ್ದರೆ, ನಮ್ಮ ಅನೇಕ ತೀವ್ರ ರೋಗಗಳು ದೂರವಾಗುತ್ತವೆ”, ಎಂದು ಅನೇಕ ವಿಜ್ಞಾನಿಗಳು ಪುರಾವೆ ಸಹಿತ ಸಿದ್ಧ ಮಾಡಿದ್ದಾರೆ.’ ಎಂದರು.

೪. ಗೋವು ಮಾನವರಿಗಾಗಿ ಅತ್ಯಂತ ಉಪಯುಕ್ತವಾಗಿದ್ದರಿಂದ ನ್ಯಾಯಾಲಯವು ಹೇಳಿದಂತೆ ಕೇಂದ್ರಸರಕಾರವು ಅದನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು !

ಹಿಂದಿನ ಕಾಲದಲ್ಲಿ ವೈದ್ಯಕೀಯ ವಿಜ್ಞಾನವು ಇಷ್ಟು ಪ್ರಗತವಾಗಿರಲಿಲ್ಲ, ಆದರೆ ರೋಗರುಜಿನಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದವು. ಆ ಸಮಯದಲ್ಲಿ, ದೇವಿ (chickenpox), ದಡಾರ, ಮಲೇರಿಯಾ, ಪ್ಲೆಗ್‌ನಂತಹ ಸಾಂಕ್ರಾಮಿಕರೋಗಗಳು ಬರುತ್ತಿದ್ದವು. ಆ ಮಹಾಮಾರಿಯಲ್ಲಿ ಲಕ್ಷಗಟ್ಟಲೆ ಜನರು ಸಾಯುತ್ತಿದ್ದರು. ಊರಿಗೇ ಊರೇ ನಿರ್ಜನವಾಗುತ್ತಿತ್ತು. ೧೦೦ ವರ್ಷಗಳ ಹಿಂದೆ ಪ್ಲೆಗ್‌ನ ಭಯದಿಂದ ಜನರು ಮನೆಮಠಗಳನ್ನು ಬಿಟ್ಟು ಹೊಲದಲ್ಲಿ ಇರಲು ಹೋಗಿದ್ದರು. ಇಲಿಗಳು ಸತ್ತ ನಂತರ ಅವುಗಳ ಹೇನುಗಳಿಂದ ಆ ರೋಗವು ಹೆಚ್ಚು ಹರಡುತ್ತಿತ್ತು. ಪ್ಲೆಗ್ ರೋಗದೆದುರು ಎಲ್ಲ ವೈದ್ಯಕೀಯ ವ್ಯವಸ್ಥೆಯು ಕೈಚೆಲ್ಲಿತ್ತು. ಇದಕ್ಕೆ ಸಂಬಂಧಿಸಿದ ಒಂದು ಕಥೆ ಇದೆ. ದನಗಾಹಿಗಳು ದನಗಳನ್ನು ಮೇಯಿಸಲು ಊರಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ‘ಆಕಳುಗಳ ಸಾನ್ನಿಧ್ಯದಲ್ಲಿದ್ದರೆ ನಮಗೆ ದೇವಿ ರೋಗ ಬರುವುದಿಲ್ಲ’, ಎಂದು ರೈತರಿಗೆ ಮತ್ತು ದನಕಾಯುವ ಹುಡುಗರಿಗೆ ಅನಿಸುತ್ತಿತ್ತು. ವಿಜ್ಞಾನಿಗಳು, ‘ದೇವಿಯ ರೋಗವು ಯಾವ ಕಾರಣದಿಂದ ಹರಡುತ್ತದೆ ? ಗೋಮಾತೆಯ ಸಾನ್ನಿಧ್ಯದಲ್ಲಿದ್ದರೆ ಈ ರೋಗವು ಅವರಿಗೆ ಬರುವುದಿಲ್ಲ, ಇದು ನಿಜವೇ ?’ ಎಂದು ವಿಚಾರ ಮಾಡಿದರು. ವಿಜ್ಞಾನಿಗಳ ಸಂಶೋಧನೆಯಿಂದ ‘ಗೋಮಾತೆಯ ಸಾನ್ನಿಧ್ಯದಲ್ಲಿರುವವರಿಗೆ ದೇವಿ ಅಥವಾ ತತ್ಸಮ ರೋಗಗಳು ಬರುವುದಿಲ್ಲ’, ಎಂಬುದು ಸಿದ್ಧವಾಯಿತು. ಆ ಸಮಯದಲ್ಲಿ ದೇವಿ ರೋಗವು ಹಾಹಾಕಾರವೆಬ್ಬಿಸಿತ್ತು. ಲಕ್ಷಗಟ್ಟಲೇ ಜನರಿಗೆ ಆ ರೋಗವು ಬಂದಿತ್ತು. ‘ದೇವಿ’ ರೋಗದಿಂದ ಜನರ ದೃಷ್ಟಿ ಹೋಗುವ ಸಾಧ್ಯತೆಯಿತ್ತು. ಆದುದರಿಂದ ಜನರು ಈ ರೋಗಕ್ಕೆ ಬಹಳ ಹೆದರುತ್ತಿದ್ದರು. ಇದೆಲ್ಲವೂ ನೂರಾರು ವರ್ಷಗಳಿಂದ  ಪುರಾವೆಸಹಿತ ಸಿದ್ಧವಾಗಿದೆ. ಆದುದರಿಂದ ಒಂದು ವೇಳೆ ನ್ಯಾ. ಯಾದವ ಇವರು ಕೆಂದ್ರ ಸರಕಾರಕ್ಕೆ, “ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ”, ಎಂದು ಹೇಳಿದರೆ, ಈ ಪ್ರಗತಿಪರರ ಹೊಟ್ಟೆ ನೋಯಿಸುವುದಕ್ಕೆ ಯಾವುದೇ ಅರ್ಥವಿಲ್ಲ.

