`ಸನಾತನ ಪ್ರಭಾತ’ದ ಕುರಿತು ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಗೌರವೋದ್ಗಾರ !

`ಸನಾತನ ಪ್ರಭಾತ’ವು ಕೇವಲ ಸುದ್ದಿಸಂಗ್ರಹದ ಪತ್ರಿಕೆಯಲ್ಲ, ನಿಜವಾದ ಅರ್ಥದಲ್ಲಿ ಸಮಾಜಪ್ರಬೋಧನೆಯ ನಿಯತಕಾಲಿಕೆ !

ಸಂತರ ಮಾರ್ಗದರ್ಶನ ಪಡೆದು ಕಾರ್ಯ ಮಾಡಿದಾಗಲೇ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ ! – ಶ್ರೀ. ವಿಜಯ ಕುಮಾರ್, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ಉಡುಪಿ

ಇಂದು ದೇಶದಲ್ಲಿ ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ವಕ್ಫ್ ಕಾಯ್ದೆ, ಭಯೋತ್ಪಾದನೆ, ಭ್ರಷ್ಟಾಚಾರ ಸೇರಿದಂತೆ ಅನೇಕ ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ಕೇವಲ ಶಾರೀರಿಕ ಮತ್ತು ಮಾನಸಿಕ ಬಲದಿಂದ ಸಾಧ್ಯವಿಲ್ಲದೆ ಆಧ್ಯಾತ್ಮಿಕ ಬಲದ ಅವಶ್ಯಕತೆ ಇದೆ

‘ಪಠಾಣ’ ನಂತಹ ಚಲನಚಿತ್ರಗಳನ್ನು ನಿರ್ಮಿಸುವವರನ್ನು ಭಿಕ್ಷುಕರನ್ನಾಗಿ ಮಾಡಿ ! – ಕಾಲಿಚರಣ ಮಹಾರಾಜರಿಂದ ಕರೆ

ಯಾರು ಧರ್ಮದ ವಿರುದ್ಧವಿದ್ದಾರೆಯೋ,  ಅವರನ್ನು ಬಹಿಷ್ಕರಿಸಬೇಕು., ನಾನು ಎಲ್ಲಾ ಹಿಂದೂ ಬಾಂಧವರಿಗೆ ಮತ್ತು ಭಗಿನಿಯರಿಗೆ ಬಂಧುಭಗಿನಿಯರಿಗೆ ಕರೆ ನೀಡುತ್ತೇನೆ, ಎಚ್ಚೆತ್ತುಕೊಳ್ಳಿ ಮತ್ತು ಹಿಂದೂ ಧರ್ಮದ ಅವಮಾನ ಮಾಡುವ ಚಲನಚಿತ್ರಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿರಿ.

ಪೂ. ರಮಾನಂದ ಗೌಡ ಇವರು ಮಾರ್ಗದರ್ಶನದ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಾಡಿದ ಭಾವಪೂರ್ಣ ಪ್ರಾರ್ಥನೆ ಮತ್ತು ಶರಣಾಗತ ಸ್ಥಿತಿಯಲ್ಲಿ ವ್ಯಕ್ತಪಡಿಸಿದ ಕೃತಜ್ಞತೆ !

ಮಾರ್ಗದರ್ಶನದ ಕೊನೆಗೆ ಪೂ. ರಮಾನಂದಣ್ಣನವರು ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡಿದರು. ಈ ಪ್ರಾರ್ಥನೆಯು ಅವರಿಗೆ ಒಳಗಿನಿಂದ ಹೊಳೆದಿತ್ತು. ಅದನ್ನು ಕೇಳಿ ಎಲ್ಲ ಸಾಧಕರಿಗೆ ಭಾವಜಾಗೃತಿಯಾಯಿತು ಮತ್ತು ಅವರು ಒಂದು ಬೇರೆ ಸ್ಥಿತಿಯನ್ನೇ ಅನುಭವಿಸಿದರು.

ಭಗವದ್ಗೀತೆ ಏನು ಹೇಳುತ್ತದೆ ?

ಸಂಕ್ಷಿಪ್ತವಾಗಿ ಹೇಳುವುದಾದರೆ, ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ. ಅನೇಕ ಮಾರ್ಗಗಳನ್ನು ಹೇಳಿ ನಮ್ಮ ಪ್ರಕೃತಿಗೆ ಇಷ್ಟವಾಗುವ ಮಾರ್ಗವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಕೊಡುತ್ತದೆ.

ಯಾವುದಾದರೂ ಪ್ರಸಂಗದಿಂದ ಅನಾವಶ್ಯಕ ವಿಚಾರಗಳು ಹೆಚ್ಚಾದರೆ ಏನು ಮಾಡಬೇಕು ?

