
ಸೋಲಾಪುರ – ‘ರೋಟರಿ ಕ್ಲಬ್ ಆಫ್ ಸೋಲಾಪುರ ನಾರ್ತ್’ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಸೋಲಾಪುರದ ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವುದರ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಕೈಜೋಡಿಸುವ ವ್ಯಕ್ತಿಗಳಿಗೆ ‘ವೊಕೇಶನಲ್ ಎಕ್ಸಲೆನ್ಸ್ ಅವಾರ್ಡ್ಸ್ 2025’ ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಶಾಲು, ತೆಂಗಿನಕಾಯಿ ಮತ್ತು ಸ್ಮರಣಿಕೆ ಈ ಪ್ರಶಸ್ತಿಯ ಸ್ವರೂಪವಾಗಿತ್ತು. ‘ವಾಲಚಂದ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಪ್ರಾಂಶುಪಾಲ ಡಾ. ವಿಜಯ ಅನಂತ ಆಠವಲೆ ಸೇರಿದಂತೆ ಒಟ್ಟು 6 ಜನರಿಗೆ ಸೋಲಾಪುರದ ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಸುಧೀರ ಖಿರಡ್ಕರ್ ಅವರಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಜಾನ್ವಿ ಮಖಿಜಾ ಮತ್ತು ನಿರ್ದೇಶಕ ಸುನೀಲ ದಾವಡಾ ಉಪಸ್ಥಿತರಿದ್ದರು.

“ಆತ್ಮೊನ್ನತಿಯ ನಂತರ ನಾವು ಸಮಾಜಕ್ಕೆ ಋಣಿಯಾಗಿದ್ದೇವೆ” ಎಂಬ ಅರಿವು ಇದ್ದರೆ, ಸಾಮಾಜಿಕ ಕರ್ತವ್ಯ ಪೂರೈಸಿದ ನಂತರ ಸಮಾಜವೂ ನಮ್ಮನ್ನು ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ನಮ್ಮ ಗುರುತು ಅಮೂಲ್ಯವಾದುದು ಎಂದು ಸಹಾಯಕ ಪೊಲೀಸ್ ಆಯುಕ್ತ ಖಿರಡ್ಕರ್ ಇವರು ಮಾರ್ಗದರ್ಶನ ಮಾಡುವಾಗ ಅಭಿಪ್ರಾಯಪಟ್ಟರು.
ಎಲ್ಲಾ ಪ್ರಶಸ್ತಿ ವಿಜೇತರ ಪರವಾಗಿ ಪ್ರಾಂಶುಪಾಲ ಡಾ. ವಿಜಯ ಆಠವಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕ್ಲಬ್‌ಗೆ ಕೃತಜ್ಞತೆ ಸಲ್ಲಿಸಿದರು.