ಶ್ರೀಕೃಷ್ಣಾರ್ಪಣಮಸ್ತು !’

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷದ್ ಮತ್ತು ನ್ಯಾಯವಾದಿಗಳು, ಮುಂಬಯಿ ಉಚ್ಚ ನ್ಯಾಯಾಲಯ. (೧೪.೧೦.೨೦೨೧)

ಹಿಂದೂ ಧರ್ಮದ ಬಗ್ಗೆ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ವಿವಿಧ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ರಾಮಜನ್ಮಭೂಮಿಯ ತೀರ್ಪನ್ನು ನೀಡುವಾಗ ಸರ್ವೋಚ್ಚ ನ್ಯಾಯಾಲಯದ ಸಂವಿಧಾನಪೀಠವು, ‘ಶ್ರೀರಾಮ ಮತ್ತು ರಾಮಜನ್ಮಭೂಮಿಯು ಪ್ರತಿಯೊಬ್ಬರ ಶ್ರದ್ಧೆ ಮತ್ತು ಸಂಸ್ಕೃತಿಯಾಗಿದೆ. ಪ್ರತಿಯೊಬ್ಬರ ಹೃದಯದಲ್ಲಿ ಶ್ರೀರಾಮನ ವಾಸವಿದೆ. ಆದುದರಿಂದ ರಾಮಜನ್ಮಭೂಮಿಯು ಭಾರತೀಯರಿಗಾಗಿ ಅತ್ಯಂತ ಆತ್ಮೀಯ ತೀರ್ಪಾಗಿದೆ’, ಎಂಬ ಸ್ಪಷ್ಟ ಶಬ್ದಗಳಲ್ಲಿ ಹೇಳಿತು.

೨. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಾನ್ಯ ಅನಿಲಕುಮಾರ ಆರ್. ದವೆ ಇವರು ಒಂದು ತೀರ್ಪಿನಲ್ಲಿ, “ವಿದ್ಯಾರ್ಥಿಗಳು ಶಿಶುವಿಹಾರದಲ್ಲಿ ಮತ್ತು ಪ್ರಾಥಮಿಕ ವರ್ಗಗಳಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತಗಳನ್ನು ಕಲಿಸಬೇಕು; ಏಕೆಂದರೆ ಈ ಸಂಸ್ಕಾರಗಳೇ ನಮ್ಮ ಸಂಸ್ಕೃತಿ ಮತ್ತು ನಮ್ಮ ವಂಶಪರಂಪರೆಯಾಗಿದೆ. ವಿದ್ಯಾರ್ಥಿ ದೆಶೆಯಲ್ಲಿಯೇ ಮಕ್ಕಳಿಗೆ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತಗಳನ್ನು ಕಲಿಸಿದರೆ ಶಾಲೆಯ ವಿದ್ಯಾರ್ಥಿಗಳು ಸುಶೀಲ ಮತ್ತು ಸುಸಂಸ್ಕಾರಿತರಾಗುವರು”, ಎಂದು ಹೇಳಿದರು.

