ತಲೆಗೆ 35 ಹೊಲಿಗೆ !
ಇಂದೋರ್ (ಮಧ್ಯಪ್ರದೇಶ) – ಪಂಚಕುಯಿಯಾ ರಾಮಮಂದಿರದ ಪ್ರದೇಶದಲ್ಲಿ 2 ವರ್ಷದ ಮಗುವಿನ ಮೇಲೆ ನಾಯಿಗಳ ಗುಂಪು ದಾಳಿ ಮಾಡಿದ್ದರಿಂದ ಮಗುವಿಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆಗೆ 35 ಹೊಲಿಗೆಗಳನ್ನು ಹಾಕಲಾಗಿದೆ.
ಸ್ಥಳೀಯರ ಪ್ರಕಾರ, ದೇವಾಲಯದ ಆವರಣದಲ್ಲಿ 50 ಕ್ಕೂ ಹೆಚ್ಚು ಅಪಾಯಕಾರಿ ನಾಯಿಗಳಿವೆ, ಅವು ಭಕ್ತರು ಮತ್ತು ಕೊಟ್ಟಿಗೆಯಲ್ಲಿರುವ ಹಸು ಮತ್ತು ಕರುಗಳ ಮೇಲೆ ದಾಳಿ ಮಾಡಿವೆ. ಮಾರ್ಚ್ 19 ರಂದು, 3 ಭಕ್ತರನ್ನು ಅಲ್ಲಿನ ನಾಯಿಗಳು ಕಚ್ಚಿದ್ದವು. ಈ ಘಟನೆಯಿಂದ ಮಹಾಮಂಡಲೇಶ್ವರ ರಾಮಗೋಪಾಲದಾಸಜಿ ಮಹಾರಾಜ್ ಅವರು ಮುನ್ಸಿಪಲ್ ಕಮಿಷನರ್ ಮತ್ತು ಮೇಯರ್ ಅವರಿಗೆ ದೂರವಾಣಿ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಗರದ ಹೊರವಲಯದಲ್ಲಿ ನಾಯಿಗಳಿಗೆ ದೊಡ್ಡ ಆಶ್ರಯ ತಾಣವನ್ನು ನಿರ್ಮಿಸುವಂತೆ ಕೂಡ ಅವರು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಮನುಷ್ಯರು ದಾಳಿ ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ. ಆದರೆ ಬೀದಿ ನಾಯಿಗಳಿಗೆ ಶಿಕ್ಷೆ ಯಾಕೆ ಆಗುತ್ತಿಲ್ಲ? ನಾಯಿಗಳಿಂದ ಪ್ರಾಣಕ್ಕೆ ಅಪಾಯವಿದ್ದರೆ, ಅಂತಹ ನಾಯಿಗಳನ್ನು ಕೊಲ್ಲುವುದೇ ಸೂಕ್ತ. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಬೇಕು! |