ಭಾಜಪದ ಶಾಸಕ ಪ್ರಶಾಂತ ಠಾಕೂರ ಇವರಿಂದ ವಿಧಾನಸಭೆಯಲ್ಲಿ ಮಾಹಿತಿ
(ಇಜ್ತಿಮಾ ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದು)
ಮುಂಬಯಿ – ಪನವೇಲ್ ಬಳಿಯ ಖಾರಘರನಲ್ಲಿ ಜನವರಿ 31 ರಿಂದ ಫೆಬ್ರವರಿ 2, 2025 ರವರೆಗೆ ‘ಅಂಜುಮನ್ ಮದರಸಾ ಅರೇಬಿಯಾ ಇಸ್ಲಾಮಿಯಾ ಕಾಸಿಮುಲ್ ಉಲುಮ್ ಹಕ್ಕಾನಿಯಾ ಮಸೀದಿ’ ಸಂಸ್ಥೆಯು ಆಯೋಜಿಸಿದ್ದ ಇಜ್ತಿಮಾಗೆ ಕೇವಲ 50 ಸಾವಿರ ಜನರು ಮಾತ್ರ ಹಾಜರಾಗುತ್ತಾರೆ ಎಂದು ಆಯೋಜಕರು ಸಿಡ್ಕೊಗೆ ಪತ್ರ ನೀಡಿದ್ದರು. ಆದರೆ ವಾಸ್ತವವಾಗಿ ಅಲ್ಲಿ 3 ಲಕ್ಷಕ್ಕೂ ಹೆಚ್ಚು ಮುಸ್ಲಿಮರ ಗುಂಪು ಸೇರಿತ್ತು ಎಂದು ಭಾಜಪ ಶಾಸಕ ಪ್ರಶಾಂತ ಠಾಕೂರ ಮಾರ್ಚ್ 21 ರಂದು ವಿಧಾನಸಭೆಯಲ್ಲಿ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಗಮನ ಸೆಳೆಯುವ ಸೂಚನೆಯ ಮೂಲಕ ಶಾಸಕ ಪ್ರಶಾಂತ ಠಾಕೂರ ಈ ಗಂಭೀರ ವಿಷಯದತ್ತ ಸರಕಾರದ ಗಮನ ಸೆಳೆದರು. ಪನವೇಲ ಮಹಾನಗರ ಪಾಲಿಕೆ ವ್ಯಾಪ್ತಿಯ ಸಿಡ್ಕೊದ ಕಾರ್ಪೊರೇಟ್ ಪಾರ್ಕ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಸಿಡ್ಕೊ ನೀಡಿದ ಅನುಮತಿಯನ್ನು ಪರಿಶೀಲಿಸಲಾಗುವುದು ಎಂದು ಗೃಹರಾಜ್ಯ ಸಚಿವ ಯೋಗೇಶ ಕದಂ ಉತ್ತರಿಸುತ್ತಾ ಮಾಹಿತಿ ನೀಡಿದರು.

ಶಾಸಕ ಪ್ರಶಾಂತ ಠಾಕೂರ ಮಾತು ಮುಂದುವರೆಸಿ, “ಸಂಚಾರ ದಟ್ಟಣೆ ನಿಯಂತ್ರಿಸಲು 300 ಸ್ವಯಂಸೇವಕರು, 300 ಸ್ವಚ್ಛತಾ ಸಿಬ್ಬಂದಿ, 300 ಭದ್ರತೆಗಾಗಿ ಹೀಗೆ ಒಟ್ಟು 1200 ಸ್ವಯಂಸೇವಕರನ್ನು ನಿಯೋಜಿಸಲಾಗುವುದು ಎಂದು ಆಯೋಜಕರು ಭರವಸೆ ನೀಡಿದ್ದರು. ಇಜ್ತಿಮಾ ನಡೆದ ಸ್ಥಳದಲ್ಲಿ ಉತ್ಸವ ಚೌಕ್‌ನಲ್ಲಿ ಶಿವಕುಮಾರ್ ಶರ್ಮಾ ಅವರಿಗೆ ಶಿರಸ್ತ್ರಾಣ (ಹೆಲ್ಮೆಟ್) ದಿಂದ ಹೊಡೆಯಲಾಯಿತು. ಅದರಲ್ಲಿ ಅವರ ಪ್ರಾಣ ಹೋಯಿತು. ಅಲ್ಲಿ ಸಂಚಾರಿ ಪೊಲೀಸರು ಇರಲಿಲ್ಲ, ಆಯೋಜಕರ ಸ್ವಯಂಸೇವಕರು ಇರಲಿಲ್ಲ. ಶಿವಕುಮಾರ್ ಶರ್ಮಾ ಅವರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲು ಪ್ರಯತ್ನಿಸಿದರು; ಆದರೆ 7-8 ನಿಮಿಷಗಳಲ್ಲಿ ನಿಧನರಾದರು. ಸ್ವಯಂಸೇವಕರಲ್ಲಿ ಯಾರೂ ಅವರಿಗೆ ಸಹಾಯ ಮಾಡಲು ಬರಲಿಲ್ಲ. ಇಂತಹ ಸಮಯದಲ್ಲಿ, ಜವಾಬ್ದಾರಿ ತೆಗೆದುಕೊಂಡವರು ಅದನ್ನು ನಿರ್ವಹಿಸದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. (ಇಂತಹ ಬೇಡಿಕೆ ಏಕೆ ಮಾಡಬೇಕು? ಪೊಲೀಸರಿಗೆ ಅದು ಅರ್ಥವಾಗುವುದಿಲ್ಲವೇ? – ಸಂಪಾದಕರು)
ಅನುಮತಿಯ ಬಗ್ಗೆ ತನಿಖೆ ನಡೆಸಲಾಗುವುದು! – ಯೋಗೇಶ ಕದಂ, ಗೃಹರಾಜ್ಯ ಸಚಿವ
“ಪನವೇಲ ಮಹಾನಗರ ಪಾಲಿಕೆ ವ್ಯಾಪ್ತಿಯ ಸಿಡ್ಕೊದ ಕಾರ್ಪೊರೇಟ್ ಪಾರ್ಕ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಸಿಡ್ಕೊ ನೀಡಿದ ಅನುಮತಿಯನ್ನು ಪರಿಶೀಲಿಸಲಾಗುವುದು. ಈ ಅನುಮತಿಯನ್ನು ಎಷ್ಟು ಅವಧಿಗೆ ನೀಡಲಾಗಿದೆ? ಇದನ್ನು ಪರಿಶೀಲಿಸಲಾಗುವುದು. ರಾಜ್ಯದಲ್ಲಿ ಇನ್ನು ಮುಂದೆ ಹೆಚ್ಚು ಅವಧಿಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಬಗ್ಗೆ ಎಚ್ಚರಿಕೆ ವಹಿಸಲಾಗುವುದು” ಎಂದು ಗೃಹ (ನಗರ) ರಾಜ್ಯ ಸಚಿವ ಯೋಗೇಶ್ ಕದಂ ಭರವಸೆ ನೀಡಿದರು.