ನ್ಯಾ. ದವೆಯವರು ಹೀಗೆ ಹೇಳಿದ ಕೂಡಲೇ ಧರ್ಮದ್ರೋಹಿಗಳ ಹೊಟ್ಟೆ ನೋವಾಗತೊಡಗಿತು. ಅವರು ನ್ಯಾಯಮೂರ್ತಿ ಅನಿಲ ಆರ್ ದವೆಯವರನ್ನು ಟೀಕಿಸತೊಡಗಿದರು. ನ್ಯಾ. ಕಾಟಜೂರವರು, “ಭಾರತವು ಜಾತ್ಯತೀತ ದೇಶವಾಗಿದೆ ಮತ್ತು ನ್ಯಾಯಮೂರ್ತಿಗಳು ಕೇಂದ್ರ ಸರಕಾರಕ್ಕೆ ಈ ರೀತಿ ಸೂಚಿಸುವುದು, ಅಯೋಗ್ಯವಾಗಿದೆ”, ಎಂದು ಹೇಳಿದರು.

೩. ಒಂದು ಸಲ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನ್ಯಾಯಮೂರ್ತಿ ಅರುಣ ಮಿಶ್ರಾ ಇವರು ಉಪಸ್ಥಿತರಿದ್ದರು. ಆಗ ನ್ಯಾಯಮೂರ್ತಿ ಅರುಣ ಮಿಶ್ರಾ ಎಲ್ಲರೆದುರು, “ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಪ್ರಗತಿಯನ್ನು ಮಾಡುತ್ತಿದ್ದು ದೇಶವು ಸುರಕ್ಷಿತವಾಗಿದೆ” ಎಂದು ಹೇಳಿದರು. ಈ ಹೇಳಿಕೆಯ ನಂತರ ಪ್ರಗತಿಪರರು ನ್ಯಾಯಮೂರ್ತಿ ಅರುಣ ಮಿಶ್ರಾರವರ ಮೇಲೆ ವಿಷಕಾರಿ ಟೀಕೆಯನ್ನು ಮಾಡಿದರು.

೪. ೨೦೧೮ ರಲ್ಲಿ ಮೇಘಾಲಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುದೀಪ ರಂಜನ ಸೇನ್ ಇವರು ಒಂದು ಪ್ರಕರಣದ ಆಲಿಕೆಯ ಸಮಯದಲ್ಲಿ, “ಭಾರತದ ವಿಭಜನೆಯಾದ ನಂತರ ಎರಡು ದೇಶಗಳು ನಿರ್ಮಾಣವಾದವು. ಆದುದರಿಂದ ನಿಜವಾಗಿ ನೋಡಿದರೆ ೧೯೪೭ ರಲ್ಲಿ ಸ್ವಾತಂತ್ರ್ಯ ದೊರಕಿದ ನಂತರ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕಾಗಿತ್ತು”, ಎಂದು ಹೇಳಿದರು.

ನ್ಯಾ. ಸೇನ್‌ರ ಹೇಳಿಕೆಯಿಂದಲೂ ಅನೇಕ ಧರ್ಮದ್ರೋಹಿ ಮತ್ತು ಪ್ರಗತಿಪರರಿಗೆ ತೊಂದರೆಯಾಯಿತು. ನ್ಯಾ. ಸೇನ್‌ರು ನಿವೃತ್ತರಾದ ನಂತರ ಮೇಘಾಲಯದ ದ್ವಿಸದಸ್ಯರ ನ್ಯಾಯಾಲಯವು ಅಂದರೆ ನ್ಯಾ. ಮೊಹಮ್ಮದ್ ಯಾಕೂಬ್ ಮೀರ್ ಮತ್ತು ನ್ಯಾ. ಎಚ್.ಎಸ್. ಇವರು ಆ ತೀರ್ಪುಪತ್ರವನ್ನು ರದ್ದುಗೊಳಿಸಿದರು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ (೨೪.೧೦.೨೦೨೧)