ಸಾಂವಿಧಾನಿಕ ಮತ್ತು ಧಾರ್ಮಿಕ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡಿ ! – ಪೂ. ರಮಾನಂದ ಗೌಡ

ಪೂ. ರಮಾನಂದ ಗೌಡ

೩ ಜುಲೈ ೨೦೨೩ ರಂದು ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸ ಲಾಯಿತು. ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಜಿಜ್ಞಾಸುಗಳಿಗೆ ಆನ್‌ಲೈನ್‌ದಲ್ಲಿ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ.

೧. ಗುರುಪೂರ್ಣಿಮೆಯ ಮಹತ್ವ

ಶಿಷ್ಯನು ಶ್ರೀ ಗುರುದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೇ ಗುರುಪೂರ್ಣಿಮೆ. ಸೂರ್ಯೋದಯವಾದಂತೆ ಕತ್ತಲು ನಾಶವಾಗುತ್ತದೆ. ಅದೇ ರೀತಿ ಶ್ರೀಗುರುವಿನಿಂದಲೇ ನಮ್ಮ ಜೀವನದಲ್ಲಿನ ‘ನಾನು ಯಾರು ‘ನನ್ನ ಸ್ವರೂಪ ಏನು ‘ಮನುಷ್ಯ ಜನ್ಮದ ಧ್ಯೇಯವೇನು ಮುಂತಾದವುಗಳ ಬಗ್ಗೆ ನಮಗೆ ಅರಿವಾಗುತ್ತದೆ.

ಶ್ರೀಗುರುವು ಕೇವಲ ದೇಹಧಾರಿ ವ್ಯಕ್ತಿತ್ವವಲ್ಲ, ಅದು ಒಂದು ತತ್ತ್ವವಾಗಿದೆ. ಪ್ರತಿ ಕ್ಷಣ ಶ್ರೀ ಗುರುಗಳಿಗೆ ಅಪೇಕ್ಷಿತವಿರುವಂತಹ ಸಾಧನೆ ಮತ್ತು ಸೇವೆ ಮಾಡುವುದು ಶ್ರೀ ಗುರುವಿಗೆ ಸಲ್ಲಿಸುವ ನಿಜವಾದ ಕೃತಜ್ಞತೆಯಾಗಿದೆ. ಎಲ್ಲರಿಗೂ ಶ್ರೀಗುರುವಿನ ಸಗುಣ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದೇನಿಲ್ಲ; ಆದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಶ್ರೀಗುರುವಿನ ನಿರ್ಗುಣ ರೂಪದ ಸೇವೆಯನ್ನು ಮಾಡುವ ಅವಕಾಶವಿದೆ. ಸಗುಣಕ್ಕಿಂತ ನಿರ್ಗುಣ ಶ್ರೇಷ್ಠ. ಶ್ರೀಗುರುವಿನ ನಿರ್ಗುಣ ರೂಪದ ಸೇವೆಯ ಅವಕಾಶವು ಎಲ್ಲರಿಗೂ ಲಭ್ಯವಿದೆ. ಗುರುದೇವರ ನಿರ್ಗುಣ ರೂಪದ ಸೇವೆ ಅಂದರೆ ಅಧ್ಯಾತ್ಮ ಪ್ರಚಾರ – ಧರ್ಮ ಪ್ರಚಾರ ! ಶ್ರೀ ಗುರು ಚರಿತ್ರೆಯ ಎರಡನೇ ಅಧ್ಯಾಯದಲ್ಲಿ ಗುರುವಿನ ಹೆಸರು ‘ವೇದ ಧರ್ಮ ಎಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಶ್ರೀಗುರು ಎಂದರೆ ಸನಾತನ ವೈದಿಕ ಧರ್ಮ ಮತ್ತು ಗುರುಕಾರ್ಯ ಎಂದರೆ ಧರ್ಮಕಾರ್ಯ !

