ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿಯವರ ಜಯಂತಿ ನಿಮಿತ್ತ (ನಿಜಶ್ರಾವಣ ಶುಕ್ಲ ಪ್ರತಿಪದೆ (೧೭ ಆಗಸ್ಟ್‌)) ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು !

ಗುರುದೇವ ಡಾ. ಕಾಟೇಸ್ವಾಮೀಜಿಯವರ ಪ್ರಖರ ವಿಚಾರಗಳು

ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿ

ಹಿಂದೂಗಳ ಪುರುಷಾರ್ಥವನ್ನು ನಿಸ್ತೇಜಗೊಳಿಸುವ ಇತಿಹಾಸ ಬರೆದ ಧೂರ್ತ ಯೂರೋಪಿಯನ್ನರು !

ಹಿಂದೂ ಸಂಸ್ಕೃತಿಯನ್ನು ನಿಕೃಷ್ಟ (ತುಚ್ಛ) ಎಂದು ನಿರ್ಧರಿಸಲು, ನಮ್ಮ ಸಂಘಟಿತ ವ್ಯವಸ್ಥೆಯನ್ನು ಈ ಧೂರ್ತ ಯೂರೋಪಿಯನ್ನರು ತಿರಸ್ಕರಿಸಿದರು. ಐತಿಹಾಸಿಕ ಪದ್ಧತಿಯಿಂದ ಭಾರತದ ಇತಿಹಾಸವನ್ನು ಅಧ್ಯಯನ ಮಾಡಿ ಹಿಂದೂಗಳ ಪುರುಷಾರ್ಥವನ್ನು ನಿಸ್ತೇಜಗೊಳಿಸುವಂತಹ ವಿರುದ್ಧ ಇತಿಹಾಸವನ್ನು ಬರೆದರು. ಆ ಇತಿಹಾಸವನ್ನು ಸತ್ಯವೆಂದು ಭಾವಿಸಿ ನಾವು ನಮ್ಮ ಧಾರ್ಮಿಕ ಸಾಹಿತ್ಯ ಮತ್ತು ಸಂಪ್ರದಾಯ ವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದವು. ಅದಕ್ಕೆ ‘ಕ್ರಿಟಿಕಲ್‌ ಸ್ಟಡೀಸ್’ ಎಂಬ ಮುದ್ದಾದ ಹೆಸರನ್ನು ಕೊಟ್ಟರು ಮತ್ತು ಹಿಂದೂಗಳ ಪುರುಷಾರ್ಥವನ್ನು ನಿಸ್ತೇಜಗೊಳಿಸಿದರು.

– ಮಾಸಿಕ ಘನಗರ್ಜಿತ, ಅಕ್ಟೋಬರ ೨೦೧೯

ರಾಷ್ಟ್ರ ಮತ್ತು ವಿಶ್ವದ ಉದ್ದಾರಕ್ಕಾಗಿ ಸಮರ್ಪಿತರಾಗಿ !

