ಆಶ್ರಮದ ಭೂಮಿಯಲ್ಲಿನ ನೀರಿನ ಸ್ಪಂದನಗಳನ್ನು ಹುಡುಕಲು ನಕಾಶೆಯ ಮೇಲಿನಿಂದ ಬೆರಳನ್ನು ತಿರುಗಿಸುತ್ತಿರುವಾಗ ‘ಬಾಯಿಯಲ್ಲಿ ಲಾಲಾರಸ ಬಂದ ಸ್ಥಳದಲ್ಲಿ ಭೂಮಿಯಲ್ಲಿ ನೀರಿದೆ, ಎಂದು ಅರಿವಾಗುವುದು ಹಾಗೂ ಅದೇ ಸ್ಥಳದಲ್ಲಿ ನೀರಿದೆ ಎಂದು ಸಾಬೀತಾಗುವುದು
‘ವಾರಾಣಸಿಯ ಆಶ್ರಮದ ಭೂಮಿಯಲ್ಲಿ ಬಾವಿಯನ್ನು ತೋಡಲು ‘ಅಲ್ಲಿನ ಭೂಮಿಯಲ್ಲಿ ನೀರು ಎಲ್ಲಿದೆ ?, ಎಂಬುದನ್ನು ಕಂಡು ಹಿಡಿಯಲಿಕ್ಕಿತ್ತು. ಅದಕ್ಕಾಗಿ ನನಗೆ ಆ ಸ್ಥಳದ ನಕಾಶೆಯನ್ನು ಕೊಟ್ಟಿದ್ದರು. ನಾನು ಆ ನಕಾಶೆಯ ಮೇಲಿನಿಂದ ಬೆರಳನ್ನು ತಿರುಗಿಸಿ ಭೂಮಿಯಲ್ಲಿ ನೀರಿರುವ ಜಾಗದ ಸ್ಪಂದನಗಳನ್ನು ನೋಡುತ್ತಿದ್ದೆ. ಅನಿರೀಕ್ಷಿತವಾಗಿ ನನಗೆ ಒಂದು ಸ್ಥಳದ ಮೇಲೆ ಬೆರಳನ್ನು ಇಟ್ಟಾಗ ಬಾಯಿಯಲ್ಲಿ ಲಾಲಾರಸ ಬಂತು.