ಗುರು-ಶಿಷ್ಯ ಪರಂಪರೆಯು ಭಾರತದ ವೈಶಿಷ್ಟ್ಯವಾಗಿದೆ. ಈ ದಿವ್ಯ ಗುರು-ಶಿಷ್ಯ ಪರಂಪರೆಯು ಆಶ್ರಮಗಳನ್ನು ಮಾತ್ರ ಸ್ಥಾಪಿಸಿದ್ದಲ್ಲ, ಸಮಾಜದಲ್ಲಿ ಧರ್ಮ-ಆಧ್ಯಾತ್ಮಿಕ-ಭಕ್ತಿಗಳನ್ನು ಹರಡುವ ಮೂಲಕ, ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವ ಅಂದರೆ ಧರ್ಮವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಜೀವನವನ್ನೂ ಉನ್ನತಗೊಳಿಸಿತು ಹಾಗೂ ರಾಷ್ಟ್ರ ಮತ್ತು ಧರ್ಮ ರಕ್ಷಣೆ ಅರ್ಥಾತ್ ಧರ್ಮಸಂಸ್ಥಾಪನೆಯ ಕಾರ್ಯ ವನ್ನು ಸಹ ಮಾಡಿತು. ಈ ಪರಂಪರೆಯಿಂದಾಗಿಯೇ ಅನೇಕ ವಿದೇಶಿ ಆಕ್ರಮಣಗಳ ನಡುವೆಯೂ ಹಿಂದೂ ಧರ್ಮವು ಯಶಸ್ವಿಯಾಗಿ ಉಳಿದುಕೊಂಡಿದೆ. ಇದಕ್ಕೆ ಉದಾಹರಣೆ ಗಳೆಂದರೆ ಶ್ರೀಕೃಷ್ಣ-ಅರ್ಜುನ, ಆರ್ಯ ಚಾಣಕ್ಯ-ಚಂದ್ರಗುಪ್ತ ಮೌರ್ಯ, ಸಮರ್ಥ ರಾಮದಾಸ ಸ್ವಾಮಿ-ಛತ್ರಪತಿ ಶಿವಾಜಿ ಮಹಾರಾಜರು ಇತ್ಯಾದಿ. ಗುರು-ಶಿಷ್ಯರ ಅತ್ಯುತ್ತಮ ಉದಾಹರಣೆಗಳಲ್ಲಿ ಒಬ್ಬರು ವಿದ್ಯಾರಣ್ಯಸ್ವಾಮಿಗಳು ಮತ್ತು ಹರಿಹರ-ಬುಕ್ಕರಾಯರು ಮತ್ತು ಅವರು ದಕ್ಷಿಣ ಭಾರತದಲ್ಲಿ ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯ !

