ಜವಾಬ್ದಾರ ಸಾಧಕರು ಭಾವವಿರುವ ಸಾಧಕರ ಭಾವಜಾಗೃತಿಯ ಪ್ರಯತ್ನಗಳ ವರದಿಯನ್ನು ತಾರತಮ್ಯದಿಂದ ತೆಗೆದುಕೊಳ್ಳಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಕೆಲವು ಸಾಧಕರಿಗೆ ಸೇವೆ ಮಾಡುವಾಗ ಅಥವಾ ದೈನಿಕ ‘ಸನಾತನ ಪ್ರಭಾತ ಓದುವಾಗ ತನ್ನಿಂದತಾನೇ ಭಾವಜಾಗೃತಿಯಾಗುತ್ತದೆ. ಭಾವವೃದ್ಧಿಗಾಗಿ ಅವರಿಗೆ ಪ್ರತ್ಯೇಕ ಪ್ರಯೋಗ ಮಾಡಬೇಕಾಗುವುದಿಲ್ಲ. ಇಂತಹ ಸಾಧಕರಿಗೆ ಜವಾಬ್ದಾರ ಸಾಧಕರು ನಿತ್ಯದ ಚಿಂತನಕೋಷ್ಟಕಕ್ಕನುಸಾರ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಹೇಳಬಾರದು. (ಚಿಂತನಕೋಷ್ಟಕ – ಸಾಧಕರ ವ್ಯಷ್ಟಿ ಸಾಧನೆಯ, ನಾಮಜಪ, ಪ್ರಾರ್ಥನೆ, ಕೃತಜ್ಞತೆ, ಭಾವಜಾಗೃತಿಯ ಪ್ರಯತ್ನ ಇತ್ಯಾದಿಗಳ ವರದಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮಾಡಿದ ಕೊಷ್ಟಕ) ಯಾವ ಸಾಧಕರ ಭಾವಜಾಗೃತಿ ಆಗುವುದಿಲ್ಲವೋ, ಅವರಿಗೆ ಚಿಂತನಕೋಷ್ಟಕಕ್ಕನುಸಾರ ಪ್ರಯತ್ನಿಸಲು ಹೇಳಬೇಕು !

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩.೬.೨೦೨೩)