ಹಿಂದೂ ವಿಧೀಜ್ಞ ಪರಿಷತ್ತಿನಿಂದ ರಾಜ್ಯ ಸರಕಾರಕ್ಕೆ ದೂರು!
ಮುಂಬಯಿ, ಮಾರ್ಚ್ 22 (ಸುದ್ದಿ) – ಮಹಾರಾಷ್ಟ್ರ ಸರಕಾರದ ಅಧೀನದಲ್ಲಿರುವ ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳು ತಮ್ಮ ಆಡಿಟ್ ವರದಿಗಳನ್ನು(ಲೆಕ್ಕ ಪರಿಶೋಧನಾ ವರದಿ) ತಮ್ಮ ಸಂಕೇತಸ್ಥಳಗಳಲ್ಲಿ ಪ್ರಕಟಿಸುತ್ತವೆ; ಆದರೆ, ಮಹಾರಾಷ್ಟ್ರ ವಕ್ಫ್ ಮಂಡಳಿಯು ಕಳೆದ 17 ವರ್ಷಗಳಿಂದ ಸರಕಾರಕ್ಕೆ ಆಡಿಟ್ ವರದಿಗಳನ್ನು ಸಲ್ಲಿಸಿಲ್ಲ. ದುರದೃಷ್ಟವಶಾತ್, ರಾಜ್ಯ ಸರಕಾರವು ಕೂಡ ಈ ಬಗ್ಗೆ ವಕ್ಫ್ ಮಂಡಳಿಯನ್ನು ಕೇಳಿಲ್ಲ. ರಾಜ್ಯದಲ್ಲಿ ವಕ್ಫ್ ಮಂಡಳಿಯ ಭೂಕಬಳಿಕೆಯ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಬಂದಿರುವ ಹಲವಾರು ದೂರುಗಳನ್ನು ಪರಿಗಣಿಸಿದರೆ ಇದು ತುಂಬಾ ಗಂಭೀರವಾಗಿದೆ. ಹಿಂದೂ ವಿಧೀಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರು ಮಹಾರಾಷ್ಟ್ರ ಸರಕಾರಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯವಾದಿ ಇಚಲಕರಂಜಿಕರ್ ಅವರು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವ ಗೌರವಾನ್ವಿತ ದತ್ತಾತ್ರೇಯ ಭರಣೆ ಅವರಿಗೆ ವಕ್ಫ್ ಮಂಡಳಿಯನ್ನು ವಿಸರ್ಜಿಸುವಂತೆ ಒತ್ತಾಯಿಸಿ ಪತ್ರ ದ್ದಾರೆ ಎಂದು ಹಿಂದೂ ವಿಧೀಜ್ಞ ಪರಿಷತ್ತು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. (ಇಂತಹ ಬೇಡಿಕೆ ಮತ್ತು ದೂರು ನೀಡುವ ಅಗತ್ಯ ಬಂದಿದ್ದಾದರೂ ಏಕೆ? ಆಡಿಟ್ ವರದಿಯನ್ನು ಸಲ್ಲಿಸದಿದ್ದಕ್ಕಾಗಿ ಸರಕಾರವೇ ವಕ್ಫ್ ಮಂಡಳಿಯನ್ನು ವಜಾಗೊಳಿಸಬೇಕು. – ಸಂಪಾದಕರು)
Supersede the Waqf Board for failing to submit audit reports for 17 years! – Adv. Virendra Ichalkaranjikar, @ssvirendra Hindu Vidhidnya Parishad, demands action!
🔹 Hindu Vidhidnya Parishad files complaint with the Maharashtra government!
🔹 Clear signs of deep-rooted… pic.twitter.com/5strnfEH2E
— Sanatan Prabhat (@SanatanPrabhat) March 22, 2025
ಈ ಪತ್ರಿಕಾ ಪ್ರಕಟಣೆಯಲ್ಲಿ ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯು ಅಂದಾಜು ಒಂದು ಲಕ್ಷ ಎಕರೆ ಭೂಮಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಮಂಡಳಿಗೆ ಮಹಾರಾಷ್ಟ್ರ ಸರಕಾರವು ವಾರ್ಷಿಕವಾಗಿ ಹಣಕಾಸು ಒದಗಿಸುತ್ತದೆ. ಕಚೇರಿ ವೆಚ್ಚಗಳಿಗೆ, ಅಧಿಕಾರಿಗಳ ವಾಹನಗಳಿಗೆ ಇಂಧನ ಮತ್ತು ನೌಕರರ ಸಂಬಳವನ್ನು ಸರಕಾರಿ ಖಜಾನೆಯಿಂದ ಪಾವತಿಸಲಾಗುತ್ತದೆ. 1995 ರ ವಕ್ಫ್ ಮಂಡಳಿ ಕಾಯ್ದೆಯು ಸರಕಾರಕ್ಕೆ ವಾರ್ಷಿಕ ಆಡಿಟ್ ವರದಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ.
Supersede the Waqf Board for failing to submit audit reports for 17 years! – Adv. Virendra Ichalkaranjikar, @ssvirendra Hindu Vidhidnya Parishad, demands action!