೧ ಅ. ವಿದ್ಯಾರಣ್ಯಸ್ವಾಮಿಯವರಿಂದ ಹರಿಹರ ಮತ್ತು ಬುಕ್ಕರಾಯರ ಮೂಲಕ ಹಿಂದೂ ಸಾಮ್ರಾಜ್ಯದ ರಚನೆ : ದಕ್ಷಿಣ ಭಾರತದಲ್ಲಿ ವಿದ್ಯಾರಣ್ಯಸ್ವಾಮಿಯವರ ಮಾರ್ಗದರ್ಶನದಲ್ಲಿ, ಹರಿಹರ ಮತ್ತು ಬುಕ್ಕರಾಯರು ಬಲಶಾಲಿಯಾದ ಹಿಂದೂ ಸಾಮ್ರಾಜ್ಯವನ್ನು ರಚಿಸಿದರು, ಅದುವೇ ವಿಜಯನಗರ ಸಾಮ್ರಾಜ್ಯ. ೧೩ ನೇ ಶತಮಾನದಲ್ಲಿ ದಿಲ್ಲಿಯಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಕ್ರೂರ ದಬ್ಬಾಳಿಕೆಯ ಸುಲ್ತಾನಶಾಹಿ ನಡೆಯುತ್ತಿತ್ತು. ದಿಲ್ಲಿಯಲ್ಲಿ ಅಧಿಕಾರಾರೂಢನಾದ ನಂತರ ಅತ್ಯಾಚಾರಿ ಸುಲ್ತಾನನು ದಕ್ಷಿಣ ಭಾರತವನ್ನು ಕಬಳಿಸುವ ಕನಸು ಕಾಣತೊಡಗಿದನು. ಆ ಕಾಲ ದಲ್ಲಿ ಇಸ್ಲಾಮೀ ಆಕ್ರಮಣಕಾರಿಗಳು ಹಿಂದೂ ರಾಜ್ಯಗಳ ಮೇಲೆ ಆಕ್ರಮಣ ನಡೆಸುತ್ತಿದ್ದರು. ಆಗ ಹಿಂದೂ ರಾಜರು ಸೋತ ನಂತರ ಹಿಂದೂ ರಾಜನನ್ನು ಮಾಂಡಲಿಕನನ್ನಾಗಿಸಿ ಆ ಹಿಂದೂ ರಾಜ್ಯವನ್ನು ಸುಲ್ತಾನಶಾಹಿಯ ಅಧೀನಗೊಳಿಸಲಾಗುತ್ತಿತ್ತು. ಅದೇ ರೀತಿ ಹರಿಹರ ಮತ್ತು ಬುಕ್ಕರನ್ನು ದಿಲ್ಲಿಗೆ ಕರೆತಂದನು. ಅವರನ್ನು ಇಸ್ಲಾಂಗೆ ಮತಾಂತರಿಸಿದನು ಮತ್ತು ದಕ್ಷಿಣದ ರಾಜ್ಯ ಗಳನ್ನು ಸುಲ್ತಾನರ ಅಡಿಯಲ್ಲಿ ತರುವ ಜವಾಬ್ದಾರಿಯನ್ನು ಅವರಿಗೆ ವಹಿಸಿದನು. ಹರಿಹರ ಮತ್ತು ಬುಕ್ಕರು ದಕ್ಷಿಣಕ್ಕೆ ಬಂದಾಗ ವನದಲ್ಲಿ ತಪಸ್ಸು ಮಾಡುತ್ತಿದ್ದ ವಿದ್ಯಾರಣ್ಯ ಸ್ವಾಮಿ ಯವರ ಭೇಟಿಯಾಯಿತು. ವಿದ್ಯಾರಣ್ಯ ಸ್ವಾಮಿಗಳು ದೊಡ್ಡ ಸಂತರು, ತತ್ತ್ವಜ್ಞಾನಿಗಳು, ಚಿಂತಕರು ಹಾಗೂ ವೇದಗಳ ಅಭ್ಯಾಸಕರಾಗಿದ್ದರು. ಅವರು ಹರಿಹರ ಮತ್ತು ಬುಕ್ಕರನ್ನು ಶುದ್ಧೀಕರಿಸಿ ಹಿಂದೂಧರ್ಮಕ್ಕೆ ಸೇರಿಸಿಕೊಂಡರು. ಅವರಿಗೆ ರಾಜಧರ್ಮದ ಶಿಕ್ಷಣ ನೀಡಿದರು ಮತ್ತು ೧೩೩೬ ರಲ್ಲಿ ಅವರ ಮೂಲಕ ವಿಜಯನಗರ ಸಾಮ್ರಾಜ್ಯದ ಅಡಿಪಾಯ ಹಾಕಿದರು.

