ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ! – ಮದ್ರಾಸ್ ಉಚ್ಚ ನ್ಯಾಯಾಲಯ

2011 ರ ಜನಗಣತಿಯಲ್ಲಿ ಶೇ. 48.5 ರಷ್ಟು ಹಿಂದೂಗಳಿದ್ದರು; ಆದರೆ ಪ್ರತ್ಯಕ್ಷದಲ್ಲಿ ಮಾತ್ರ ಶೇ. 62 ರಷ್ಟು ಜನರು `ಕ್ರಿಪ್ಟೋ ಕ್ರಿಶ್ಚಿಯನ್’ ಆಗಿರುವುದು ನ್ಯಾಯಾಲಯದ ಅಭಿಪ್ರಾಯ !

ಹಿಂದೂ ವಿರೋಧಿ ಹೇಳಿಕೆ ನೀಡುವ ಪಾದ್ರಿಗಳ ವಿರುದ್ಧ ನೀಡಿರುವ ದೂರನ್ನು ರದ್ದುಗೊಳಿಸಲು ನ್ಯಾಯಾಲಯದಿಂದ ನಿರಾಕರಣೆ !

* ಹಿಂದೂವಿರೋಧಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ಮದ್ರಾಸ ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆಗಳು ! ನ್ಯಾಯಾಲಯವು ಈ ರೀತಿ ವಾಸ್ತವದೊಂದಿಗೆ ಹಿಂದೂವಿರೋಧಿ ಷಡ್ಯಂತ್ರ್ಯವನ್ನು ಬಯಲು ಮಾಡಿದರೆ ಸಮಾಜಕ್ಕೆ ವಾಸ್ತವದ ಅರಿವು ಮೂಡಿ ಜಾಗೃತಗೊಳ್ಳಲು ಸಹಾಯವಾಗುವುದು !- ಸಂಪಾದಕರು 

* ನ್ಯಾಯಾಲಯವು ವ್ಯಕ್ತಪಡಿಸಿದ ಚಿಂತೆಯೆಂದರೆ ಕೇವಲ ಎಳ್ಳಿನಷ್ಟಾಗಿದೆ. ಪ್ರತ್ಯಕ್ಷದಲ್ಲಿ ದೇಶಾದ್ಯಂತ `ಹಿಂದೂ’ ಎಂದು ಗುರುತಿಸಿಕೊಂಡಿರುವರು; ಆದರೆ ಕ್ರೈಸ್ತ ಅಥವಾ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವ ನೂರಾರು ಜನರಿದ್ದಾರೆ. `ಮತಾಂತರ ಎಂದರೆ ರಾಷ್ಟ್ರಾಂತರ’ ಎಂದು ಸ್ವಾತಂತ್ರ್ಯವೀರ ಸಾವರಕರರ ಹೇಳಿಕೆಯಂತೆ ಇಂತಹವರಿಂದ ಭಾರತದ ಅನೇಕ ಭಾಗಗಳಾಗುವ ಮೊದಲೇ ಭಾರತವನ್ನು `ಹಿಂದೂ ರಾಷ್ಟ್ರ’ ಎಂದು ಘೋಷಿಸಿರಿ !- ಸಂಪಾದಕರು 

* ಒಂದು ದೊಡ್ಡ ರಾಜ್ಯದ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಹೆಚ್ಚಿನ ಪ್ರಸಾರ ಮಾಧ್ಯಮಗಳು ದೇಶದ ಮುಂದೆ ತಂದಿಲ್ಲ, ಎಂಬುದನ್ನು ಅರಿತುಕೊಳ್ಳಿರಿ ! ಇಂತಹ ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳ ಮೇಲೆ ಹಿಂದೂಗಳು ಬಹಿಷ್ಕಾರ ಏಕೆ ಹಾಕಬಾರದು ?- ಸಂಪಾದಕರು 

* ಮತಾಂತರಗೊಂಡ ಕ್ರೈಸ್ತರು ಮತ್ತು ಅವರನ್ನು ಮತಾಂತರಗೊಳಿಸುವ ಕ್ರೈಸ್ತ ಸಂಘಟನೆಗಳು ಮತ್ತು ಪಾದ್ರಿ ಮುಂತಾದವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವುದು ಅಪೇಕ್ಷಿತವಾಗಿದೆ !- ಸಂಪಾದಕರು 

‘ಕ್ರಿಪ್ಟೋ ಕ್ರಿಶ್ಚಿಯನ್ ಎಂದರೆ ಏನು ?’, ಈ ಬಗ್ಗೆ ನ್ಯಾಯಾಲಯವೇ ವ್ಯಾಖ್ಯಾನಿಸಿದೆ !