‘ಸೀರೆ, ಟಿ.ವಿ., ಸೋಫಾಸೆಟ್, ಕಾರು’ ಇವುಗಳಲ್ಲಿ ಮುಳುಗಿ ಒಂದು ದಿನ ಜೀವನ ಅಂತ್ಯಗೊಳಿಸುವುದಲ್ಲ. ಸಮಾಜ ಮತ್ತು ಧರ್ಮಗಳ ಬಗ್ಗೆ ಕೆಲವು ಕರ್ತವ್ಯ ಮತ್ತು ಋಣಗಳಿವೆ. ಪ್ರತಿಯೊಬ್ಬರು ಅದನ್ನು ನಿಭಾಯಿಸ ಬೇಕು. ನಿರ್ಲಕ್ಷ್ಯ ಮಾಡಿದರೆ ಸರ್ವನಾಶ ನಿಶ್ಚಿತ. ಧರ್ಮಕಾರ್ಯಕ್ಕೆ ಸಮರ್ಪಿತರಾಗಬೇಕು. ಸರ್ವಸ್ವವನ್ನೂ ಧರ್ಮಕ್ಕೆ ಮುಡಿಪಾಗಿಡಬೇಕು. ಅದರಲ್ಲಿಯೇ ಅವರ ಹಾಗೂ ರಾಷ್ಟ್ರ ಮತ್ತು ಧರ್ಮದ ಉದ್ಧಾರವಿದೆ. ಕಲ್ಯಾಣ ವಿದೆ ಮತ್ತು ಮುಕ್ತಿ ಇದೆ ! ಇಂದು ಧರ್ಮಕ್ಕಾಗಿ ಪ್ರಾಣ (ಎಲ್ಲವನ್ನೂ) ಪಣಕ್ಕಿಡುವ ಪ್ರಸಂಗ ಬಂದಿದೆ. ಧರ್ಮ ಕಾರ್ಯ ಮಾಡುತ್ತಾ ಜೀವನ ಕಳೆಯುವ ಕಾಲವಾಗಿದೆ.’

ಹಿಂದಿನ ಮತ್ತು ಇಂದಿನ ಭಾರತೀಯ ಮಹಿಳೆಯರ ನಡುವಿನ ವ್ಯತ್ಯಾಸ

ಭಾರತೀಯ ಮಹಿಳೆಯ ಆ ಸಂಕೋಚ, ಆ ನಾಚಿಕೆ, ಆ ಪುನಃ-ಪುನಃ ಸೆರಗು ಸರಿಪಡಿಸಿಕೊಳ್ಳುವಿಕೆ, ಆ ಸಣ್ಣ ಮಧುರ ನಗು ! ನಾಚಿಕೆ ಇವೆಲ್ಲ ಭಾರತೀಯ ಸ್ತ್ರೀಯರ ಭೂಷಣವಾಗಿತ್ತು. ಭಾರತೀಯ ನಾರಿ ಮತ್ತು ಯೂರೋಪಿಯನ್‌ ಮಹಿಳೆ ಇವರಿಬ್ಬರ ನಡುವೆ ಎರಡು ಧ್ರುವಗಳಿಗಿರುವಷ್ಟು ಅಂತರ ಇದೆ. ಅಷ್ಟೇ ಅಲ್ಲ ಪರಸ್ಪರ ವಿರುದ್ಧವಿದೆ. ವಿಶ್ವವಿಖ್ಯಾತ ಮನಶಾಸ್ತ್ರಜ್ಞ ‘ಜುಂಗ್’ ಇವರು ಭಾರತಕ್ಕೆ ಬಂದಾಗ ಅವರಲ್ಲಿ ಭಾರತದಲ್ಲಿ ಮನಸ್ಸನ್ನು ಸೆಳೆಯುವ, ಚಿತ್ತವನ್ನೇ ಆಕರ್ಷಿಸಿ ಬಿಡುವಂತಹ ವೈಶಿಷ್ಟ್ಯಗಳನ್ನೇನಾದರೂ ನೀವು ನೋಡಿದ್ದೀರಾ ? ಎಂದು ಕೇಳಿದಾಗ, ಹಿಂದೂ ಸ್ತ್ರೀಯರಲ್ಲಿರುವ ಸಂಕೋಚ, ಅವರ ನಾಚಿಕೆ, ಸೆರಗನ್ನು ಸರಿಪಡಿಸಿ ಕೊಳ್ಳುವಿಕೆ, ಇದು ಅದ್ಭುತ, ಮುಗ್ಧ ಮತ್ತು ಆಕರ್ಷಕವಾಗಿದೆ ಹಾಗೂ ಮೋಡಿ ಮಾಡುತ್ತದೆ ಎಂದು ಹೇಳಿದರು. ಪತ್ರಕರ್ತರು ಅವರಿಗೆ ಮತ್ತೊಂದು ಪ್ರಶ್ನೆ ಕೇಳುತ್ತಾ ಈ ಸಂದರ್ಭದಲ್ಲಿ ಯೂರೋಪಿಯನ್‌ ಮಹಿಳೆಯರ ಬಗ್ಗೆ ನೀವು ಏನು ಹೇಳುತ್ತೀರಿ ? ಎಂದಾಗ ‘ಯೂರೋಪಿಯನ್‌ ಮಹಿಳೆಯರು ಪ್ಯಾಂಟ್‌ ಧರಿಸಿ ಹಡಗಿನಲ್ಲಿ ಓಡಾಡುತ್ತಿರುವುದನ್ನು ನೋಡಿದಾಗ ವಾಕರಿಕೆ ಬರುತ್ತದೆ’, ಎಂದು ಜುಂಗ್‌ ಹೇಳಿದರು. ಹಿಂದೂ ಸ್ತ್ರೀಯು ಪಾಶ್ಚಿಮಾತ್ಯ ಮಹಿಳೆಯಂತೆ ನಾಚಿಕೆಯನ್ನು (blushing) ಪ್ರದರ್ಶಿಸುವುದಿಲ್ಲ; ‘ಆದರೆ ಅವಳ ನಮ್ರವಾದ ಮುಗುಳ್ನಗು, ಅದರಲ್ಲಿರುವ ಮಾಧುರ್ಯ, ಶುಚಿತ್ವ ಮತ್ತು ದಯಾಳುತನ’ವನ್ನು ಯಾವುದರೊಂದಿಗೂ ಹೋಲಿಸ ಲಾಗುವುದಿಲ್ಲ” ಆದರೆ ಇಂದು ಇವೆಲ್ಲವೂ ಅಸ್ತಂಗತವಾಗಿದೆ ಎಂದು ಹೇಳುತ್ತಾ ಗುರುದೇವರ ವಾಣಿಯು ಗದ್ಗದಿತವಾಯಿತು.

