ಶ್ರೀರಾಮ ಮಂದಿರಕ್ಕಾಗಿ ಅಧಿಕಾರವನ್ನು ಕಳೆದುಕೊಳ್ಳಬೇಕಾದರೂ ಪರವಾಗಿಲ್ಲ! – ಯೋಗಿ ಆದಿತ್ಯನಾಥ್

ಅಯೋಧ್ಯೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ

ಅಯೋಧ್ಯೆ (ಉತ್ತರ ಪ್ರದೇಶ) – ನನ್ನ ಮೂರು ತಲೆಮಾರುಗಳು ಶ್ರೀರಾಮ ಜನ್ಮಭೂಮಿ ಚಳುವಳಿಗೆ ಸಮರ್ಪಿತವಾಗಿದ್ದವು. ನಾವು ಅಧಿಕಾರಕ್ಕಾಗಿ ಬಂದಿಲ್ಲ. ಶ್ರೀರಾಮ ಮಂದಿರಕ್ಕಾಗಿ ನಾವು ಅಧಿಕಾರವನ್ನು ಕಳೆದುಕೊಳ್ಳಬೇಕಾದರೂ ಪರವಾಗಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಯೋಧ್ಯೆ ಅಭಿವೃದ್ಧಿ ಕಾರ್ಯಕ್ಕಾಗಿ ಆಗಮಿಸಿದ್ದ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಯೋಗಿ ಆದಿತ್ಯನಾಥ ಅವರು ಹೇಳಿದರು,

೧. “ಮುಖ್ಯಮಂತ್ರಿಯಾಗಿ ಅಯೋಧ್ಯೆಗೆ ಹೋದರೆ ವಿವಾದ ಉಂಟಾಗುತ್ತದೆ” ಎಂದು ಹೇಳುವ ಒಂದು ಗುಂಪು ಇತ್ತು. ನಾವು “ವಿವಾದ ಉಂಟಾದರೆ ಆಗಲಿ; ಆದರೆ ಅಯೋಧ್ಯೆಯ ಬಗ್ಗೆ ಏನಾದರೂ ಯೋಚಿಸುವ ಅವಶ್ಯಕತೆಯಿದೆ” ಎಂದು ಹೇಳಿದೆವು. “ನೀವು ಹೋಗುತ್ತೀರಿ ಮತ್ತು ರಾಮಮಂದಿರದ ಚರ್ಚೆ ಆಗುತ್ತದೆ” ಎಂದು ಹೇಳುವ ಒಂದು ಗುಂಪು ಕೂಡ ಇತ್ತು., “ನಾವು ಅಧಿಕಾರಕ್ಕಾಗಿ ಬಂದಿದ್ದೇವೆ” ಎಂದು ಯಾರು ಹೇಳಿದರು? ಶ್ರೀರಾಮ ಮಂದಿರಕ್ಕಾಗಿ ಅಧಿಕಾರವನ್ನು ಕಳೆದುಕೊಳ್ಳಬೇಕಾದರೂ ಪರವಾಗಿಲ್ಲ ಎಂದು ನಾನು ಹೇಳಿದೆ.

೨. ನಾವು 2017 ರಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಆಯೋಜಿಸಿದಾಗ ನಮ್ಮ ಮನಸ್ಸಿನಲ್ಲಿ ಏನೇ ಆದರೂ ಅಯೋಧ್ಯೆಗೆ ಅದರ ಗುರುತು ಸಿಗಬೇಕು, ಅಯೋಧ್ಯೆಗೆ ಅದರ ಸರಿಯಾದ ಗೌರವ ಸಿಗಬೇಕು ಎಂಬ ಒಂದೇ ಒಂದು ವಿಚಾರವಿತ್ತು. ದೀಪಾವಳಿಗಿಂತ ಒಂದು ದಿನ ಮೊದಲು, ಅಯೋಧ್ಯೆಯ ದೀಪೋತ್ಸವವು ಒಂದು ಹಬ್ಬವಾಗಿ ಪರಿವರ್ತಿತವಾಗಿದೆ, ಅದು ಸಮಾಜದ ಹಬ್ಬವಾಗಿದೆ ಎಂಬುದನ್ನು ನೀವೇ ನೋಡುತ್ತಿದ್ದೀರಿ.

೩. ಶ್ರೀ ಅಯೋಧ್ಯೆ ಧಾಮವು ಭಾರತದಲ್ಲಿ ಸನಾತನ ಧರ್ಮದ ಅಡಿಪಾಯದ ಭೂಮಿಯಾಗಿದೆ ಮತ್ತು 7 ಪುಣ್ಯನಗರಗಳಲ್ಲಿ ಮೊದಲನೆಯದಾಗಿದೆ. ರಾಮಾಯಣವು ವಿಶ್ವದ ಮೊದಲ ಮಹಾಕಾವ್ಯವಾಗಿದೆ ಮತ್ತು ಸಾಮಾನ್ಯ ಜನರಲ್ಲಿ ಎಷ್ಟು ಜನಪ್ರಿಯವಾಯಿತೆಂದರೆ ಅದು ಭಾರತ ಸೇರಿದಂತೆ ಪ್ರಪಂಚದ ವಿವಿಧ ಭಾಷೆಗಳ ಜನರ ಹೃದಯವನ್ನು ಸ್ಪರ್ಶಿಸುತ್ತಿದೆ.

ಸಂಪಾದಕೀಯ ನಿಲುವು

ಇಂತಹ ಮಾತನ್ನು ಕೇವಲ ಸಂತರು ಅಥವಾ ಸನ್ಯಾಸಿ ಪದವಿಯಲ್ಲಿರುವ ಅಧಿಕಾರಿಗಳು ಮಾತ್ರ ಹೇಳಲು ಸಾಧ್ಯ, ಇತರರಿಗೆ ಇಂತಹ ಧೈರ್ಯ ಇರುವುದಿಲ್ಲ! ಇಂತಹ ಸಂತ ಅಧಿಕಾರಿಗಳು ಎಲ್ಲೆಡೆ ಲಭಿಸಿದರೆ, ಈ ದೇಶದಲ್ಲಿ ರಾಮರಾಜ್ಯ ಬರದೇ ಇರಲು ಸಾಧ್ಯವಿಲ್ಲ!