ಭಾಗ್ಯನಗರ ಪೊಲೀಸರಿಂದ ಶಾಸಕ ಟಿ. ರಾಜಸಿಂಗ್ಗೆ ಸಲಹೆ!
ಭಾಗ್ಯನಗರ (ತೆಲಂಗಾಣ) – ಇಲ್ಲಿನ ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಗ್ ಇವರಿಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ. ಭಾಗ್ಯನಗರ ಪೊಲೀಸರು ಶಾಸಕ ಟಿ. ರಾಜಸಿಂಗ್ ಅವರಿಗೆ ಮೋಟಾರುಸೈಕ್ಲ್ ನಲ್ಲಿ ಪ್ರಯಾಣಿಸದಂತೆ ಸಲಹೆ ನೀಡಿದ್ದಾರೆ. ಜೊತೆಗೆ ಬುಲೆಟ್ಪ್ರೂಫ್ ಗಾಡಿ ಬಳಸುವುದರ ಜೊತೆಗೆ ಬಂದೂಕುಧಾರಿ ಭದ್ರತಾ ಸಿಬ್ಬಂದಿಯನ್ನು ಯಾವಾಗಲೂ ತಮ್ಮೊಂದಿಗೆ ಇರಿಸಿಕೊಳ್ಳಲು ಹೇಳಿದ್ದಾರೆ. ಈ ಬಗ್ಗೆ ಅಧಿಕೃತ ಪತ್ರವನ್ನು ಪೊಲೀಸರು ಟಿ. ರಾಜಸಿಂಗ್‌ಗೆ ನೀಡಿದ್ದಾರೆ.
ನನಗೆ ಬಂದೂಕು ಪರವಾನಗಿ ಏಕೆ ನೀಡಲಾಗಿಲ್ಲ? – ಪೊಲೀಸರಿಗೆ ಚಾಟಿ ಬೀಸಿದ ಟಿ. ರಾಜಸಿಂಗ
ಪೊಲೀಸರ ಸಲಹೆಗೆ ಪ್ರತಿಕ್ರಿಯಿಸಿದ ಶಾಸಕ ಟಿ. ರಾಜಸಿಂಗ್, ನನ್ನ ಕ್ಷೇತ್ರದಲ್ಲಿ ಅನೇಕ ಕೊಳೆಗೇರಿಗಳು ಮತ್ತು ಕಿರಿದಾದ ಗಲ್ಲಿಗಳಿವೆ, ಅಲ್ಲಿ ಬುಲೆಟ್ಪ್ರೂಫ್ ವಾಹನ ಓಡಿಸಲು ಸಾಧ್ಯವಿಲ್ಲ. ಜನರಿಗೆ ಸುಲಭವಾಗಿ ಸಿಗುವುದು ನನ್ನ ಮೊದಲ ಆದ್ಯತೆ. ಮೋಟಾರ್ಸೈಕಲ್ ಓಡಿಸುವುದರಿಂದ ನಾನು ಅವರಿಗೆ ಯಾವುದೇ ತೊಂದರೆಯಾಗದಂತೆ ಅವರೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ನಾನು ಭದ್ರತೆಯ ಕಾರಣಕ್ಕಾಗಿ ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಿದಾಗ, ಅದೇ ಪೊಲೀಸರು ನನ್ನ ವಿರುದ್ಧ ಪ್ರಕರಣಗಳಿವೆ ಎಂದು ಹೇಳಿ ನನ್ನ ಅರ್ಜಿಯನ್ನು ತಿರಸ್ಕರಿಸಿದರು. ಪರಿಗಣಿಸಬೇಕಾದ ಇನ್ನೊಂದು ವಿಷಯವೆಂದರೆ, ಬಾಕಿ ಉಳಿದಿರುವ ಪ್ರಕರಣಗಳಿರುವ ಅನೇಕ ಜನರಿಗೆ ಯಾವುದೇ ಆಕ್ಷೇಪಣೆಯಿಲ್ಲದೆ ಬಂದೂಕು ಪರವಾನಗಿಗಳನ್ನು ನೀಡಲಾಗಿದೆ, ಆದರೆ ನನಗೆ ನೀಡಲಾಗಿಲ್ಲ. (ಇದು ತೆಲಂಗಾಣ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ! ಕೇಂದ್ರ ಗೃಹ ಸಚಿವಾಲಯವು ತೆಲಂಗಾಣ ಪೊಲೀಸರನ್ನು ಈ ಬಗ್ಗೆ ಪ್ರಶ್ನಿಸಬೇಕು! – ಸಂಪಾದಕರು)
"Use a Bulletproof Vehicle and Keep Armed Guards!" – Hyderabad Police Advise MLA T. Raja Singh
Instead of giving free advice, the police should themselves provide a bulletproof vehicle and armed security. If the police, under the Congress government, are making such statements… pic.twitter.com/AZWipEyoAv
— Sanatan Prabhat (@SanatanPrabhat) March 22, 2025
ಸಂಪಾದಕೀಯ ನಿಲುವುಹುರುಳಿಲ್ಲದ ಸಲಹೆ ನೀಡುವ ಬದಲು, ಪೊಲೀಸರು ಸ್ವತಃ ತಾವೇ ಬುಲೆಟ್ಪ್ರೂಫ್ ವಾಹನ ಮತ್ತು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಒದಗಿಸುವುದು ಅವಶ್ಯಕವಾಗಿದೆ. ಶಾಸಕರ ವಿಷಯದಲ್ಲಿ ಕಾಂಗ್ರೆಸ್ ಸರಕಾರದ ಪೊಲೀಸರು ಹೀಗೆ ಹೇಳುತ್ತಿದ್ದರೆ, ಅವರು ಸಾಮಾನ್ಯ ಜನರನ್ನಾದರೂ ಹೇಗೆ ರಕ್ಷಿಸುತ್ತಾರೆ? |