ಮುಂಬಯಿ – ಮಾಯೆಯ ಭವಸಾಗರದಿಂದ ಶಿಷ್ಯನನ್ನು ಮತ್ತು ಭಕ್ತನನ್ನು ಸುಲಭವಾಗಿ ದಾಟಿಸುವವರು, ಅವರಿಂದ ಅವಶ್ಯಕವಾದ ಸಾಧನೆಯನ್ನು ಮಾಡಿಸಿಕೊಳ್ಳುವವರು ಮತ್ತು ಕಠಿಣ ಸಮಯದಲ್ಲಿ ಅವರಿಗೆ ನಿರಪೇಕ್ಷ ಪ್ರೀತಿಯಿಂದ ಆಧಾರ ನೀಡಿ ಸಂಕಟದಿಂದ ಪಾರು ಮಾಡುವವರು ಗುರುಗಳೇ ಆಗಿರುತ್ತಾರೆ. ಅಂತಹ ಪರಮಪೂಜನಿಯ ಗುರುಗಳ ಕುರಿತು ಕೃತಜ್ಞತೆ ವ್ಯಕ್ತಪಡಿಸುವ ದಿನ ಅಂದರೆ ಗುರುಪೂರ್ಣಿಮೆ. ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೭೨ ಸ್ಥಳಗಳಲ್ಲಿ ‘ಗುರುಪೂರ್ಣಿಮಾ’ ಮಹೋತ್ಸವವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಮಹೋತ್ಸವವನ್ನು ಶ್ರೀ ವ್ಯಾಸಪೂಜೆ ಮತ್ತು ಸನಾತನ ಸಂಸ್ಥೆಯ ಶ್ರದ್ದಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆಯಿಂದ ಮಾಡಲಾಯಿತು. ಗುರುಪೂರ್ಣಿಮೆ ಪ್ರಯುಕ್ತ ಅನೇಕ ಸಾಧಕರು ಭಾವಾಶ್ರುಗಳ ಸಹಿತ ಗುರುಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸಿದರು.
ಕೆಲವೆಡೆಗಳಲ್ಲಿ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಮಾಡಲಾಯಿತು. ಈ ಸಮಯದಲ್ಲಿ ಮಾನ್ಯ ವಕ್ತಾರರಿಂದ ‘ಧರ್ಮಾಚರಣೆ ಮಾಡಿದರೆ, ಸಾಧನೆ ಮಾಡಿದರೆ ಮಾತ್ರ ನಿಜವಾದ ಅರ್ಥದಲ್ಲಿ ಧರ್ಮದ ಮತ್ತು ನಮ್ಮ ರಕ್ಷಣೆಯೂ ಆಗುತ್ತದೆ. ಸಾಧನೆಯಿಂದಲೇ ಅಂತರಂಗದಲ್ಲಿನ ದಿವ್ಯ ಊರ್ಚೆ ಜಾಗೃತವಾಗುತ್ತದೆ. ಮನೋಬಲ ಹೆಚ್ಚುತ್ತದೆ. ಆತ್ಮಶಕ್ತಿ ಜಾಗೃತವಾಗುತ್ತದೆ. ಈ ದಿವ್ಯಶಕ್ತಿಯ ಆಧಾರದಿಂದ ಹಿಂದೂ ಧರ್ಮದ, ಈ ದೇವಭೂಮಿ ಭಾರತದ ರಕ್ಷಣೆ ಸುಲಭವಾಗಿ ಆಗುತ್ತದೆ. ಆದ್ದರಿಂದ ದೇವಭೂಮಿ ಭಾರತದ ರಕ್ಷಣೆ ಮತ್ತು ಧರ್ಮಾಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದಕ್ಕಾಗಿ ಗುರುಪೂರ್ಣಿಮೆಯ ಪ್ರಯುಕ್ತ ಹಿಂದುಗಳು ಸಾಧನೆ ಮಾಡಲು ನಿರ್ಧರಿಸಬೇಕೆಂದು’ ಉಪಸ್ಥಿತರಿಗೆ ಕರೆ ನೀಡಿದರು.
ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವಸನಾತನ ಸಂಸ್ಥೆಯ ವತಿಯಿಂದ ಕನ್ನಡ, ಮರಾಠಿ, ಆಂಗ್ಲ, ತೆಲುಗು, ತಮಿಳು, ಮತ್ತು ಮಲ್ಯಾಳಂ ಈ ಭಾಷೆಗಳಲ್ಲಿ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವವು ಸಂಪನ್ನವಾಯಿತು. |
ಮಹರ್ಷಿಗಳ ಆಜ್ಞೆಯಂತೆ ಗುರುಪೂರ್ಣಿಮೆಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಆರತಿ ಬೆಳಗಿದರು
ರಾಮನಾಥಿ (ಗೋವಾ) – ಮಹರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಇನ್ನೊರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುಪೂರ್ಣಿಮೆಯ ದಿನದಂದು ಅಂದರೆ ೩ ಜುಲೈ ೨೦೨೩ ರಂದು ಪೂಜೆ ಮತ್ತು ಆರತಿ ಮಾಡಿದರು. ಮಹರ್ಷಿಗಳು ‘ಸಚ್ಚಿದಾನಂದ ಪರಬ್ರಹ್ಮ ಡಾ.ಅಠವಲೆ ಇವರಿಗೆ ಮಲ್ಲಿಗೆ ಹಾರ ಹಾಕುವುದು, ಆರತಿ ಬೆಳಗುವುದು ಮತ್ತು ಜೇನುತುಪ್ಪ, ಖರ್ಜೂರ ಮತ್ತು ಒಣದ್ರಾಕ್ಷಿಯ ಮಿಶ್ರಣದ ನೈವೇದ್ಯ ಅರ್ಪಿಸಬೇಕು”, ಈ ರೀತಿ ಪೂಜೆ ಮಾಡಬೇಕೆಂದು ಹೇಳಿದ್ದರು. ಅದೇ ರೀತಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ.ಅಠವಲೆ ಇವರ ಭಾವಪೂರ್ಣ ಪೂಜೆ ಮತ್ತು ಆರತಿ ಮಾಡಿದರು. ಆ ಸಮಯದಲ್ಲಿ ಮಹರ್ಷಿಗಳು ಐದು ಜನರಿಗೆ ಉಪಸ್ಥಿತ ಇರಲು ಹೇಳಿದ್ದರು. ಅದರ ಪ್ರಕಾರ ಸದ್ಗುರು ಡಾ. ಮುಕುಲ ಗಾಡಗೀಳ, ಪೂ. ಪೃಥ್ವಿರಾಜ ಹಜಾರೆ ಮತ್ತು ಪೂ. ಸಂದೀಪ ಆಳಶಿ ಈ ಸಂತರು ಹಾಗೂ ಶ್ರೀ. ಭಾನು ಪುರಾಣಿಕ ಮತ್ತು ಶ್ರೀ. ಸಿದ್ದೇಶ ಕರಂದಿಕರ ಇವರು ಉಪಸ್ಥಿತರಿದ್ದರು.
ಈ ವಿಧಿಯ ಪೌರೋಹಿತ್ಯವನ್ನು ಸನಾತನದ ಪುರೋಹಿತ ಪಾಠಶಾಲೆಯ ಶ್ರೀ. ಅಮರ ಜೋಶಿ ಮತ್ತು ಶ್ರೀ. ಈಶಾನ ಜೋಶಿ ಇವರು ನಡೆಸಿಕೊಟ್ಟರು.
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಿರುಪತಿಯಲ್ಲಿ ಶ್ರೀ ಬಾಲಾಜಿಯ ದರ್ಶನ ಪಡೆದು ವ್ಯಕ್ತಪಡಿಸಿರುವ ಕೃತಜ್ಞತೆ !
ತಿರುಪತಿ (ಆಂಧ್ರಪ್ರದೇಶ) – ಇಲ್ಲಿಯ ತಿರುಪತಿ ದೇವಸ್ಥಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ೩ ಜುಲೈ ೨೦೨೩ ರಂದು ಅಂದರೆ ಗುರುಪೂರ್ಣಿಮೆಯ ದಿನದಂದು ಶ್ರೀ ಬಾಲಾಜಿಯ ದರ್ಶನ ಪಡೆದು ಕೃತಜ್ಞತಾಪುಷ್ಪ ಅರ್ಪಿಸಿದರು. ೧೧ ಮೇ ೨೦೨೩ ರಂದು ಸಪ್ತರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ‘ಬ್ರಹ್ಮೋತ್ಸವ’ ನಡೆಯಿತು. ಅನಂತರ ನಡೆದ ನಾಡಿಪಟ್ಟಿ ವಾಚನದಲ್ಲಿ ಸಪ್ತರ್ಷಿಗಳು ಮುಂದಿನಂತೆ ಹೇಳಿದರು, “ಗುರುಪೂರ್ಣಿಮೆಯ ದಿನದಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಿರುಪತಿಗೆ ಹೋಗಿ ಬ್ರಹ್ಮೋತ್ಸವ ನಿರ್ವಿಘ್ನವಾಗಿ ನಡೆದಿರುವುದರಿಂದ ಕೃತಜ್ಞತೆ ವ್ಯಕ್ತಪಡಿಸಬೇಕು”, ಎಂದಿದ್ದರು. ಅದಕ್ಕನುಸಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಗುರುಪೂರ್ಣಿಮೆಯ ದಿನದಂದು ಮಧ್ಯಾಹ್ನ ೪ ಗಂಟೆಗೆ ತಿರುಪತಿಗೆ ಹೋಗಿ ಶ್ರೀ ಬಾಲಾಜಿಯ ದರ್ಶನ ಪಡೆದು ಕೃತಜ್ಞತೆ ವ್ಯಕ್ತಪಡಿಸಿದರು.
ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ದೀರ್ಘಾಯುಷ್ಯಕ್ಕಾಗಿ, ಎಲ್ಲಾ ಸಾಧಕರ ಆರೋಗ್ಯಕ್ಕಾಗಿ ಮತ್ತು ಸಾಧಕರ ಸುತ್ತಲೂ ರಕ್ಷಣಾ ಕವಚ ನಿರ್ಮಾಣವಾಗುವುದಕ್ಕಾಗಿ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿನ ಸೂಕ್ಷ್ಮದಲ್ಲಿನ ತೊಂದರೆಗಳು ದೂರವಾಗುವುದಕ್ಕಾಗಿ ಶ್ರೀ ಬಾಲಾಜಿಯ ಚರಣಗಳಲ್ಲಿ ಪ್ರಾರ್ಥನೆ ಮಾಡಿದರು.
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥ ಗಳಲ್ಲಿ ಉಲ್ಲೇಖವಿದೆ. |