Baba Vanga Prediction : ಭಾರತ ಜಾಗತಿಕ ಮಹಾಶಕ್ತಿಯಾಗಿ ಜಗತ್ತಿಗೆ ಮಾರ್ಗದರ್ಶನ ಮಾಡಲಿದೆ ! – ಬಾಬಾ ವೆಂಗಾ

ಬಲ್ಗೇರಿಯಾದ ಮಹಿಳಾ ಭವಿಷ್ಯಜ್ಞಾನಿ ಬಾಬಾ ವೆಂಗಾ ಇವರು ನುಡಿದಿರುವ ಭವಿಷ್ಯ !

ನವದೆಹಲಿ : ಬಲ್ಗೇರಿಯಾದ ಮಹಿಳಾ ಭವಿಷ್ಯಜ್ಞಾನಿ ಬಾಬಾ ವೆಂಗಾ ಅವರು ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ ಮತ್ತು ಅವುಗಳಲ್ಲಿ ಹೆಚ್ಚಿನವು ನಿಜವಾಗಿವೆ. ಅವರು ಭಾರತದ ಬಗ್ಗೆ ಭವಿಷ್ಯ ನುಡಿದಿದ್ದಾರೆ. “ಭಾರತವು ಮಹಾಶಕ್ತಿಯಾಗಲಿದೆ ಮತ್ತು ಜಗತ್ತಿಗೆ ಮಾರ್ಗದರ್ಶನ ಮಾಡುತ್ತದೆ” ಎಂದು ಅವರು ಹೇಳಿದರು. ಇದರಿಂದ ಭಾರತವು ಕೇವಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವುದು ಅಷ್ಟೇ ಅಲ್ಲದೇ ಜಗತ್ತನ್ನು ಮುನ್ನಡೆಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಸತ್ಯವಾಗಿರುವ ಅವರ ಭವಿಷ್ಯವಾಣಿಗಳು !

1. ಕುರ್ಸ್ಕ್ ಜಲಾಂತರ್ಗಾಮಿ ದುರಂತ (2000): “ಕುರ್ಸ್ಕ್” ನೀರಿನ ಅಡಿಯಲ್ಲಿ ಹೋಗುತ್ತದೆ ಮತ್ತು ಇಡೀ ಜಗತ್ತು ಅದರ ಬಗ್ಗೆ ದುಃಖಿಸುತ್ತದೆ”, ಎಂದು ಬಾಬಾ ವೆಂಗಾ ಹೇಳಿದ್ದರು. ನಿಜವಾಗಿಯೂ, 2000 ರಲ್ಲಿ ರಷ್ಯಾದ ಜಲಾಂತರ್ಗಾಮಿ ನೌಕೆ ‘ಕುರ್ಸ್ಕ್’ ಮುಳುಗಿತು. ಅದರಲ್ಲಿ 118 ನೌಕಾಪಡೆಯ ಅಧಿಕಾರಿಗಳಿದ್ದರು. ಎಲ್ಲರೂ ಪ್ರಾಣ ಕಳೆದುಕೊಂಡರು. ಆ ಸಮಯದಲ್ಲಿ ಈ ಘಟನೆಯ ವ್ಯಾಪಕ ಚರ್ಚೆಯಾಗಿತ್ತು.

2. ಅಮೆರಿಕದ ಮೇಲೆ 9/11 ದಾಳಿ (2001): ಉಕ್ಕಿನ ಪಕ್ಷಿಗಳ ದಾಳಿಯ ನಂತರ ಅಮೆರಿಕದ ಅವಳಿ ಸಹೋದರರು ಬೀಳುತ್ತಾರೆ ಎಂದು ಅವರು ಭವಿಷ್ಯ ನುಡಿದರು. ಸೆಪ್ಟೆಂಬರ್ 11, 2001 ರಂದು, ಅಮೆರಿಕದ ‘ವರ್ಲ್ಡ್ ಟ್ರೇಡ್ ಸೆಂಟರ್’ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಇಲ್ಲಿನ ‘ಟ್ವಿನ್ ಟವರ್ಸ್’ಗೆ ವಿಮಾನ ಅಪ್ಪಳಿಸಿತು. ಈ ದಾಳಿಯನ್ನು ‘ಅಲ್-ಖೈದಾ’ ಭಯೋತ್ಪಾದಕ ಸಂಘಟನೆ ನಡೆಸಿತು.

3. ಬರಾಕ್ ಒಬಾಮಾ ಅಮೆರಿಕದ ರಾಷ್ಟ್ರಾಧ್ಯಕ್ಷರಾಗುತ್ತಾರೆ: “ಅಮೆರಿಕದ 44 ನೇ ರಾಷ್ಟ್ರಾಧ್ಯಕ್ಷರು ಆಫ್ರಿಕನ್-ಅಮೆರಿಕನ್ ಮೂಲದವರಾಗಿರುತ್ತಾರೆ” ಎಂದು ಬಾಬಾ ವೆಂಗಾ ಭವಿಷ್ಯ ನುಡಿದ್ದಿದರು. 2008 ರಲ್ಲಿ, ಬರಾಕ್ ಒಬಾಮಾ ಮೊದಲ ಆಫ್ರಿಕನ್-ಅಮೆರಿಕನ್ ಅಧ್ಯಕ್ಷರಾದರು ಮತ್ತು ಎರಡು ಅವಧಿಗಳವರೆಗೆ, ಅಂದರೆ 8 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು.

4. ಸಿರಿಯಾದಲ್ಲಿ ಇಸ್ಲಾಮಿಕ್ ಯುದ್ಧ (2014): ಸಿರಿಯಾದಲ್ಲಿ ದೊಡ್ಡ ಇಸ್ಲಾಮಿಕ್ ಯುದ್ಧ ಪ್ರಾರಂಭವಾಗುವ ಸಾಧ್ಯತೆಯನ್ನೂ ವೆಂಗಾ ಭವಿಷ್ಯ ನುಡಿದ್ದಿದ್ದರು. 2014 ರ ಸುಮಾರಿಗೆ, ‘ಇಸ್ಲಾಮಿಕ್ ಸ್ಟೇಟ್’ ಉದಯವಾಯಿತು ಮತ್ತು ಅದೇ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಯಿತು.