‘ಮುಸಲ್ಮಾನರನ್ನು ಬೆದರಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆವು’! – ಉಪಮುಖ್ಯಮಂತ್ರಿ ಅಜಿತ ಪವಾರ

ಮುಸಲ್ಮಾನರಿಂದ ಹಿಂದೂಗಳ ಮೇಲೆ ನಡೆಯುವ ದಾಳಿಯ ಬಗ್ಗೆ ಮೌನತಾಳುವ ಅಜಿತ ಪವಾರರಿಂದ ಇಫ್ತಾರ್ ಕೂಟದಲ್ಲಿ ಹೇಳಿಕೆ!

(ಇಫ್ತಾರ್ ಅಂದರೆ ಮುಸಲ್ಮಾನರು ರಮಜಾನ್ ಸಮಯದಲ್ಲಿ ಉಪವಾಸವನ್ನು ಬಿಡುವುದು)

ಮುಂಬಯಿ – ಮುಸಲ್ಮಾನರನ್ನು ಬೆದರಿಸಲು ಅಥವಾ ಧಾರ್ಮಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಅಜಿತ ಪವಾರ ಎಚ್ಚರಿಕೆ ನೀಡಿದರು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ ಕೂಟದಲ್ಲಿ ಅವರು ಮಾತನಾಡುತ್ತಿದ್ದರು.

ಮುಸಲ್ಮಾನರಿಗೆ ಭರವಸೆ ನೀಡುತ್ತಾ, ಉಪಮುಖ್ಯಮಂತ್ರಿ ಅಜಿತ ಪವಾರ ಅವರು, ನಾನು ನಿಮ್ಮ ಸಹೋದರನಾಗಿ ನಿಮ್ಮೊಂದಿಗೆ ನಿಂತಿದ್ದೇನೆ. ನಮ್ಮ ಮುಸಲ್ಮಾನ ಸಹೋದರರು ಮತ್ತು ಸಹೋದರಿಯರಿಗೆ ಕಿರುಕುಳ ನೀಡಲು ಅಥವಾ ಅವರ ಕಡೆ ಕೆಟ್ಟ ದೃಷ್ಟಿಯಿಂದ ನೋಡಲು ಯತ್ನಿಸಿದರೆ, ಅವರನ್ನು ಬಿಡುವುದಿಲ್ಲ. ನಾವು ಹೋಳಿ ಹಬ್ಬವನ್ನು ಒಟ್ಟಿಗೆ ಆಚರಿಸಿದ್ದೇವೆ. ಈಗ ಯುಗಾದಿ ಮತ್ತು ಈದ್ ಅನ್ನು ಕೂಡ ಒಟ್ಟಿಗೆ ಆಚರಿಸೋಣ. ನಾವು ಒಗ್ಗಟ್ಟಾಗಿ ಇರಬೇಕೆಂಬ ಸಂದೇಶವನ್ನು ಈ ಎಲ್ಲಾ ಹಬ್ಬಗಳು ನೀಡುತ್ತವೆ. ನಾವು ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತೇವೆ; ಏಕೆಂದರೆ ಏಕತೆಯೇ ನಮ್ಮ ಶಕ್ತಿ. ನಾನು ಮುಸಲ್ಮಾನರ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತೇನೆ ಎಂದರು. (‘ಹಿಂದೂಗಳ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತೇನೆ’ ಎಂದು ಈ ರಾಜಕೀಯ ನಾಯಕರು ಯಾವಾಗ ಹೇಳುತ್ತಾರೆ? ಅಥವಾ ಹಿಂದೂಗಳು ಅವರ ಮತಬ್ಯಾಂಕ್ ಅಲ್ಲವೆಂದು ನಿರ್ಲಕ್ಷ್ಯ ಮಾಡುತ್ತಾರೆಯೇ? – ಸಂಪಾದಕರು).

ಸಂಪಾದಕೀಯ ನಿಲುವು

  • ಭಾರತದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಗಳು, ಹಬ್ಬಗಳು ಸರಾಗವಾಗಿ ಎಂದಿಗೂ ನಡೆಯುವುದಿಲ್ಲ. ಮತಾಂಧ ಮುಸಲ್ಮಾನರು ಮಸೀದಿಗಳಿಂದ ಹಿಂದೂಗಳ ಮೇಲೆ ದಾಳಿ, ಕಲ್ಲು ತೂರಾಟ ಮಾಡುತ್ತಾರೆ ಮತ್ತು ಗಲಭೆಗಳು ಸಾಮಾನ್ಯವಾಗಿ ನಡೆಯುತ್ತವೆ; ಆದರೆ ಆಗ ಹಿಂದೂಗಳ ಪರವಾಗಿ ಅಜಿತ್ ಪವಾರ್ ಹಾಗೂ ಇತರೆ ಯಾವುದೇ ನಾಯಕರು ಮಾತನಾಡುವುದಿಲ್ಲ ಏಕೆ ?
  • ನಾಗಪುರದಲ್ಲಿ ಮತಾಂಧ ಮುಸಲ್ಮಾನರು ಪೊಲೀಸರು ಮತ್ತು ಹಿಂದೂಗಳ ಮೇಲೆ ಕೂಡ ದಾಳಿ ಮಾಡಿದ್ದರು. ಅವರಿಗೂ ಸಹ ಅಜಿತ ಪವಾರ ಸಮರ್ಥನೆ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ!