ಹೀಗೆ ನೆರವೇರಿತು ದಿವ್ಯ ‘ಬ್ರಹ್ಮೋತ್ಸವ !
ಶಂಖನಾದ ಮತ್ತು ‘ಶಾಂತಾಕಾರಂ ಭುಜಗಶಯನಂ… ಶ್ಲೋಕದಿಂದ ಪ್ರಾರಂಭ ! ೨೦೨೧ ರಲ್ಲಿ ಸಪ್ತರ್ಷಿಗಳ ಆಜ್ಞೆಯಿಂದ ನೆರವೇರಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ಧ್ವನಿಚಿತ್ರಮುದ್ರಿಕೆಯ ಪ್ರಸಾರ ! ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜೀವನದ ಮೇಲೆ ಆಧರಿಸಿದ ಕಿರುಚಲನಚಿತ್ರ ಭಾವಮೆರವಣಿಗೆಯೊಂದಿಗೆ ಮಂಗಲಮಯ ರಥೋತ್ಸವ, ಅಂದರೆ ಗುರುದೇವರ ‘ಬ್ರಹ್ಮೋತ್ಸವ ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿ ಇವರಿಂದ ಐದು ರೀತಿಯ ಹೂವುಗಳಿಂದ ಗುರುಚರಣಗಳಿಗೆ ಪಂಚಪುಷ್ಪಾರ್ಚನೆ ಡ್ರೋನ್‌ದ ಸಹಾಯದಿಂದ ದಿವ್ಯ ರಥದ ಮೇಲೆ ಪುಷ್ಪವೃಷ್ಟಿ ಗುರುಕಾರ್ಯದ ಜವಾಬ್ದಾರಿಯನ್ನು ಹೊತ್ತಿರುವ ಸದ್ಗುರುಗಳು, ಸಂತರು ಮತ್ತು ಸಾಧಕರ ಪರಿಚಯ
ಅಪೂರ್ವ ಭಾವದ ಅದ್ವಿತೀಯ ಸಮಾರಂಭ !
ಬ್ರಹ್ಮೋತ್ಸವದ ಆರಂಭದಲ್ಲಿ ಮೈದಾನದ ಒಂದು ಬದಿಯಲ್ಲಿದ್ದ ಪರದೆಯನ್ನು ತೆರೆಯಲಾಯಿತು. ಉಪಸ್ಥಿತರ ಕೈಗಳು ತಾವಾಗಿ ಜೋಡಿಸಲ್ಪಟ್ಟವು ! ಕಾರ್ಯಸ್ಥಳಕ್ಕೆ ಸುವರ್ಣಮಯ ಬಣ್ಣದ ದಿವ್ಯ ರಥದಿಂದ ಶ್ರೀಗುರುಗಳ ಆಗಮನವಾಯಿತು. ಎಲ್ಲರಿಗೂ ಶ್ರೀವಿಷ್ಣುವಿನ ರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಜೊತೆಗೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ದರ್ಶನವಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಪ್ರತಿಯೊಬ್ಬ ಸಾಧಕನ ಕಡೆಗೆ ನೋಡಿ ಕೈಜೋಡಿಸಿ ನಮಸ್ಕಾರ ಮಾಡುತ್ತಿದ್ದರು. ಸಾಧಕರೂ ಅವರನ್ನು ನೋಡಿ ಮನಃಪೂರ್ವಕ ಭಾವಪೂರ್ಣ ನಮಸ್ಕಾರ ಮಾಡುತ್ತಿದ್ದರು. ಈ ಸಮಯದಲ್ಲಿ ಸಾಧಕರನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕಣ್ಣುಗಳಲ್ಲಿ ಬಂದಿರುವ ಭಾವಾಶ್ರುಗಳನ್ನು ನೋಡಿ ಸಾಧಕರೂ ಭಾವವಶರಾದರು.
ದಿವ್ಯ ರಥೋತ್ಸವದಿಂದ ಭೂಲೋಕವೇ ಭೂವೈಕುಂಠ !
ದಿವ್ಯ ರಥ ಯಾವಾಗ ಮೈದಾನದಲ್ಲಿ ಸಂಚರಿಸುತ್ತಿತ್ತೋ, ಆಗ ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭೂದೇವಿಯ ಅವತಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಜೊತೆಗೆ ಸಂಪೂರ್ಣ ಬ್ರಹ್ಮಾಂಡದಲ್ಲಿ ವಿಹರಿಸಿ ಪ್ರತಿಯೊಂದು ಲೋಕದಲ್ಲಿನ ಜೀವಗಳನ್ನು ಪ್ರೀತಿಮಯ ದೃಷ್ಟಿಯಿಂದ ಅವಲೋಕಿಸುತ್ತಿದ್ದಾರೆ, ಎಂದು ಅನಿಸಿತು. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ, ಆಧ್ಯಾತ್ಮಿಕ ಮಟ್ಟ ಶೇ. ೬೪)
ಕೃತಜ್ಞತೆ ! ಕೃತಜ್ಞತೆ !! ಕೃತಜ್ಞತೆ !!
ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನೆರವೇರಿದ ದಿವ್ಯ ಮತ್ತು ಭವ್ಯ ‘ಬ್ರಹ್ಮೋತ್ಸವನ್ನು ಇದೇ ಕಣ್ಣುಗಳಿಂದ ನೋಡುವ ಮಹಾಭಾಗ್ಯ ಸಾಧಕರಿಗೆ ಲಭಿಸಿದಕ್ಕಾಗಿ ಭಗವಂತಾ ನಿನ್ನ ಚರಣಗಳಲ್ಲಿ ಅನನ್ಯ ಭಾವದಿಂದ ಕೃತಜ್ಞತೆ ! ಕೃತಜ್ಞತೆ !! ಕೃತಜ್ಞತೆ !!!