ಸಾಧಕರೇ, ಗುರುಸೇವೆಯಲ್ಲಿ ಇಷ್ಟಾನಿಷ್ಟವನ್ನು ಕಾಪಾಡದೇ ‘ಶೂದ್ರ ವರ್ಣದ ಸೇವೆಯನ್ನು ಮಾಡುವುದರಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಸೇವೆಗಳನ್ನು ಮಾಡುವ ಸಿದ್ಧತೆಯನ್ನಿಟ್ಟುಕೊಳ್ಳಿ

ಗುರುಚರಣಗಳಲ್ಲಿ ಅರ್ಪಿಸಿದ ಪ್ರತಿಯೊಂದು ಸೇವೆಯಿಂದ ಸಾಧಕನ ಎಲ್ಲ ದೇಹಗಳ ಶುದ್ಧಿಯಾಗುತ್ತದೆ. ಶೂದ್ರ ವರ್ಣದ ಸೇವೆಗಳಿಂದ ಅಹಂ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ.

ಸಾಧಕರೇ, ‘ಆಧ್ಯಾತ್ಮಿಕ ಉನ್ನತಿ ಯಾವಾಗ ಆಗುವುದು ?’ ಎಂಬ ಬಗ್ಗೆ ಚಿಂತಿಸದೇ ಪರಾತ್ಪರ ಗುರುದೇವರ ಮೇಲೆ ಶ್ರದ್ಧೆಯನ್ನಿಟ್ಟು ತಳಮಳದಿಂದ ಪ್ರಯತ್ನಿಸುತ್ತಿರಿ !

‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು’, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ.

ಸಾಧಕರೇ, ಕಲಿಯುಗದ ಭಗವದ್ಗೀತೆಯಂತಿರುವ ‘ಸನಾತನ ಪ್ರಭಾತ’ದ ವಾಚನ ಮತ್ತು ಅಧ್ಯಯನವನ್ನು ನಿಯಮಿತವಾಗಿ ಮಾಡಿ !

‘ಅನೇಕ ಸಾಧಕರಿಂದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ವಾಚನ ಆಗುತ್ತಿಲ್ಲವೆಂದು ಗಮನಕ್ಕೆ ಬಂದಿದೆ. ಇಂತಹ ಸಾಧಕರು ‘ತನ್ನಲ್ಲಿ ಕಲಿಯುವ ವೃತ್ತಿಯ ಅಭಾವವಿದೆ’, ಎಂಬುದನ್ನು ಗಮನದಲ್ಲಿರಿಸಿ ಅದನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

ಸಂತರು ಸಾಧನೆ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನದ ನಂತರ ಅವರಿಗೆ ‘ಧನ್ಯವಾದ’ (ಥ್ಯಾಂಕ್ಯೂ) ಅನ್ನದೇ ‘ಕೃತಜ್ಞತೆ’ ಎಂದು ಹೇಳಿ !

ವ್ಯವಹಾರದಲ್ಲಿ ‘ಧನ್ಯವಾದ’ ಎಂಬ ಶಬ್ದವು ಆಗಾಗ ಬಳಸಲಾಗುತ್ತದೆ; ಆದರೆ ಅಧ್ಯಾತ್ಮದಲ್ಲಿ ‘ಧನ್ಯವಾದ’ ಎನ್ನದೇ ‘ಕೃತಜ್ಞತೆ’, ಎಂದು ಹೇಳಲಾಗುತ್ತದೆ.

ಗುರುಕಾರ್ಯಕ್ಕಾಗಿ ಸಾಧಕರು ತೆಗೆದುಕೊಂಡ ಧ್ಯೇಯವನ್ನು ಪೂರ್ಣಗೊಳಿಸುವಾಗ ಅವರು ಎದುರಿಸುವ ಅಡಚಣೆಗಳ ಬಗ್ಗೆ ಜವಾಬ್ದಾರ ಸಾಧಕರು ವಿಚಾರ ಮಾಡಬೇಕು !

‘ಸಾಧಕರೇ, ಕಾರ್ಯದ ಜೊತೆಗೆ ಸಾಧಕರ ಬಗ್ಗೆಯೂ ವಿಚಾರ ಮಾಡಿ ’ಪ್ರೀತಿ’ ಎಂಬ ಆಧ್ಯಾತ್ಮಿಕ ಗುಣವನ್ನು ಬೆಳೆಸಿದರೆ ಶೀಘ್ರ ಗುರುಕೃಪೆಯಾಗುತ್ತದೆ !’ ಎಂಬುದನ್ನು ಗಮನದಲ್ಲಿಡಿ !’

‘ಸತ್ಪಾತ್ರೆ ದಾನ’, ಅಂದರೆ ‘ಸತ್ ಕಾರ್ಯಕ್ಕಾಗಿ ದಾನ’ ಮಾಡಿ ಪುಣ್ಯದೊಂದಿಗೆ ಆಧ್ಯಾತ್ಮಿಕ ಲಾಭವನ್ನೂ ಪಡೆದುಕೊಳ್ಳಿರಿ !