(ಕೃಪೆ : ಮಾಸಿಕ ‘ಘನಗರ್ಜಿತ’, ಆಗಸ್ಟ್ ೨೦೧೧)

ಹಿಂದೂಗಳು ಮಾಯೆಯ ಕತ್ತಲನ್ನು ಬಿಟ್ಟು ಕಣ್ಣು ತೆರೆಯುವುದು ಅವಶ್ಯಕ !

ನಾವು ಬಹಳ ಪ್ರಾಚೀನರಾಗಿದ್ದೇವೆ. ನಮ್ಮ ಅನಂತ ಜನ್ಮಗಳಾಗಿವೆ, ಅನೇಕ ಜನ್ಮದಲ್ಲಿ ಈ ಜ್ಞಾನ ವಚನಗಳನ್ನು ನಾವು ಕೇಳುತ್ತಿದ್ದೇವೆ. ಅನೇಕ ಜನ್ಮದ ಮಮತ್ವದ ವರ್ತುಲದಲ್ಲಿ ತಿರುಗಿದ್ದೇವೆ ಮತ್ತು ಆದರೂ ನಾವು ಹಾಗೆಯೇ ಬರಿದಾಗಿದ್ದೇವೆ. ಈಗಲೂ ನಿದ್ದೆ ಮಾಡುತ್ತಿದ್ದೇವೆ. ನಮ್ಮ ಕಣ್ಣುಗಳು ಈಗಲೂ ತೆರೆಯುತ್ತಿಲ್ಲ. ಅನೇಕ ಬಾರಿ ಬೆಳಗಾಗಿದೆ. ಅನೇಕ ಬಾರಿ ಸೂರ್ಯ ಉದಯವಾಗಿದೆ. ಆದರೆ ನಾವು ಮಾತ್ರ ಕತ್ತಲಲ್ಲಿ ಇದ್ದೇವೆ, ಮಾಯೆಯ ಕತ್ತಲು ಆವರಿಸಿದೆ.

– ಗುರುದೇವ ಡಾ. ಕಾಟೇಸ್ವಾಮೀಜಿ