ವಿದ್ಯಾರಣ್ಯಸ್ವಾಮಿಗಳ ಮಾರ್ಗದರ್ಶನಲ್ಲಿ ಹರಿಹರ ಮತ್ತು ಬುಕ್ಕರು ಆದರ್ಶ ಶಿಷ್ಯರಂತೆ ರಾಜ್ಯಭಾರ ನಡೆಸಿದರು. ವಿಜಯನಗರ ಸಾಮ್ರಾಜ್ಯವು ಎಲ್ಲ ರೀತಿಯಿಂದ ಸಂಪದ್ಭರಿತ ವಾಗಿತ್ತು. ವಿಜಯನಗರ ಸಾಮ್ರಾಜ್ಯವು ಹಿಂದೂಗಳ ಒಂದು ಶಕ್ತಿಶಾಲಿ, ಪ್ರಬಲ ಮತ್ತು ಸಮೃದ್ಧ ರಾಷ್ಟ್ರವನ್ನು ಸೃಷ್ಟಿಸಿತು, ಅದು ಮುಂದಿನ ೩೦೦ ವರ್ಷಗಳ ಕಾಲ ನಡೆಯಿತು. ಈ ಸಾಮ್ರಾಜ್ಯವು ಹಿಂದೂ ಜನರನ್ನು, ಹಾಗೆಯೇ ಹಿಂದೂ ಭಾವೈಕ್ಯ, ಆಚಾರ, ವಿಚಾರ, ಸಂಸ್ಕಾರ, ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಜಿಹಾದಿ ಆಕ್ರಮಣಕಾರರಿಂದ ರಕ್ಷಿಸಿತು. ಸ್ವಾಮಿ ವಿದ್ಯಾರಣ್ಯರ ಗುರು ಸ್ವಾಮಿ ವಿದ್ಯಾತೀರ್ಥರು ಇಸ್ಲಾಮಿಕ್ ಆಕ್ರಮಣಗಳಿಂದ ಭಾರತದ ಸಂಸ್ಕೃತಿ ಮತ್ತು ಸಮಾಜವನ್ನು ರಕ್ಷಿಸುವ ಜವಾಬ್ದಾರಿಯನ್ನು ವಿದ್ಯಾರಣ್ಯಸ್ವಾಮಿಯವರಿಗೆ ವಹಿಸಿದ್ದರು. ವಿದ್ಯಾರಣ್ಯಸ್ವಾಮಿಗಳು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು ಮತ್ತು ಗುರುವಾಜ್ಞೆಯನ್ನು ಪಾಲಿಸಿದರು. ಈ ಉದಾಹರಣೆಯಿಂದ, ಗುರುತತ್ತ್ವವು ಯಾವಾಗಲೂ ಧರ್ಮ ವನ್ನು ರಕ್ಷಿಸಲು ತನ್ನ ಶಿಷ್ಯರಿಗೆ ಆಜ್ಞಾಪಿಸಿದೆ ಅಥವಾ ಅವರಿಂದ ಈ ಕೆಲಸವನ್ನು ಮಾಡಿಸಿಕೊಂಡಿದೆ ಮತ್ತು ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಹೇಗೆ ಮಾಡಿತು ಎಂಬುದು ಗಮನಕ್ಕೆ ಬರುತ್ತದೆ. ಇಂದು, ಇದೇ ಸ್ವರೂಪದ ಧರ್ಮಸಂಸ್ಥಾಪನೆಯ ಕಾರ್ಯದ ಅವಶ್ಯಕತೆ ಯಿದೆ. ಶ್ರೀ ಗುರುತತ್ತ್ವಕ್ಕೆ ಕಾಲಾನುಸಾರ ವರ್ತಮಾನದಲ್ಲಿ ಅವಶ್ಯಕವಿರುವ ಕಾರ್ಯ ಎಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಸೈದ್ಧಾಂತಿಕ, ಕಾನೂನುರೀತ್ಯಾ ಮತ್ತು ಸಂಘಟನಾತ್ಮಕ ಸ್ತರ ದಲ್ಲಿ ಸಾಂವಿಧಾನಿಕ ಪ್ರಯತ್ನಿಸುವುದೇ ಗುರುಸೇವೆಯಾಗಿದೆ.

೨. ಸಾಂವಿಧಾನಿಕ ಹಿಂದೂ ರಾಷ್ಟ್ರದ ಅವಶ್ಯಕತೆ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಹಿಂದೂ ರಾಷ್ಟ್ರದ ಬಗ್ಗೆ ಚರ್ಚೆ ನಡೆಯುತ್ತಿದೆ.

