|
ಕೋಲಕಾತಾ (ಬಂಗಾಳ ) : ಮುಂದಿನ ವರ್ಷ ಬಂಗಾಳದಲ್ಲಿ ನಡೆಯುವ ನಡೆಯುವ ವಿಧಾನಸಭಾ ಚುನಾವಣೆಯ ಮೊದಲೇ ರಾಜ್ಯದ ರಾಜಕೀಯ ಬಿಸಿ ಹೆಚ್ಚುತ್ತಿದೆ . ಭಾಜಪ ಮತ್ತು ತೃಣಮೂಲ ಕಾಂಗ್ರೆಸ್ ಇವರ ನಡುವೆ ರಾಜಕೀಯ ಸಂಘರ್ಷ ಹೆಚ್ಚುತ್ತಿದೆ. ಬಂಗಾಳದಲ್ಲಿ ರಾಮನವಮಿಯ ಸಿದ್ಧತೆ ಆರಂಭವಾಗಿದೆ. ಈ ಬಾರಿ ರಾಮನವಮಿ ಉತ್ಸವ ಮಹಾಕುಂಭ ವರ್ಷದೊಂದಿಗೆ ಹೊಂದಿಕೆಯಾಗುತ್ತಿದೆ. ಆದ್ದರಿಂದ ಇದು ಒಂದು ಗೌರವ ಶಾಲಿ(ವೈಭವದ?) ವರ್ಷವಾಗಿದೆ. ಇದರ ಹಿನ್ನೆಲೆಯಲ್ಲಿ ಭಾಜಪದ ಬಂಗಾಳದ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು, ಈ ವರ್ಷ ರಾಮನವಮಿ ಬಹಳ ಉತ್ಸಾಹದಿಂದ ಆಚರಿಸಲಾಗುವುದು. ರಾಜ್ಯಾದ್ಯಂತ ರಾಮನವಮಿಯ ಮೆರವಣಿಗೆಯಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸುವರು. ಈ ಮೆರವಣಿಗೆ ತಡೆಯಲು ತೃಣಮೂಲ ಕಾಂಗ್ರೆಸ್ಸಿನಿಂದ ಯಾವುದೇ ರೀತಿಯ ಪ್ರಯತ್ನ ಮಾಡಿದರೆ, ಅದಕ್ಕೆ ತೀವ್ರವಾಗಿ ವಿರೋಧಿಸಲಾಗುವುದು, ಎಂದು ನೇರ ಸವಾಲು ಹಾಕಿದ್ದಾರೆ. ‘ ಜೈ ಶ್ರೀ ರಾಮ ‘ ನ ಘೋಷಣೆ ನಿಲ್ಲಿಸಲು ನಿಮ್ಮಲ್ಲಿ ಶಕ್ತಿ ಇಲ್ಲ, ಎಂದೂ ಅಧಿಕಾರಿ ಇವರು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಉದ್ದೇಶಿಸಿ ಹೇಳಿದ್ದಾರೆ.
೧. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆ ಎಂದು ಅಧಿಕಾರಿ ಇವರು ಆರೋಪಿಸುತ್ತಾ ಮಾತನಾಡಿದರು, ಅವರ ಅಧಿಕಾರ ಈಗ ಕೇವಲ ಸ್ವಲ್ಪ ಕಾಲಾವಧಿಗಾಗಿ ಮಾತ್ರ ಇದೆಯೆಂದು ಹೇಳಿದರು.
೨. ಅವರು ಮಾತು ಮುಂದುವರೆಸುತ್ತಾ , ಹಿಂದೂಗಳು ಭಾರತದಲ್ಲಿ ಆಡಳಿತ ನಡೆಸುವರು ಮತ್ತು ಯಾರು ಬಂಗಾಳದಲ್ಲಿ ಹಿಂದೂಗಳ ಕಾಳಜಿ ವಹಿಸುವವರೋ ಅವರೇ ಬಂಗಾಳದಲ್ಲಿ ಆಡಳಿತ ನಡೆಸುವರು. ಎಲ್ಲಾ ಹಿಂದೂಗಳು ಧ್ವಜ ಮತ್ತು ಹಣೆಗೆ ತಿಲಕ ಹಚ್ಚಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಹಿಂದುಗಳು ಈಗ ಒಂದು ಸಮುದಾಯದ ಬಹಿರಂಗ ಓಲೈಕೆ ಮತ್ತು ರಾಮನವಮಿ ಉತ್ಸವವನ್ನು ಹತ್ತಿಕ್ಕುವ ಪ್ರಯತ್ನವನ್ನು ಸಹಿಸುವುದಿಲ್ಲ.
೩. ಸುವೆಂದು ಅಧಿಕಾರಿ ನೀಡಿದ ಮಾಹಿತಿಯ ಪ್ರಕಾರ ಏಪ್ರಿಲ್ 6 ರಂದು ರಾಮನವಮಿಯ ಪ್ರಯುಕ್ತ ರಾಜ್ಯಾದ್ಯಂತ 2 ಸಾವಿರಗಿಂತಲೂ ಅಧಿಕ ಮೆರವಣಿಗೆಗಳನ್ನು ನಡೆಸಲಾಗುವುದು, ಅದರಲ್ಲಿ 1 ಕೋಟಿ ಹಿಂದುಗಳು ಸಹಭಾಗಿ ಆಗುವವರು. ಕಳೆದ ವರ್ಷ 1 ಸಾವಿರ ಮೆರವಣಿಗೆಯಲ್ಲಿ 50 ಲಕ್ಷ ಹಿಂದುಗಳು ಭಾಗವಹಿಸಿದ್ದರು .
೪. ಕಳೆದ ದುರ್ಗಾ ಪೂಜೆಯ ಸಮಯದಲ್ಲಿ ರಾಜ್ಯದಲ್ಲಿ ಹಿಂದುಗಳ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ಇಂತಹ ಘಟನೆಗಳ ಹಿಂದೆ ಜಿಹಾದಿ ಗುಂಪಿದೆ ಮತ್ತು ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರು ಅವರಿಗೆ ಸಹಾಯ ಮಾಡುತ್ತಿದ್ದಾರೆ, ಎಂದು ಕೂಡ ಅಧಿಕಾರಿ ಇವರು ಈ ಸಮಯದಲ್ಲಿ ಆರೋಪಿಸಿದರು.