ರಾಷ್ಟ್ರೀಯ ಸ್ಮಾರಕಗಳ ಶ್ರೇಣಿಯಲ್ಲಿ ಗೋರಿ ಸೇರುವುದಿಲ್ಲವೆಂದು ದಾವೆ !
ಮುಂಬಯಿ – ಖುಲ್ತಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿಯು ರಾಷ್ಟ್ರೀಯ ಸ್ಮಾರಕಗಳ ಶ್ರೇಣಿಯಲ್ಲಿ ಬರುವುದಿಲ್ಲ. ಆದ್ದರಿಂದ, ಭಾರತೀಯ ಪುರಾತತ್ವ ಇಲಾಖೆಗೆ ಅದನ್ನು ತೆಗೆದುಹಾಕಲು ಆದೇಶಿಸಬೇಕು ಎಂದು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಕೇತನ್ ತಿರೋಡ್ಕರ್ ಅವರು ಮುಂಬಯಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ, ಭಾಗ್ಯನಗರದ (ಹೈದರಾಬಾದ್) ನಿಜಾಮ ಅಸಫ್ ಜಾಹ್ ಮೊದಲನೆಯವನ ಮತ್ತು ಔರಂಗಜೇಬನ ಮಗ ಮತ್ತು ಮಗಳ ದರ್ಗಾದಲ್ಲಿರುವ ಇತರ ಸಮಾಧಿಗಳನ್ನು ಕೂಡ ಕೆಡವಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.
ಅರ್ಜಿಯಲ್ಲಿನ ಪ್ರಮುಖ ಅಂಶಗಳು:
1.ಔರಂಗಜೇಬನ ಆಳ್ವಿಕೆಯ ಅವಧಿಯು ಭಾರತೀಯ ಇತಿಹಾಸದ ಕಪ್ಪು ಪುಟವಾಗಿದೆ. ಈ ಅವಧಿಯಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಯಿತು, ಹಿಂದೂ ದೇವಾಲಯಗಳನ್ನು ನಾಶಪಡಿಸಲಾಯಿತು.
2 .ಈ ಗೋರಿಯಿಂದ ಮುಂದಿನ ಪೀಳಿಗೆಯು ಪರಂಪರೆಯಾಗಿ ಪಡೆಯಲು ಅಥವಾ ಕಲಿಯುವಂತದ್ದು ಏನೂ ಇಲ್ಲ. ಆದ್ದರಿಂದ, ಈ ಗೋರಿಯನ್ನು ಐತಿಹಾಸಿಕ ಪರಂಪರೆಯ ಕಟ್ಟಡ ಅಥವಾ ರಾಷ್ಟ್ರೀಯ ಸ್ಮಾರಕದ ಪಟ್ಟಿಯಿಂದ ಕೈಬಿಡಬೇಕು.
3 .ಔರಂಗಜೇಬ ಹಾಗೂ ಉಳಿದವರು ಭಾರತೀಯ ಇತಿಹಾಸದಲ್ಲಿ ಯಾವುದೇ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿಲ್ಲ ಹಾಗೂ ಮಹತ್ವದ ಪ್ರಭಾವ ಬೀರಿಲ್ಲ.
ಸಂಪಾದಕೀಯ ನಿಲುವುಇಂತಹ ಬೇಡಿಕೆ ಸಲ್ಲಿಸುವ ಪ್ರಮೇಯವೇ ಬರಬಾರದು, ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಹಿಂದುಗಳ ಅಪೇಕ್ಷೆ ಆಗಿದೆ ! |