ಹಿಂದೂ ರಾಷ್ಟ್ರ ಎಂದರೆ ಕೇವಲ ಹಿಂದೂಗಳ ರಾಷ್ಟ್ರವಲ್ಲ. ಹಿಂದೂ ರಾಷ್ಟ್ರ ಎಂಬುದು ರಾಜಕೀಯ ಪರಿಕಲ್ಪನೆಯಲ್ಲ. ಹಿಂದೂ ರಾಷ್ಟ್ರವು ಎಲ್ಲಾ ಜೀವಿಗಳ ಕಲ್ಯಾಣದ ವಿಚಾರವನ್ನು ಪರಿಗಣಿಸುವ ಈಶ್ವರ ಸಂಕಲ್ಪಿತ ಸಾಮಾಜಿಕ ವ್ಯವಸ್ಥೆಯಾಗಿದೆ. ವಾಸ್ತವದಲ್ಲಿ ೧೯೪೭ ರಲ್ಲಿ, ಧರ್ಮದ ಆಧಾರದಲ್ಲಿ ದೇಶ ವಿಭಜನೆ ಯಾದಾಗ ಮುಸಲ್ಮಾನರಿಗಾಗಿ ಪಾಕಿಸ್ತಾನವನ್ನು ನೀಡಲಾಯಿತು, ಆಗ ಭಾರತದ ಉಳಿದ ಭಾಗವನ್ನು ಹಿಂದೂಗಳಿಗಾಗಿ ಹಿಂದೂ ರಾಷ್ಟ್ರವೆಂದು ಘೋಷಿಸಬೇಕಾಗಿತ್ತು; ಆದರೆ ಹಾಗೆ ಆಗಲಿಲ್ಲ. ಆಗ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿರಲಿಲ್ಲ; ಆದರೆ ಭಾರತವನ್ನು ‘ಜಾತ್ಯತೀತ ಎಂದು ಘೋಷಿಸಿದಾಗಿನಿಂದ ಇಂದು ಅಲ್ಪಸಂಖ್ಯಾತರಿಗೆ ಎಲ್ಲಾ ಹಕ್ಕುಗಳು ಸಿಗುತ್ತಿವೆ. ಬಹುಸಂಖ್ಯಾತ ಹಿಂದೂಗಳು ತುಳಿತಕ್ಕೊಳಗಾಗಿದ್ದಾರೆ. ಕಾಶ್ಮೀರ ಮಾತ್ರವಲ್ಲ, ಹಲವು ರಾಜ್ಯಗಳಲ್ಲಿ ಹಿಂದೂಗಳು ಪಲಾಯನ (ಗುಳೆ) ಹೋಗುತ್ತಿದ್ದಾರೆ. ಪ್ರತ್ಯೇಕತಾವಾದಿಗಳಿಂದಾಗಿ ಮತ್ತೊಂದು ವಿಭಜನೆಯ ಸ್ಥಿತಿ ಉದ್ಭವಿಸಿದೆ. ಆದ್ದರಿಂದಲೇ ಇಂದು ಹಿಂದೂ ರಾಷ್ಟ್ರಕ್ಕೆ ಎಲ್ಲೆಡೆಗಳಿಂದ ಬೆಂಬಲ ಸಿಗುತ್ತಿದೆ. ‘ಹಿಂದೂ ರಾಷ್ಟ್ರ ಈಗ ಆಂದೋಲನವಾಗಿ ಮಾರ್ಪಟ್ಟಿದೆ. ‘ಹಿಂದೂ ರಾಷ್ಟ್ರವು ಹಿಂದೂಗಳ ‘ಮನ ಕಿ ಬಾತ್ (ಮನದ ಮಾತು) ಆಗಿದೆ. ಭಾರತದ ಮೂಲ ಭಾವವೇ ಹಿಂದೂ ಧರ್ಮವಾಗಿದೆ. ಸನಾತನ ಹಿಂದೂ ಧರ್ಮವು ಭಾರತದ ಆತ್ಮವಾಗಿದೆ. ಭಾರತವು ತೇಜದ ಉಪಾಸಕವಾಗಿದೆ! ‘ಭಾ ಎಂದರೆ ತೇಜ ಮತ್ತು ರತ ಎಂದರೆ ರಮಿಸುವವನು ! ಕೇವಲ ಸಾಧನೆಯ ಮೂಲಕವೇ ಈ ತೇಜಸ್ಸು ಪ್ರಾಪ್ತಿಯಾಗುತ್ತದೆ. ಸಾಧನೆ ಅಥವಾ ಆಧ್ಯಾತ್ಮಿಕತೆಯ ಆಧಾರದಲ್ಲಿ ಭಾರತವನ್ನು ‘ಜಾತ್ಯತೀತ ಎಂದು ಹೇಳುವುದೆಂದರೆ ವಜ್ರವನ್ನು ಇದ್ದಿಲು ಎಂದ ಹಾಗಾಗುತ್ತದೆ. ಸ್ವಾಮಿ ವರದಾನಂದ ಭಾರತಿ ಅವರು, ‘ಧರ್ಮ ಮತ್ತು ರಾಷ್ಟ್ರ ಎಂದಿಗೂ ಪ್ರತ್ಯೇಕವಾಗಿರಲಿಲ್ಲ, ಇಂದು ಕೂಡ ಪ್ರತ್ಯೇಕವಲ್ಲ. ರಾಜ್ಯಡಳಿತವು ವಿಭಿನ್ನವಾಗಿರಬಹುದು. ರಾಜ್ಯಾಡಳಿತ ಬೇರೆ ರಾಷ್ಟ್ರ ಬೇರೆ ಆಗಿದೆ. ಆಡಳಿತವು ಕೆಲವೊಮ್ಮೆ ಮುಸಲ್ಮಾನ, ಕೆಲವೊಮ್ಮೆ ಕ್ರೈಸ್ತ; ವಿದ್ದರೂ ಈ ರಾಷ್ಟ್ರವು ಹಿಂದೂ ರಾಷ್ಟ್ರವಾಗಿತ್ತು ಮತ್ತು ಈಗಲೂ ಹಿಂದೂ ರಾಷ್ಟ್ರವೇ ಆಗಿದೆ ಎಂದಿದ್ದರು.

