ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ ಭಾರತದ ಹೇಳಿಕೆ!

ಜಿನೀವಾ (ಸ್ವಿಟ್ಜರ್ಲೆಂಡ್) – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 58 ನೇ ಅಧಿವೇಶನದ ಸಮಯದಲ್ಲಿ, ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಜಾವೇದ್ ಬೇಗ್ ಅವರು ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರೈಸ್ತರ ಮೇಲಿನ ದೌರ್ಜನ್ಯದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. “ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರೈಸ್ತರ ಸ್ಥಿತಿ ಭೀಕರವಾಗಿದೆ” ಎಂದು ಅವರು ಹೇಳಿದ್ದಾರೆ.
ವಿಶ್ವದ 157 ಕ್ರೈಸ್ತ ಪ್ರಾಬಲ್ಯದ ದೇಶಗಳ ಮೌನ!
ಜಾವೇದ್ ಬೇಗ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ, “ಪಾಕಿಸ್ತಾನದಲ್ಲಿ ಹಿಂದೂಗಳ ಮತ್ತು ಕ್ರೈಸ್ತರ ಹಿಂಸಾಚಾರ, ಕಿರುಕುಳ, ಬಲವಂತದ ಮತಾಂತರ, ಅಪಹರಣ ಮತ್ತು ಕೊಲೆಗಳನ್ನು ಎದುರಿಸುತ್ತಿದ್ದಾರೆ. ಎರಡೂ ಸಮುದಾಯಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲಾಗುತ್ತದೆ, ಇದು ದೇಶದ ಒಟ್ಟು ಜನಸಂಖ್ಯೆಯ ಕೇವಲ 3 ಪ್ರತಿಶತ ಇದೆ. ಚರ್ಚ್‌ಗಳು ಮತ್ತು ದೇವಾಲಯಗಳಂತಹ ಪ್ರಾರ್ಥನಾ ಸ್ಥಳಗಳನ್ನು ನಿಯಮಿತವಾಗಿ ಧ್ವಂಸಗೊಳಿಸಲಾಗುತ್ತದೆ. ಈ ಧರ್ಮಗಳ ಯುವತಿಯರನ್ನು ಅಪಹರಿಸಿ ಮುಸ್ಲಿಮರೊಂದಿಗೆ ಮದುವೆಯಾಗಲು ಒತ್ತಾಯಿಸಲಾಗುತ್ತದೆ. ಅಂತರರಾಷ್ಟ್ರೀಯ ಕ್ರೈಸ್ತ ಸಮುದಾಯವು ಈ ವಿಷಯದ ಬಗ್ಗೆ ಮೌನವಾಗಿದೆ. ಬ್ರೆಜಿಲ್, ಅಮೇರಿಕಾ, ರಷ್ಯಾ ಸೇರಿದಂತೆ 157 ಕ್ರೈಸ್ತ ಪ್ರಾಬಲ್ಯದ ದೇಶಗಳಲ್ಲಿ ಯಾವುದೇ ದೇಶವು ಪಾಕಿಸ್ತಾನದಲ್ಲಿನ ಕ್ರೈಸ್ತ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಎತ್ತಿಲ್ಲ. (ಕ್ರೈಸ್ತ ರಾಷ್ಟ್ರಗಳು ಪಾಕಿಸ್ತಾನದಲ್ಲಿನ ಕ್ರೈಸ್ತರ ಬಗ್ಗೆ ಮೌನವಾಗಿರುವಂತೆಯೇ, ಹಿಂದೂ ಪ್ರಾಬಲ್ಯದ ಭಾರತವು ಬಾಂಗ್ಲಾದೇಶ, ಪಾಕಿಸ್ತಾನ ಮುಂತಾದ ದೇಶಗಳಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯಗಳ ಬಗ್ಗೆ ಮೌನವಾಗಿದೆ ಎಂಬುದು ಅಷ್ಟೇ ಸತ್ಯ! – ಸಂಪಾದಕರು)
ಸಂಪಾದಕೀಯ ನಿಲುವು
|