Nagpur Arrest : ಮುಸಲ್ಮಾನರು ನಾಗಪುರದಲ್ಲಿ ನಡೆಸಿದ ಗಲಭೆಯ ಪ್ರಕರಣದಲ್ಲಿ ‘ಮೈನಾರಿಟಿ ಡೆಮಾಕ್ರಟಿಕ್ ಪಕ್ಷ’ದ ಇಬ್ಬರ ಬಂಧನ !

ನಾಗಪುರ – ನಾಗಪುರದಲ್ಲಿ ಮುಸಲ್ಮಾನರು ನಡೆಸಿದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ‘ಮೈನಾರಿಟಿ ಡೆಮಾಕ್ರಟಿಕ್ ಪಕ್ಷ’ದ ಕಾರ್ಯಾಧ್ಯಕ್ಷ ಹಮೀದ ಇಂಜಿನಿಯರ ಮತ್ತು ಮೊಹಮ್ಮದ ಶಹಜಾದ ಖಾನನನ್ನು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯವಸ್ಥಿತವಾಗಿ ಕಥೆಗಳನ್ನು ಹರಡುವ ಮೂಲಕ ಈ ಹಿಂಸಾಚಾರವನ್ನು ನಡೆಸಲಾಗಿದೆ. ಈ ಪ್ರಕರಣದಲ್ಲಿ ಸುಳ್ಳು ಮಾಹಿತಿಯನ್ನು ಹರಡಿದ ಸಾಮಾಜಿಕ ಮಾಧ್ಯಮಗಳನ್ನು ಗುರುತಿಸಿ ಪೊಲೀಸರು ಮುಂದಿನ ಕ್ರಮಕೈಗೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ಆರಂಭದಲ್ಲಿ 14 ಜನರನ್ನು ಬಂಧಿಸಲಾಗಿತ್ತು. ಅನಂತರ ಬಂಧಿತರ ಒಟ್ಟು ಸಂಖ್ಯೆಯು 105 ಕ್ಕೆ ತಲುಪಿದೆ. ಪೊಲೀಸರು ನೀಡಿರುವ ಮಾಹಿತಿಯಲ್ಲಿ ಬಂಧಿತರಲ್ಲಿ 10 ಅಪ್ರಾಪ್ತ ಮಕ್ಕಳೂ ಸೇರಿದ್ದಾರೆ. (ಈ ಅಪ್ರಾಪ್ತ ಮಕ್ಕಳು ಮದರಸಾಗಳಲ್ಲಿ ಕಲಿಯುತ್ತಿದ್ದರೇ ? ಇದರ ತನಿಖೆಯೂ ನಡೆಯಬೇಕು ! – ಸಂಪಾದಕರು)

‘ಬಜರಂಗದಳದ ಕಾರ್ಯಕರ್ತರು ಗಲಭೆ ಮಾಡಿದ್ದಾರೆ! (ಅಂತೆ) ‘ – ಹಮೀದ ಇಂಜಿನಿಯರ

ನಾಗಪುರ ಗಲಭೆ

ಇದಕ್ಕೂ ಮೊದಲು ಪಕ್ಷದ ನಗರಾಧ್ಯಕ್ಷರಾದ ಫಹೀಮ ಖಾನರವರ ಬಂಧನವಾದಾಗ, ಬಂಧನವಾಗುವ ಮೊದಲೇ ಹಮೀದ ಇಂಜಿನಿಯರ ಒಂದು ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ, ಈ ಗಲಭೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಸಂಜೆ 7.30 ಕ್ಕೆ ಬಜರಂಗದಳದ ಕಾರ್ಯಕರ್ತರು ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ತೂರಾಟ ಮಾಡಿದರು, ಇದರಿಂದ ಗಲಭೆ ಭುಗಿಲೆದ್ದಿತು ಎಂದು ಹೇಳಿದರು. (ಕಳ್ಳನ ಪಿಳ್ಳೆ ನೆವ ಎಂಬ ಮನೋಭಾವದ ಹಮೀದ ಇಂಜಿನಿಯರ ! ಮತಾಂಧ ಮುಸಲ್ಮಾನರು ಗಲಭೆ ನಡೆಸಿರುವುದು ಸ್ಪಷ್ಟವಾಗಿದ್ದರೂ ಮತ್ತು ಪಕ್ಷದ ನಗರಾಧ್ಯಕ್ಷನನ್ನು ಮುಖ್ಯ ಸೂತ್ರಧಾರನೆಂದು ಬಂಧಿಸಿದ ನಂತರವೂ ನಿರ್ಲಜ್ಜವಾಗಿ ಸುಳ್ಳು ಹೇಳುವ ಹಮೀದ ಇಂಜಿನಿಯರ ಮೇಲೆ ಈಗ ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ ! ಅವರ ಪಕ್ಷವನ್ನು ನಿಷೇಧಿಸುವುದು ಕೂಡ ಅಗತ್ಯ! – ಸಂಪಾದಕರು)

ಸಂಪಾದಕೀಯ ನಿಲುವು

ಇಂತಹ ಗಲಭೆಕೋರ ಪಕ್ಷವನ್ನು ಕೇಂದ್ರ ಸರಕಾರವು ನಿಷೇಧಿಸಬೇಕು ! ಇದಕ್ಕಾಗಿ ಹಿಂದೂಗಳು ಮನವಿ ಸಲ್ಲಿಸುವ ಸ್ಥಿತಿ ಬರಬಾರದು !