೩. ಪ್ರಸ್ತುತ ಕಾಲದಲ್ಲಿ ಸತ್-ಅಸತ್‌ನ ಹೋರಾಟ ಮತ್ತು ಹಿಂದೂ ಧರ್ಮದ ಮೇಲಾದ ಆಘಾತಗಳು:

ಸಂವಿಧಾನದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರವೆಂದು ಘೋಷಿಸುವುದು ಹಿಂದೂ ರಾಷ್ಟ್ರ ಸ್ಥಾಪನೆಯ ಒಂದು ಭಾಗ ವಾಗಿದೆ; ಆದರೆ ಅದು ಸಾಕಾಗುವುದಿಲ್ಲ, ಈ ಹಿಂದೂ ರಾಷ್ಟ್ರವು ಧರ್ಮಾಧಿಷ್ಠಿತವಾಗಿರಬೇಕು. ಇಂದು ಪ್ರಧಾನಿಯವರು ಹೊಸ ಸಂಸತ್ ಭವನದಲ್ಲಿ ಸಾಂಕೇತಿಕ ‘ಸೆಂಗೊಲ್ (ರಾಜದಂಡ)ವನ್ನು ಪ್ರತಿಷ್ಠಾಪಿಸಿದರು. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದಲ್ಲಿ ರಾಜಧರ್ಮ ನಿಜವಾದ ಅರ್ಥದಲ್ಲಿ ಕಾರ್ಯನಿರತವಾಗಲಿದೆ. ಅರ್ಥಾತ್ ಹಿಂದೂ ರಾಷ್ಟ್ರವು ನ್ಯಾಯದ ರಾಜ್ಯವಾಗಿರುತ್ತದೆ. ಕೆಲವರಿಗೆ ಈ ವ್ಯವಸ್ಥೆಯಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಭಾರತವು ಧರ್ಮರಹಿತ (ಜಾತ್ಯತೀತ) ಆಗಿದ್ದರೆ ಏನಾಗುತ್ತದೆ ? ಎಂದೆನಿಸುತ್ತದೆ. ದೇಹದಲ್ಲಿ ಜೀವವಿಲ್ಲದಿದ್ದರೆ, ದೇಹಕ್ಕೆ ಏನಾಗುತ್ತದೆಯೋ ಅದೇ ಧರ್ಮವಿಲ್ಲದ ರಾಷ್ಟ್ರಕ್ಕೂ ಆಗುತ್ತದೆ.

೩ ಅ. ದೇವಸ್ಥಾನಗಳ ಮೇಲಾಗುತ್ತಿರುವ ವಿವಿಧ ಆಘಾತಗಳು : ಹಿಂದೆ ಇಸ್ಲಾಮಿಕ್ ದಾಳಿಕೋರರು ಹಿಂದೂಗಳ ಶ್ರದ್ಧಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ದೇವಾಲಯಗಳ ಮೇಲೆ ದಾಳಿ ನಡೆಸಿ ದೇವರ ವಿಗ್ರಹಗಳನ್ನು ಅಪವಿತ್ರಗೊಳಿಸಿದರು. ಇಂದು ಮಂದಿರ ಸರಕಾರೀಕರಣದ ಮೂಲಕ ದೇವಾಲಯ ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದೆ.

ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ಭೂಕಬಳಿಕೆ, ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಇಂತಹ ಘಟನೆ ಗಳಾಗುತ್ತಿವೆ. ದೇಶದಾದ್ಯಂತ ಕೇವಲ ದೇವಾಲಯಗಳನ್ನು ಮಾತ್ರ ಸರಕಾರಿಕರಣ ಗೊಳಿಸಲಾಗಿದೆ; ಆದರೆ ಇತರ ಪಂಥೀಯರ ಯಾವುದೇ ಪ್ರಾರ್ಥನಾಸ್ಥಳಗಳನ್ನು ಸರಕಾರೀಕರಣಗೊಳಿಸಿಲ್ಲ ! ಇತ್ತೀಚೆಗೆ ಆಂಧ್ರಪ್ರದೇಶ ಸರಕಾರವು ರಾಜ್ಯದ ೨೪ ಸಾವಿರ ದೇವಸ್ಥಾನಗಳ ೪ ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.ಇದರ ಮೌಲ್ಯ ಸುಮಾರು ೧ ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಸರಕಾರೀಕರಣಗೊಂಡ ದೇವಾಲಯಗಳಲ್ಲಿ ಪಾವಿತ್ರ್ಯ ಕಾಪಾಡ ಲಾಗುವುದಿಲ್ಲ ಅಥವಾ ಭಕ್ತರು ನೀಡುವ ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುವುದಿಲ್ಲ. ಮತ್ತೊಂದೆಡೆ, ಈ ದೇವನಿಧಿ ಯನ್ನು ಸರಕಾರಿ ಕೆಲಸಗಳಿಗೆ ಅಥವಾ ಇತರ ಪಂಥೀಯರಿಗಾಗಿ ಬಳಸಲಾಗುತ್ತದೆ.ದೇಗುಲ ಗಳ ಸರಕಾರೀಕರಣದೊಂದಿಗೆ, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ತುಂಡು ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಹೋಗುವುದು, ಪುರುಷ ಮತ್ತು ಮಹಿಳಾ ಸಮಾನತೆಯ ಹೆಸರಿನಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲದ ಸ್ಥಳಗಳಿಗೆ ಪ್ರವೇಶಿಸುವುದು, ದೇವಾಲಯದ ಗರ್ಭಗುಡಿ ಯೊಳಗೆ ಪ್ರವೇಶಿಸಲು ಪ್ರಯತ್ನಿಸುವುದು ಈ ರೀತಿಯ ಹೇಯಕೃತ್ಯಗಳನ್ನು ಸಹ ಮಾಡ ಲಾಗುತ್ತಿದೆ. ಈ ಆಧುನಿಕರಣವಾದದ ವಿರುದ್ಧ ಹಿಂದೂಗಳು ಸಂಘಟಿತರಾಗುತ್ತಿದ್ದಾರೆ ಎಂಬ ಚಿತ್ರಣ ಕಾಣಿಸುತ್ತಿದೆ. ಆದರೆ ಇದರಲ್ಲಿ ಇನ್ನೂ ಬಹುದೂರ ಸಾಗಬೇಕಾಗಿದೆ. ಹಿಂದೂ ಗಳಲ್ಲಿರುವ ಧರ್ಮಶಿಕ್ಷಣದ ಅಭಾವದಿಂದ ಇಂದು ದೇವಸ್ಥಾನಗಳಲ್ಲಿ ಸಭ್ಯ ಮತ್ತು ಸಾಂಪ್ರದಾಯಿಕ ಉಡುಪವನ್ನು ಧರಿಸಿ ಹೋಗಲು ಪ್ರಬೋಧನೆ ಮಾಡಬೇಕಾಗಿ ಬಂದಿದೆ. ಹಿಂದೂ ಧರ್ಮದ ಮೇಲಿನ ಈ ದಾಳಿಯನ್ನು ತಡೆಯಲು ದೇವಾಲಯಗಳ ಪಾವಿತ್ರ್ಯ ಕಾಪಾಡುವುದು ಮತ್ತು ದೇವಾಲಯ ಗಳನ್ನು ಸರಕಾರದಿಂದ ಮುಕ್ತಗೊಳಿಸುವುದು ಆವಶ್ಯಕ.

– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