🔹 Hindu Vidhidnya Parishad files complaint with the Maharashtra government!
🔹 Clear signs of deep-rooted… pic.twitter.com/5strnfEH2E
— Sanatan Prabhat (@SanatanPrabhat) March 22, 2025
ಸರಕಾರ ಅದನ್ನು ಅಧ್ಯಯನ ಮಾಡಿ ಆದೇಶಗಳನ್ನು ಹೊರಡಿಸಬೇಕು; ಆದಾಗ್ಯೂ, 2008 ರಿಂದ ಇಲ್ಲಿಯವರೆಗೆ ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯಿಂದ ಒಂದೇ ಒಂದು ಆಡಿಟ್ ವರದಿಯೂ ಬಂದಿಲ್ಲ ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ತಿಳಿದುಬಂದಿದೆ. ಒಂದೆಡೆ ದೇವಸ್ಥಾನದ ಹಣವನ್ನು ಸರಕಾರಿ ಯೋಜನೆಗಳಿಗೆ ಬಳಸಿದರೆ, ಮತ್ತೊಂದೆಡೆ ಸರಕಾರ ಪ್ರತಿ ವರ್ಷ ವಕ್ಫ್ ಮಂಡಳಿಗೆ ಹಣವನ್ನು ಪಾವತಿಸುತ್ತದೆ. ವಕ್ಫ್ ಮಂಡಳಿಗೆ ಇಷ್ಟೊಂದು ಭೂಮಿ ಎಲ್ಲಿಂದ ಬರುತ್ತದೆ? ಮತ್ತು ಅದು ನಿರಂತರವಾಗಿ ಹೇಗೆ ಹೆಚ್ಚುತ್ತದೆ ? ಇದಕ್ಕೆ ಉತ್ತರ ನೀಡುವ ಸಮಯ ಬಂದಿದೆ ಎಂದು ವಕೀಲ ಇಚಲಕರಂಜಿಕರ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ. ಆಯಾ ವರ್ಷಗಳ ಆಡಿಟ್ ನಡೆಸಿದರೆ, ಮುಂದಿನ ವರ್ಷದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. 10 ವರ್ಷಗಳ ಖಾತೆಗಳನ್ನು ಆಡಿಟ್ ಮಾಡುವಾಗ ಅಂಕಿ-ಅಂಶಗಳನ್ನು ಬದಲಾಯಿಸಬಹುದು ಅಥವಾ ಕಣ್ಮರೆಯಾಗುವಂತೆ ಮಾಡಬಹುದು. ಈ ವಿಷಯ ತುಂಬಾ ಗಂಭೀರವಾಗಿದೆ. ವಕ್ಫ್ ಮಂಡಳಿಯು ಸರಕಾರದ ಆದೇಶಗಳನ್ನು ಪಾಲಿಸದಿದ್ದರೆ, ವಕ್ಫ್ ಮಂಡಳಿ ಕಾಯ್ದೆಯ ಅದೇ ನಿಬಂಧನೆಗಳನ್ನು ಬಳಸಿಕೊಂಡು ಮಂಡಳಿಯನ್ನು ವಿಸರ್ಜಿಸುವ ಅಧಿಕಾರ ಸರಕಾರಕ್ಕಿದೆ. ಸರ್ವೋಚ್ಚ ನ್ಯಾಯಾಲಯ ಮತ್ತು ಇತರ ನ್ಯಾಯಾಲಯಗಳಲ್ಲಿ ಬಾಕಿ ಇರುವ ಲಕ್ಷಾಂತರ ಪ್ರಕರಣಗಳು ಯಾವ ನ್ಯಾಯಾಲಯದಲ್ಲಿದೆ? ಅವುಗಳ ವಿಚಾರಣೆ ಯಾವಾಗ? ನ್ಯಾಯಪೀಠ ಇತ್ಯಾದಿಗಳ ವಿವರವನ್ನು ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಆದಾಗ್ಯೂ, ಮಹಾರಾಷ್ಟ್ರ ವಕ್ಫ್ ಪ್ರಾಧಿಕಾರದ ಸಂಕೇತಸ್ಥಳದಲ್ಲಿ ಈ ಪ್ರಕರಣಗಳ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ನ್ಯಾಯವಾದಿ ಇಚಲಕರಂಜಿಕರ್ ವಿವರಿಸಿದರು.
ಸಂಪಾದಕೀಯ ನಿಲುವುಇದರರ್ಥ ವಕ್ಫ್ ಮಂಡಳಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಬಹುದು. 17 ವರ್ಷಗಳ ಕಾಲ ಲೆಕ್ಕ ಆಡಿಟ್ ವರದಿಯನ್ನು ಸಲ್ಲಿಸದಿರುವುದು ಬಹಳ ಗಂಭೀರ ಅಪರಾಧ. ಆದ್ದರಿಂದ, ವಕ್ಫ್ ಕಾಯ್ದೆ ಮತ್ತು ವಕ್ಫ್ ಮಂಡಳಿಯನ್ನು ರದ್ದುಗೊಳಿಸುವುದು ದೇಶದ ಹಿತದೃಷ್ಟಿಯಿಂದ ಆವಶ್ಯಕವಾಗಿದೆ! |