ಸಂತರು, ಧರ್ಮಕಾರ್ಯವನ್ನು ಮಾಡುವ ವ್ಯಕ್ತಿಗಳು, ಸಮಾಜದಲ್ಲಿ ಧರ್ಮದ ಪ್ರಸಾರ ಮಾಡುವ ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ರಾಷ್ಟ್ರ-ಧರ್ಮದ ಜಾಗೃತಿಗಾಗಿ ಕಾರ್ಯವನ್ನು ಮಾಡುವ ಧರ್ಮಪ್ರೇಮಿಗಳಿಗೆ ಅರ್ಪಣೆಯನ್ನು ನೀಡುವುದು, ನಿಜವಾದ ‘ಸತ್ಪಾತ್ರೆ  ದಾನ’ವಾಗಿದೆ.

ಭಗವಂತನ ದರ್ಶನ ಪಡೆಯಲು ಸಾಧನಾರೂಪಿ ತಪಸ್ಸು ಮಾಡಿರಿ !- ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಬಾಹ್ಯ ದೀಪಗಳಂತೆಯೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮ್ಮ ಅಂತಃಕರಣದಲ್ಲಿ ಗುಣಗಳ ದೀಪಗಳನ್ನು ಬೆಳಗಿಸಿ ಆಂತರಿಕ ದೀಪೋತ್ಸವವನ್ನು ಆಚರಿಸಲು ಕಲಿಸಿದ್ದಾರೆ. ಗುರುದೇವರು ನಮ್ಮೆಲ್ಲರಿಗಾಗಿ ಸರ್ವೋಚ್ಚ ಮೋಕ್ಷಪ್ರಾಪ್ತಿಯ ಸಂಕಲ್ಪವನ್ನು ಮಾಡಿದ್ದಾರೆ.

ಸಾಧಕರೆ, ‘ಆಧ್ಯಾತ್ಮಿಕ ತೊಂದರೆಗಳಿಂದಲ್ಲ, ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂ ಇವುಗಳಿಂದ ತಪ್ಪುಗಳಾಗುತ್ತವೆ’, ಎಂಬುದನ್ನು ಗಮನದಲ್ಲಿಟ್ಟು ಅವುಗಳ ನಿರ್ಮೂಲನೆಗಾಗಿ ಪ್ರಯತ್ನಿಸಿ !

ಸಾಧಕರೆ, ಏನೇ ತಪ್ಪಾದರೂ ಅದರ ಹಿಂದಿನ ಮೂಲ ಸ್ವಭಾವದೋಷ ಅಥವಾ ಅಹಂನ ಅಂಶಗಳ ಬಗ್ಗೆ ಚಿಂತನೆ ಮಾಡಬೇಕು ಮತ್ತು ಅದರ ನಿರ್ಮೂಲನೆಗಾಗಿ ತಳಮಳದಿಂದ ಪ್ರಯತ್ನಿಸಬೇಕು

ಸಾಧಕರ ಸೇವೆಯಲ್ಲಿ ಸಹಾಯಕವಾಗಿರುವ ಸಂಚಾರವಾಣಿ, ಗಣಕಯಂತ್ರ, ‘ಇಯರಫೋನ್’ ಇತ್ಯಾದಿ ಉಪಕರಣಗಳ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿದುದರಿಂದ ಸಾಧಕರ ಸೇವೆಯಲ್ಲಿ ಅಡಚಣೆಗಳು ಉದ್ಭವಿಸುವುದು

ಗಣಕಯಂತ್ರಕ್ಕೆ ಅಥವಾ ಸಂಚಾರವಾಣಿಗೆ ಹೆಚ್ಚು ಅಡಚಣೆ ಬರುತ್ತಿದ್ದರೆ ನಿಂಬೆಹಣ್ಣಿನಿಂದ ದೃಷ್ಟಿಯನ್ನು ತೆಗೆಯಬೇಕು ಮತ್ತು ಅದನ್ನು ವಿಸರ್ಜಿಸಬೇಕು.

ಸಾಧಕರೇ, ಆಧ್ಯಾತ್ಮಿಕ ತೊಂದರೆಯ ತೀವ್ರತೆಯು ಸತತ ಬದಲಾಗುತ್ತಿರುವುದರಿಂದ ಆಗಾಗ ತೊಂದರೆಯ ಲಕ್ಷಣಗಳ ಅಧ್ಯಯನ ಮಾಡಿ ‘ಎಷ್ಟು ಗಂಟೆ ಉಪಾಯ ಮಾಡಬೇಕು ?’, ಎಂಬುದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿಕೊಳ್ಳಿರಿ !

ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾದಾಗ ಸಾಧಕರು ಸಮಯಕ್ಕೆ ಸರಿಯಾಗಿ ಅದರ ಕಡೆಗೆ ಗಾಂಭೀರ್ಯದಿಂದ ಗಮನ ಕೊಡುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ತಮಗಾಗುವ ತೊಂದರೆಗಳ ಲಕ್ಷಣಗಳ, ಉದಾ. ಏನೂ ಹೊಳೆಯದಿರುವುದು, ತಲೆ ಭಾರವಾಗುವುದು, ಅನಾವಶ್ಯಕ ವಿಚಾರಗಳು ಬರುವುದು ಇತ್ಯಾದಿ.