ಯೋಗೇಶ್ ಕದಂ ಮಾತು ಮುಂದುವರೆಸಿ, ಈ ಕಾರ್ಯಕ್ರಮಕ್ಕೆ ಆಯೋಜಕರ ಬೇಡಿಕೆಯಂತೆ 600 ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗಿತ್ತು. ಅನುಮತಿ ನೀಡಿದ್ದಕ್ಕಿಂತ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸೇರಿದ್ದರು. ಮೊದಲ ದಿನ 15 ಸಾವಿರ, ಎರಡನೇ ದಿನ 25 ಸಾವಿರ ಮತ್ತು ಮೂರನೇ ದಿನ 3 ಲಕ್ಷ ಜನರು ಹಾಜರಿದ್ದರು. ಆದ್ದರಿಂದ, ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಇನ್ನು ಮುಂದೆ ಅನುಮತಿ ನೀಡುವಾಗ ಎಚ್ಚರಿಕೆ ವಹಿಸಲಾಗುವುದು ಎಂದರು.
ಖಾರಘರ ಅನ್ನು ಮುಂಬ್ರಾ (ಥಾಣೆ ಜಿಲ್ಲೆಯ ಮುಸ್ಲಿಂ ಪ್ರಾಬಲ್ಯದ ತಾಲೂಕು) ಮಾಡುವ ಕುತಂತ್ರ !
ಶಾಸಕ ಪ್ರಶಾಂತ ಠಾಕೂರ ಅವರು ಖಾರಘರನಲ್ಲಿ ಅನಧಿಕೃತವಾಗಿ ಮಸೀದಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಉಪಾಹಾರ ಗೃಹಗಳಲ್ಲಿ ಮತ್ತು ‘ಬೇಸ್ಮೆಂಟ್’ (ನೆಲಮಾಳಿಗೆ) ನಲ್ಲಿ ನಮಾಜ್ ಮಾಡಲು ಸ್ಥಳಾವಕಾಶ ಮಾಡಿಕೊಡಲಾಗುತ್ತದೆ. ರೈಲಿನಲ್ಲಿ ಸ್ಟಿಕ್ಕರ್ ಗಳನ್ನು ಅಂಟಿಸಿ ಅದರಲ್ಲಿ ‘ನಮಾಜ್ ಮಾಡಲು ಪ್ರತ್ಯೇಕ ಸೌಲಭ್ಯ ನೀಡುತ್ತೇವೆ’ ಎಂಬ ‘ಆಫರ್’ ಗಳನ್ನು ನೀಡಲಾಗುತ್ತದೆ. ಇದರ ಮೂಲಕ ಖಾರಘರ, ತಲೋಜಾ ಪ್ರದೇಶವನ್ನು ಮುಂಬ್ರಾ ಮಾಡುವ ತಂತ್ರವನ್ನು ರೂಪಿಸಲಾಗುತ್ತಿದೆ. ಈ ಇಜ್ತಿಮಾಕ್ಕಾಗಿ ಆರಂಭದಲ್ಲಿ 58 ದಿನಗಳ ಅನುಮತಿ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ಹಂಗಾಮಿ ಅಧ್ಯಕ್ಷರಾದ ಯೋಗೇಶ ಸಾಗರ್ ಇದರ ಬಗ್ಗೆ ಗಮನ ಹರಿಸಿದರು. “ಯಾವುದೇ ಸಂಸ್ಥೆಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಕಾರಿ ಭೂಮಿಯಲ್ಲಿ 58 ದಿನಗಳ ಅನುಮತಿ ನೀಡಿದ್ದರೆ, ಇಡೀ ರಾಜ್ಯದಲ್ಲಿ ಈ ನಿಯಮ ಸ್ಥಾಪನೆಯಾಗುತ್ತದೆ. ಆದ್ದರಿಂದ, ಈ ಬಗ್ಗೆ ತಕ್ಷಣ ಗಮನ ಹರಿಸಬೇಕು” ಎಂದು ಅವರು ಸೂಚಿಸಿದರು.