ಯಾವ ಪ್ರಸಂಗ ಘಟಿಸಿದೆಯೋ, ನನ್ನ ಜೀವನದಲ್ಲಿ ಆ ಪ್ರಸಂಗಕ್ಕೆ ಎಷ್ಟು ಬೆಲೆಯಿದೆ ? ಆ ಪ್ರಸಂಗದಿಂದ ನನ್ನ ಜೀವನದ ಮೇಲೆ ಎಷ್ಟು ಪರಿಣಾಮವಾಗಲಿದೆ ? ತಾತ್ಕಾಲಿಕವೋ ಅಥವಾ ದೀರ್ಘಕಾಲೀನ ಪರಿಣಾಮ ಬೀರಲಿದೆಯೋ ?’, ಎಂಬುದನ್ನು ನಾವು ನಮ್ಮ ಮನಸ್ಸಿಗೆ ಕೇಳಬೇಕು.

ಪ್ರತಿಯೊಬ್ಬ ಹಿಂದೂವಿನ ಹೃದಯದಲ್ಲಿ ರಾಮಮಂದಿರ ಸ್ಥಾಪನೆಯಾಗಲು ‘ಗುರುಕೃಪಾಯೋಗಾನುಸಾರ’ ಸಾಧನೆಯನ್ನು ಹೇಳಿ ಅದರಂತೆ ಸಾಧಕರಿಂದ ಕೃತಿಯನ್ನು ಮಾಡಿಸಿಕೊಳ್ಳುವ ಪರಾತ್ಪರ ಗುರು ಡಾ. ಆಠವಲೆ !

“ಸದ್ಯ ದೇಶದಲ್ಲಿ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳನ್ನು ಕಟ್ಟುವ ಮೊದಲು ‘ದೇವಸ್ಥಾನಗಳ ರಕ್ಷಣೆ, ವ್ಯವಸ್ಥಾಪನೆ ಮತ್ತು ದೇವಸ್ಥಾನವನ್ನು ಕಟ್ಟುವ ಉದ್ದೇಶವನ್ನು ಹೇಗೆ ಸಾರ್ಥಕಗೊಳಿಸಬಹುದು ?’, ಎಂಬುದನ್ನು ನೋಡಬೇಕು” ಎಂದು ಹೇಳಿದರು.

ಗುರುಮಂತ್ರದ ಮಹತ್ವವನ್ನು ಗಮನದಲ್ಲಿಡದೇ ಗುರುಗಳ ದೇಹದ ಹೆಸರಿನಲ್ಲಿ ಸಿಲುಕುವ ಶಿಷ್ಯರು !

‘ಗುರುಗಳು ಶಿಷ್ಯನ ಉದ್ಧಾರಕ್ಕಾಗಿ ಶಿಷ್ಯನ ಅವಶ್ಯಕತೆಗನುಸಾರ ಗುರುಮಂತ್ರವೆಂದು ಯಾವುದಾದರೊಂದು ದೇವತೆಯ ನಾಮ ಜಪವನ್ನು ಮಾಡಲು ಹೇಳುತ್ತಾರೆ. ಈ ನಾಮಜಪವು ಆ ಸಾಧಕನ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುತ್ತದೆ, ಹಾಗೆಯೇ ಆ ಜಪದ ಹಿಂದೆ ಗುರುಗಳ ಸಂಕಲ್ಪವೂ ಕಾರ್ಯನಿರತವಾಗಿರುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಆಧ್ಯಾತ್ಮಿಕ ಮಟ್ಟದ ಮಹತ್ವ ‘ಉಚ್ಚ ಆಧ್ಯಾತ್ಮಿಕ ಮಟ್ಟವಿದ್ದರೆ, ರಜ -ತಮಗಳ ಪರಿಣಾಮವಾಗುವುದಿಲ್ಲ. ಬದಲಾಗಿ ಉಚ್ಚ ಆಧ್ಯಾತ್ಮಿಕ ಮಟ್ಟದಿಂದ ನಿರ್ಮಾಣವಾದ ಚೈತನ್ಯದಿಂದ ರಜ-ತಮಗಳ ಮೇಲೆ ಪರಿಣಾಮ ವಾಗುತ್ತದೆ ಮತ್ತು ರಜ-ತಮ ಕಡಿಮೆಯಾಗುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡಬೇಕಿದ್ದರೆ, ಭಾರತ ಬಿಟ್ಟು ಬೇರೆ ಯಾವುದೇ ದೇಶದಲ್ಲಿ ರಬೇಡಿ; ಏಕೆಂದರೆ ಭಾರತೀಯರ ಸ್ಥಿತಿ ಸರಿಯಿರದಿದ್ದರೂ, ಭಾರತ ದಂತಹ ಸಾತ್ತ್ವಿಕ ದೇಶ ವಿಶ್ವದಲ್ಲಿ ಎಲ್ಲಿಯೂ ಇಲ್ಲ. ಬೇರೆ ಎಲ್ಲಾ ದೇಶಗಳಲ್ಲಿ ರಜ-ತಮದ ಪ್ರಮಾಣ ಅತ್ಯಧಿಕವಾಗಿದೆ; ಆದರೂ ಶೇ. ೫೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯು ಜಗತ್ತಿನಲ್ಲಿ ಎಲ್ಲಿಯೂ ಇದ್ದು ಸಾಧನೆ ಮಾಡಬಹುದು !