ನ್ಯಾಯಾಲಯ ನೀಡಿದ ವ್ಯಾಖ್ಯಾನದ ಪ್ರಕಾರ ಪರಿಶಿಷ್ಟ ಜಾತಿಯ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಮತ್ತು ಅವರು ಕ್ರೈಸ್ತ ಧರ್ಮದ ಆಚರಣೆಯನ್ನೂ ಮಾಡುತ್ತಾರೆ; ಆದರೆ `ಸರಕಾರದಿಂದ ಹಿಂದುಳಿದ ವರ್ಗದ ಹಿಂದೂಗಳಿಗೆ ನೀಡಲಾಗುವ ಮೀಸಲಾತಿ ಇತ್ಯಾದಿ ಸೌಲಭ್ಯಗಳು ನಿರಂತರವಾಗಿ ಸಿಗುತ್ತಿರಬೇಕು’, ಅದಕ್ಕಾಗಿ ದಾಖಲೆಗಳಲ್ಲಿ `ಹಿಂದೂ’ ಎಂದು ಹಾಗೆಯೇ ಇಟ್ಟುಕೊಳ್ಳುತ್ತಾರೆ. ಇಂತಹ ಜನರನ್ನು `ಕ್ರಿಪ್ಟೋ ಕ್ರಿಶ್ಚಿಯನ್’ ಎಂದು ಹೇಳಲಾಗುತ್ತದೆ.

ಮದ್ರಾಸ್ ಉಚ್ಚ ನ್ಯಾಯಾಲಯ

ಕನ್ಯಾಕುಮಾರಿ (ತಮಿಳುನಾಡು) – ಕನ್ಯಾಕುಮಾರಿ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. 2011ರ ಜನಗಣತಿಯಲ್ಲಿ ‘ಕ್ರಿಪ್ಟೋ-ಕ್ರಿಶ್ಚಿಯನ್’ ಈ ಬಗ್ಗೆ ವಾಸ್ತವ ಪ್ರತಿಬಿಂಬಿತವಾಗಿಲ್ಲ. ಕನ್ಯಾಕುಮಾರಿ ಜಿಲ್ಲೆಯ ಧರ್ಮಾಧಾರಿತ ಜನಸಂಖ್ಯೆಯ ಮುಖವಾಡ ಪೂರ್ಣವಾಗಿ ತದ್ವಿರುದ್ಧವಾಗಿ ತೋರಿಸಲಾಯಿತು. 2011 ರ ಜನಗಣತಿಯಲ್ಲಿ ಹಿಂದೂಗಳನ್ನು ಬಹುಸಂಖ್ಯಾತರೆಂದು ತೋರಿಸಲಾಯಿತು. ಆದರೆ ಪ್ರತ್ಯಕ್ಷದಲ್ಲಿ 1980 ರಿಂದಲೇ ಈ ಜಿಲ್ಲೆಯಲ್ಲಿ ಹಿಂದೂ ಅಲ್ಪಸಂಖ್ಯಾತರಾಗುತ್ತಾ ಹೋದರು. 2011 ರ ಜನಗಣತಿಯನುಸಾರ ಜಿಲ್ಲೆಯಲ್ಲಿ ಶೇ. 48.5 ರಷ್ಟು ಹಿಂದೂ ಇರುವರೆಂದು ಹೇಳಲಾಯಿತು; ಆದರೆ ಪ್ರತ್ಯಕ್ಷದಲ್ಲಿ ಶೇ. 62 ರಷ್ಟು ಜನರು `ಕ್ರಿಪ್ಟೋ ಕ್ರಿಶ್ಚಿಯನ್’ ಇದ್ದಾರೆಂದು ಮದ್ರಾಸ್ ಉಚ್ಚನ್ಯಾಯಾಲಯವು ಸ್ವತಃ ಸ್ಪಷ್ಟಪಡಿಸಿದೆ.

ಕನ್ಯಾಕುಮಾರಿ ಜಿಲ್ಲೆಯ ಅರುಮನಯಿ ಗ್ರಾಮದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ವ್ಯಂಗ್ಯ ಮಾಡಿ ದ್ವೇಷದ ಭಾಷಣ ಮಾಡುವ ಕ್ಯಾಥೋಲಿಕ್ ಪಾದ್ರಿ ಪಿ. ಜಾರ್ಜ ಪೊನೈಯ್ಯಾರ ವಿರುದ್ಧದ ದೂರನ್ನು ಆಹ್ವಾನಿಸುವ ಮನವಿಯನ್ನು ಪೊನ್ನಯ್ಯಾ ಇವರು ಸ್ವತಃ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಈ ಪ್ರಕರಣದ ಆದೇಶವನ್ನು ನೀಡುವಾಗ ನ್ಯಾಯಮೂರ್ತಿ ಜಿ. ಆರ್. ಸ್ವಾಮಿನಾಥನ್ ಇವರ ವಿಭಾಗಿಯಪೀಠವು `ಅವರ ವಿರುದ್ಧದ ಆರೋಪವನ್ನು ರದ್ದುಗೊಳಿಸಲು ಸಾಧ್ಯವಿಲ್ಲ’, ಎಂದು ಹೇಳಿದೆ.

