ರಾಮನಾಥಿ (ಗೋವಾ) – ೩ ಜುಲೈ ೨೦೨೩ ರಂದು ಅಂದರೆ ಗುರುಪೂರ್ಣಿಮೆಯ ದಿನದಂದು ಸನಾತನದ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಮರಾಠಿ ಹಾಗೂ ಹಿಂದಿ ಭಾಷೆಯ ‘ಇ-ಬುಕ್’ಅನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರ ಶುಭಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು. ಈ ಇ-ಬುಕ್‌ನಲ್ಲಿ ‘ಅಧ್ಯಾತ್ಮಶಾಸ್ತ್ರದ ಮೂಲಭೂತ ತತ್ತ್ವಗಳಿಗನುಸಾರ ಹಾಗೂ ಶೀಘ್ರ ಗುರುಕೃಪೆ ಸಂಪಾದಿಸುವಂತೆ ಸುಲಭವಾದ ಹಾಗೂ ಯೋಗ್ಯವಾದ ಸಾಧನೆ ಯಾವುದು ಮಾಡಬೇಕು ?’, ಇದರ ಪ್ರಾಯೋಗಿಕ ಮಾರ್ಗದರ್ಶನ ಮಾಡಲಾಗಿದೆ. ಈ ಇ-ಬುಕ್ ‘ಅಮೆಜಾನ್ ಕಿಂಡಲ್’ನಲ್ಲಿ ಲಭ್ಯವಿದೆ.
‘ಅಮೆಜಾನ್ ಕಿಂಡಲ್’ನ ಮರಾಠಿ ಗ್ರಂಥದ ಲಿಂಕ್ : amzn.eu/d/j5ae10B
‘ಸನಾತನ ಶಾಪ್’ನ ಮರಾಠಿ ಗ್ರಂಥದ ಲಿಂಕ್ : santanshop.com/shop/ebooks/marathi