`ಧೈರ್ಯವಿದ್ದರೆ ಔರಂಗಜೇಬನ ಗೋರಿಯನ್ನು ತೆರವುಗೊಳಿಸಬೇಕಂತೆ!’ – ಕಾಂಗ್ರೆಸ್ ನಾಯಕ ಹುಸೇನ ದಲವಾಯಿ

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಕರೆದರು !

ಕಾಂಗ್ರೆಸ್ ನಾಯಕ ಹುಸೇನ ದಲವಾಯಿ

ಮುಂಬಯಿ – ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಸಂಸದ ಹುಸೇನ ದಲವಾಯಿಯವರು ಮಾತನಾಡುತ್ತ, `ಸರಕಾರಕ್ಕೆ ಧೈರ್ಯವಿದ್ದರೆ ಔರಂಗಜೇಬನ ಗೋರಿಯನ್ನು ತೆರವುಗೊಳಿಸಲಿ’ ಎಂದು ಹೇಳಿದ್ದಾರೆ. ತುಷಾರ ಗಾಂಧಿ, ಅಸದುದ್ದೀನ ಓವೈಸಿ ಮತ್ತು ಸಂಜಯ ರಾವತರವರ ಇತ್ತೀಚಿನ ಹೇಳಿಕೆಗಳಿಗೆ ದಲವಾಯಿಯವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ಬಿಜೆಪಿ ಸರಕಾರವನ್ನು ಔರಂಗಜೇಬನ ಕ್ರೂರ ಆಡಳಿತಕ್ಕೆ ಹೋಲಿಸಿದ್ದಾರೆ.

ಔರಂಗಜೇಬನನ್ನು ಹೊಗಳಿದ್ದಕ್ಕಾಗಿ ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿಯವರಿಗೆ “ಔರಂಗಜೇಬನನ್ನು ಹೊಗಳಬೇಡಿ” ಎಂದು ಸಲಹೆ ನೀಡುತ್ತ `ಔರಂಗಜೇಬನು ಕ್ರೂರ ಆಡಳಿತಗಾರನಾಗಿದ್ದನು ಮತ್ತು ಅವನನ್ನು ಹೊಗಳಬಾರದು’ ಎಂದು ಹೇಳಿದರು. (ದಲವಾಯಿಯವರ ಅನುಸಾರ ಔರಂಗಜೇಬನು ಕ್ರೂರಿಯಾಗಿದ್ದರೇ ಅವನ ಗೋರಿಯನ್ನು ಒಡೆಯುವ ಬೇಡಿಕೆಯನ್ನು ಅವರು ಏಕೆ ಬೆಂಬಲಿಸುವುದಿಲ್ಲ ? ಬದಲಿಗೆ ಅವರು ಗೋರಿಯನ್ನು ತೆಗೆಯುವುದರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ದಲ್ವಾಯಿ ಏನು ಹೇಳಲು ಬಯಸುತ್ತಾರೆ ಎಂಬುದನ್ನು ಅವರು ಮೊದಲು ಸ್ಪಷ್ಟವಾಗಿ ಯೋಚಿಸಿ ನಿರ್ಧರಿಸಬೇಕು. – ಸಂಪಾದಕರು) ಅಬು ಆಜ್ಮಿಯವರು ಅಗತ್ಯವಾಗಿ ಇತಿಹಾಸವನ್ನು ಓದಬೇಕು, ಎಂದು ಹೇಳಿದರು. ಹುಸೇನ ದಲವಾಯಿಯವರು ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಅಸದುದ್ದೀನ ಓವೈಸಿಯವರ ಹೇಳಿಕೆಯನ್ನು ಬೆಂಬಲಿಸಿದರು.

“ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಯೋತ್ಪಾದಕ ಸಂಘಟನೆಯಂತೆ !”

ತುಷಾರ ಗಾಂಧಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಕರ್ಕರೋಗ’ ಎಂದು ಕರೆದಿದ್ದರು. ಈ ಹೇಳಿಕೆಯನ್ನು ಹುಸೇನ ದಲವಾಯಿಯವರು ಬೆಂಬಲಿಸಿದ್ದಾರೆ. “ತುಷಾರ ಗಾಂಧಿಯವರು ಹೇಳಿದ್ದು ಸರಿ. ತುಷಾರ ಗಾಂಧಿಯವರ ಜೀವಕ್ಕೆ ಅಪಾಯವಿದೆ ಮತ್ತು ಸರಕಾರ ಅವರಿಗೆ ರಕ್ಷಣೆ ನೀಡಬೇಕು. ಆರ್‌.ಎಸ್‌.ಎಸ್. ಒಂದು ಭಯೋತ್ಪಾದಕ ಸಂಘಟನೆಯೆಂದು ನಾನು ಈ ಹಿಂದೆಯೂ ಹೇಳಿದ್ದೇನೆ ಮತ್ತು ಈಗಲೂ ಹೇಳುತ್ತೇನೆ. ಅದರ ಶಾಖೆಗಳಲ್ಲಿ ತಪ್ಪು ವಿಷಯಗಳನ್ನು ಕಲಿಸಲಾಗುತ್ತದೆ’ ಎಂದು ದಲವಾಯಿಯವರು ಹೇಳಿದರು. (ದಲವಾಯಿಯವರ ಮನಸ್ಥಿತಿಗೆ ಅನುಕೂಲಕರವಾದ ಹೇಳಿಕೆಗಳನ್ನು ನೀಡುವವರನ್ನು ಅವರು ಎಚ್ಚರಿಕೆಯಿಂದ ಆಯ್ಕೆ ಮಾಡಿ ಎತ್ತಿ ಹಿಡಿಯುತ್ತಿದ್ದಾರೆ, ಎಂಬುದು ಈ ಎಲ್ಲಾ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