ನ್ಯಾಯಾಲಯದ ಆದೇಶದಲ್ಲಿ ಬರೆದಿರುವ ಭಯಾನಕ ವಾಸ್ತವ !

1. ಜನಗಣತಿಯನ್ನು ಮಾಡುವಾಗ ಮತಾಂತರಿತ ಜನರ ಹೊಸ ಧರ್ಮದ ವಿಚಾರ ಮಾಡಲಾಗುತ್ತಿಲ್ಲ. ಅವರಿಗೆ ಮೂಲ ಧರ್ಮದಲ್ಲಿ ಪರಿಗಣಿಸಲಾಗುತ್ತದೆ. (ಈಗ ನಡೆಯಲಿರುವ ಜನಗಣತಿಯಲ್ಲಿ ಈ ಸೂತ್ರದ ವಿಚಾರ ಆದ್ಯತೆಯಿಂದ ಮಾಡಬೇಕು, ಎಂದು ಹಿಂದೂ ಧರ್ಮ ಪ್ರೇಮಿಗಳಿಗೆ ಅನಿಸುತ್ತದೆ. ಅದರಿಂದಲೇ ಭಾರತದಲ್ಲಿರುವ ಭಯಾನಕ ವಾಸ್ತವ ಜಗತ್ತಿನ ಎದುರಿಗೆ ಬರಬಹುದು, ಎನ್ನುವುದನ್ನು ಅರಿತುಕೊಳ್ಳಿರಿ ! – ಸಂಪಾದಕರು)

2. ಓರ್ವ ನ್ಯಾಯಾಧೀಶರ ಬಗ್ಗೆಯೂ ಇದೇರೀತಿ ನಡೆದಿತ್ತು. ಅವರು ಹಿಂದೂ ಧರ್ಮ ಬಿಟ್ಟು ಕ್ರೈಸ್ತ ಧರ್ಮ ಸ್ವೀಕರಿಸಿದ್ದರು. ಅನೇಕರಿಗೆ ಇದು ತಿಳಿದಿತ್ತು; ಆದರೆ ಈ ಸತ್ಯವನ್ನು ಯಾರೂ ಮತ್ತು ಎಂದಿಗೂ ಸ್ಪಷ್ಟವಾಗಿ ಮಂಡಿಸಲಿಲ್ಲ. ನ್ಯಾಯಾಧೀಶರ ಮೃತ್ಯುವಿನ ನಂತರ ಅವರನ್ನು ಕ್ರೈಸ್ತ ಧರ್ಮದನುಸಾರ ಹೂಳಿದರು.

3. ಭಾರತದ ವಿಭಜನೆಯು ಧರ್ಮದ ಆಧಾರದಲ್ಲಿ ಆಯಿತು. ಆ ಕಾಲದಲ್ಲಿ ಲಕ್ಷಾಂತರ ಜನರಿಗೆ ಜೀವ ತೆತ್ತಬೇಕಾಯಿತು. ಆದರೂ ಆಗಿನ ರಾಜಕೀಯ ಮುಖಂಡರು `ಜಾತ್ಯತೀತ ರಾಜನೀತಿ’ ಸ್ವೀಕರಿಸಿದರು. ಇದು ಆಶ್ಚರ್ಯಕಾರಕವಾಗಿತ್ತು. ಆಗ ಇದ್ದ ಧರ್ಮದ ಜನಸಂಖ್ಯೆಯನ್ನು ಹಾಗೆಯೇ ಕಾಯ್ದುಕೊಳ್ಳುವುದು ಆವಶ್ಯಕವಾಗಿತ್ತು; ಆದರೆ ದುರದೃಷ್ಟಕರದಿಂದ ಹಾಗೆ ಆಗಲಿಲ್ಲ.

4. ಜನತೆಗೆ ಧಾರ್ಮಿಕಸ್ವಾತಂತ್ರ್ಯವಿದೆ. ಧರ್ಮಪ್ರಸಾರ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ; ಆದರೆ ಒಂದು ಸಮೂಹದಿಂದ ಈ ರೀತಿ ಕ್ರಮಬದ್ಧವಾಗಿ ಮತಾಂತರ ಮಾಡುವುದು, ಇದು ಪೂರ್ಣವಾಗಿ ಸ್ವೀಕರಿಸಲು ಅಸಾಧ್ಯವಾಗಿದೆ.

5. ಧರ್ಮದ ಪ್ರಕಾರ ಜನಸಂಖ್ಯೆಯ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ, ಭವಿಷ್ಯವು ಭಯಾನಕವಾಗಿದೆ. ಸರಕಾರವು ನ್ಯಾಯದ ರಾಜ್ಯ ನೀಡುವುದು ಆಪೇಕ್ಷಿತವಾಗಿದೆ.