ನ್ಯಾಯವಾದಿಗಳು ಮೈ ಲಾರ್ಡ್, ಯುವರ್‌ ಲಾರ್ಡ್ ಶಿಪ್, ಯುವರ್ ಆನರ್, ಮುಂತಾದ ಶಬ್ದಗಳು ಉಪಯೋಗ ತಪ್ಪಿಸಬೇಕು !

ಒಡಿಶಾದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸೂಚನೆ

ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಈ ರೀತಿಯ ಪದಗಳು ಈಗಲೂ ಉಪಯೋಗಿಸಲಾಗುತ್ತದೆ, ಇದು ಈವರೆಗೂ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡು ! ಈಗಲಾದರೂ ಸರಕಾರಕ್ಕೆ ಈ ಶಬ್ದಗಳು ಶಾಶ್ವತವಾಗಿ ತೆಗೆದುಹಾಕಲು, ಹಾಗೂ ನ್ಯಾಯಾಲಯದಲ್ಲಿ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ಉಡುಪು ಬದಲಾವಣೆ ಮಾಡಿ ಅದು ಭಾರತೀಯ ರೀತಿಯದಾಗಿ ಮಾಡಲು ಪ್ರಯತ್ನಿಸಬೇಕು.- ಸಂಪಾದಕರು 

ಭುವನೇಶ್ವರ(ಒಡಿಶಾ) – ಓಡಿಶಾ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಧೀಶರು ಮೈ ಲಾರ್ಡ್ (ಸ್ವಾಮಿ ಅಥವಾ ಸರ್) ಯುವರ್ ಲಾರ್ಡ್ ಶಿಪ್ (ಪ್ರಭುತ್ವ ಇರುವ ವ್ಯಕ್ತಿಗೆ ನಮನ) ಯುವರ್ ಆನರ್ (ಸನ್ಮಾನಿತ ವ್ಯಕ್ತಿಗೆ ನಮನ) ಆನರೆಬಲ್ (ಮಾನ್ಯ) ಇಂತಹ ಪದಗಳ ಉಪಯೋಗಿಸಬಾರದು, ಹೀಗೆ ಸೂಚನೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎಸ್ ಮುರುಳಿಧರ್ ಇವರು ನ್ಯಾಯವಾದಿಗೆ ಹೇಳಿದರು. ಈ ಪದಗಳ ಬದಲು ಸರ್ ಅಥವಾ ಇತರ ಪರ್ಯಾಯ ಪದಗಳನ್ನು ಬಳಸಬಹುದು, ಎಂದು ಸಹ ನ್ಯಾಯಾಧೀಶರು ಹೇಳಿದರು. ಈ ರೀತಿಯ ಕಾನೂನು ಇಲ್ಲದೇ ಇರುವುದರಿಂದ ನ್ಯಾಯಾಲಯ ನೇರ ಆದೇಶ ನೀಡಲು ಸಾಧ್ಯವಿಲ್ಲ, ಇದನ್ನು ಸೂಚನೆಯ ಸ್ಥಳದಲ್ಲಿ ನೋಡಬೇಕು.

೧. ಈ ಮೊದಲು ೨೦೨೦ ನೆಯ ಇಸ್ವಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅಂದಿನ ನ್ಯಾಯಾಧೀಶರಾದ ಶರದ ಬೋಬಡೆ ಇವರು ಒಬ್ಬ ನ್ಯಾಯವಾದಿಗಳಿಗೆ ಯುವರ್ ಆನರ್ ಈ ಪದ ಉಪಯೋಗಿಸಲು ತಡೆದಿದ್ದರು. ನೀವು ಅಮೇರಿಕಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುತ್ತಿದ್ದಿರಾ ? ಯುವರ್ ಆನರ್ ಇದರ ಉಪಯೋಗ ಅಲ್ಲಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಆಗುತ್ತದೆ, ಭಾರತದಲ್ಲಿ ಅಲ್ಲ. ಹೇಗೆ ನ್ಯಾಯಾಧೀಶ ಬೋಬಡೆಯವರು ಹೇಳಿದ್ದರು.

೨.೨೦೨೦ ನೆಯ ಇಸ್ವಿಯಲ್ಲಿ ಕೊಲ್ಕತ್ತಾ ಉಚ್ಚ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯಾಧೀಶ ಥೊಟ್ಟತಿಲ್ ಬಿ ನಾಯರ್ ರಾಧಾಕೃಷ್ಣನ್ ಇವರು ಬಂಗಾಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಇಲ್ಲಿಯ ನ್ಯಾಯಾಲಯದ ಅಧಿಕಾರಿಗಳು ಮತ್ತು ನ್ಯಾಯವಾದಿಗಳಿಗೆ ಮೈ ಲಾರ್ಡ್ ಅಥವಾ ಲಾರ್ಡ್ ಶಿಪ್ ಇದರ ಬದಲು ಸರ್ ಎಂದು ಹೇಳಲು ಕರೆ ನೀಡಿದ್ದರು.