ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರವು ಸರಕಾರಿ ಕಾಮಗಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಶೇಕಡ 4 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಗೆ ಭಾಜಪ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ಹಾಗೆಯೇ ಈ ಮಸೂದೆಗೆ ಕಾನೂನು ರೀತಿಯಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.
ವಿರೋಧ ವ್ಯಕ್ತಪಡಿಸುವಾಗ ಭಾಜಪದ ಶಾಸಕರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾಜಪದ ಕೆಲವು ಶಾಸಕರು ಈ ಮಸೂದೆಯ ಪ್ರತಿ ಮತ್ತು ಕೆಲವು ದಾಖಲೆಗಳನ್ನು ನೇರ ವಿಧಾನಸಭೆಯ ಅಧ್ಯಕ್ಷರ ಮೇಲೆ ಎಸೆದಿದ್ದಾರೆಂದು ಕಾಂಗ್ರೆಸ್ಸಿನ ಶಾಸಕರು ಆರೋಪಿಸಿದ್ದಾರೆ. ಇದರಿಂದ ವಿಧಾನಸಭೆಯಲ್ಲಿ ದೊಡ್ಡ ಗದ್ದಲ ಉಂಟಾಯಿತು. ವಿಧಾನಸಭೆಯ ಕಾರ್ಯಕಲಾಪವನು ಕೆಲಕಾಲ ಮುಂದೂಡಲಾಯಿತು .