ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ೮೩ ನೇ ಜನ್ಮೋತ್ಸವದ ಪ್ರಯುಕ್ತ…

ಪಣಜಿ /ಮುಂಬಯಿ , ಮಾರ್ಚ್ ೨೨ (ವಾರ್ತೆ) – ರಾಮರಾಜ್ಯದ ಅನುಭೂತಿ ನೀಡುವ ‘ಸನಾತನ ರಾಷ್ಟ್ರ’ದ ಸಂಕಲ್ಪದ ಶಂಖನಾದ ಮಾಡಿ ಧರ್ಮ ಸಂಸ್ಥಾಪನೆಯ ಕಾರ್ಯಕ್ಕೆ ಗತಿ ನೀಡುವ ಉದ್ದೇಶದಿಂದ ಸನಾತನ ಸಂಸ್ಥೆ ಆಯೋಜಿಸಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಮಂತ್ರಣ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಏಕನಾಥ ಶಿಂದೆ ಇವರಿಗೆ ನೀಡಲಾಯಿತು.

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಇವರನ್ನು ಭೇಟಿ ಮಾಡಿ ಅವರಿಗೆ ಈ ಮಹೋತ್ಸವಕ್ಕೆ ಆಮಂತ್ರಿಸಲಾಯಿತು. ಆ ಸಮಯದಲ್ಲಿ ನ್ಯಾಯವಾದಿ ರಾಜೇಶ ಗಾವಕರ, ಸನಾತನ ಸಂಸ್ಥೆಯ ತುಳಸಿದಾಸ ಗಾಂಜೇಕರ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮತ್ತು ಶ್ರೀ. ನಾರಾಯಣ ನಾಡಕರ್ಣೆ ಉಪಸ್ಥಿತರಿದ್ದರು.

ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡನವೀಸ ಇವರನ್ನು ಕೂಡ ಭೇಟಿ ಮಾಡಿ ಅವರಿಗೆ ಮಹೋತ್ಸವದ ಆಮಂತ್ರಣ ನೀಡಿದರು. ಆ ಸಮಯದಲ್ಲಿ ಮಹಾರಾಷ್ಟ್ರದ ಉದ್ಯೋಗ ಸಚಿವ ಭರತಶೇಠ ಗೋಗಾವಲೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸ್ಗಡ್ ರಾಜ್ಯದ ಸಮನ್ವಯಕ ಶ್ರೀ. ಸುನೀಲ ಘನವಟ ಮುಂತಾದವರು ಉಪಸ್ಥಿತರಿದ್ದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೂ ಕೂಡ ಶ್ರೀ. ವರ್ತಕ ಇವರು ಆಮಂತ್ರಣ ನೀಡಿದರು.

ವಿಶ್ವ ಕಲ್ಯಾಣಕ್ಕಾಗಿ ರಾಮರಾಜ್ಯ ಸಮಾನ ‘ಸನಾತನ ರಾಷ್ಟ್ರ’ದ ಗುರಿ ನಿರ್ಧರಿಸುವ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರ ೮೩ ನೇ ಜನ್ಮೋತ್ಸವ ಸಮಾರಂಭ ಈ ಸಾರಿ ಗೋವಾದಲ್ಲಿ ಭವ್ಯವಾಗಿ ಆಚರಿಸಲಾಗುವುದು. ಅದರ ಪ್ರಯುಕ್ತ ೧೭ ರಿಂದ ೧೯ ರ ಕಾಲಾವಧಿಯಲ್ಲಿ ಫೊಂಡಾದ ಫರ್ಮಾಗುಡಿ ಇಲ್ಲಿಯ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ. ಈ ಮಹೋತ್ಸವದಲ್ಲಿ ಸಂತ ಮಹಂತರು, ಸಚಿವರು ಮತ್ತು ಗಣ್ಯರ ಜೊತೆಗೆ ೨೦ ಸಾವಿರಗಿಂತಲೂ ಹೆಚ್ಚಿನ ಸಾಧಕರು ಮತ್ತು ಧರ್ಮಪ್ರೇಮಿಗಳು ಉಪಸ್ಥಿತರಾಗುವರು.
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!