  • ರಾಷ್ಟ್ರಪ್ರೇಮಿ ಸಂಘಟನೆಯಾದ ರಾ.ಸ್ವ. ಸಂಘವನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವ ನಾಯಕನಿಗೆ ಔರಂಗಜೇಬನು ಹತ್ತಿರದವನಂತೆ ಕಂಡರೆ ಆಶ್ಚರ್ಯವೇನಿಲ್ಲ ? ದಲವಾಯಿಯವರು ‘ಲಷ್ಕರ್-ಎ-ತೊಯ್ಬಾ’, ‘ಪಾಪುಲರ್ ಫ್ರಂಟ್ ಆಫ್ ಇಂಡಿಯಾ’, ‘ಇಸ್ಲಾಮಿಕ್ ಸ್ಟೇಟ್’ ಮುಂತಾದ ಜಿಹಾದಿ ಸಂಘಟನೆಗಳನ್ನು ಮಾನವೀಯತೆಗೆ ವರದಾನವೆಂದು ಕರೆದರೂ ಆಶ್ಚರ್ಯವಿಲ್ಲ ! ಇದೆ ಸತ್ಯ !

‘ಸ್ವಾತಂತ್ರವೀರ ಸಾವರಕರ್ ಬಗ್ಗೆಯೂ ಟೀಕಿಸಿದರು’

ಸ್ವಾತಂತ್ರ್ಯವೀರ ಸಾವರಕರರ ಬಗ್ಗೆ ದಲವಾಯಿಯವರು ಮಾತನಾಡುತ್ತ, `ಸಾವರಕರರು ಛತ್ರಪತಿ ಸಂಭಾಜಿ ಮಹಾರಾಜರ ಬಗ್ಗೆ ಅನೇಕ ತಪ್ಪು ಸಂಗತಿಗಳನ್ನು ಬರೆದಿದ್ದರು ಮತ್ತು ಅವರ ಬಗ್ಗೆ ತಪ್ಪು ಟಿಪ್ಪಣಿಗಳನ್ನು ಮಾಡಿದ್ದರು ಎಂಬುದು ನಿಜ. ಇದರೊಂದಿಗೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆಯೂ ನಕಾರಾತ್ಮಕವಾಗಿ ಮಾತನಾಡಿದ್ದರು’ ಎಂದು ಹೇಳಿದರು. (ಕಾಂಗ್ರೆಸ್ಸಿನ ನಾಯಕರು ಸಾವರಕರರನ್ನು ಯಾವುದೇ ವಿಷಯದಲ್ಲಿ ಎಳೆದು ತಂದು ಅವರ ಮೇಲೆ ಕೆಸರೆರೆಚುವ ಒಂದೇ ಒಂದು ಅವಕಾಶವನ್ನೂ ಬಿಡುವುದಿಲ್ಲ. ಇದರಿಂದಾಗಿ ಹಿಂದೂತ್ವವಾದಿ ಸರಕಾರವು ದಲವಾಯಿಯವರ ವಿರುದ್ಧ ಕ್ರಮಕೈಗೊಳ್ಳಬೇಕು ! – ಸಂಪಾದಕರು) ನೆಹರೂರವರಿಗೆ ಈ ಬಗ್ಗೆ ತಿಳಿದಾಗ ಅವರು ಸಾವರಕರರ ಪುಸ್ತಕಗಳನ್ನು ತೆಗೆದುಹಾಕಿದರು; ಆದರೆ ದೇವೇಂದ್ರ ಫಡಣವೀಸರವರು ಈಗೇಕೆ ಹಾಗೆ ಮಾಡುತ್ತಿಲ್ಲ ? (ನೆಹರೂರವರ ಬಗ್ಗೆ ಇಷ್ಟೊಂದು ಕಾಳಜಿಯಿರುವ ದಲವಾಯಿಯವರಿಗೆ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ ನೆಹರೂರವರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಕಾಣಿಸುವುದಿಲ್ಲವೇ? ಅಥವಾ ಅವರು ಅದಕ್ಕೆ ಅನುಕೂಲಕರವಾಗಿ ಕುರುಡಾಗಿದ್ದಾರೆಯೇ? – ಸಂಪಾದಕರು) ಆರ್‌.ಎಸ್‌.ಎಸ್‌.ನ ಜನರು ಛತ್ರಪತಿ ಶಿವಾಜಿ ಮಹಾರಾಜರನ್ನು ರಾಜನೆಂದು ಪರಿಗಣಿಸದೆ ವ್ಯಾಪಾರಿಯೆಂದು ಪರಿಗಣಿಸಿದರು. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ, ಎಂದು ಹೇಳಿದರು.