ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವವನ್ನು ಆಚರಿಸುವ ವಿಷಯದಲ್ಲಿ ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಹೇಳಿದ ಅಂಶಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ 

‘೨೩.೨.೨೦೨೩ ಈ ದಿನ ನಾಡಿಪಟ್ಟಿವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದಾದ ನಾಡಿವಾಚನ ಕ್ರಮಾಂಕ ೨೨೨ ರಲ್ಲಿ ‘೨೦೨೩ ರಲ್ಲಿ ಗುರುದೇವರ ಜನ್ಮೋತ್ಸವವನ್ನು ಬ್ರಹ್ಮೋತ್ಸವವೆಂದು ಹೇಗೆ ಆಚರಿಸಬೇಕು ?, ಎಂಬುದರ ಬಗ್ಗೆ ಸಪ್ತರ್ಷಿಗಳು ಹೇಳಿದ ವೈಶಿಷ್ಟ್ಯ ಪೂರ್ಣ ಅಂಶಗಳನ್ನು ಮತ್ತು ಮಹತ್ವಪೂರ್ಣ ಅಂಶಗಳನ್ನು ಮುಂದೆ ಕೊಡಲಾಗಿದೆ.

ಪೂ. ಡಾ. ಓಂ ಉಲಗನಾಥನ್‌ರಿಂದ ನಾಡಿಪಟ್ಟಿವಾಚನ

೧. ೨೦೨೩ ರಲ್ಲಿ ಗುರುದೇವರ ಜನ್ಮೋತ್ಸವವನ್ನು ‘ಬ್ರಹ್ಮೋತ್ಸವವೆಂದು ಆಚರಿಸಬೇಕು !

ಅ. ಕಳೆದ ವರ್ಷ, ಅಂದರೆ ೨೦೨೨ ರಲ್ಲಿ ಆಚರಿಸಿದ ಜನ್ಮೋತ್ಸವದ ಸಮಯದಲ್ಲಿ ಗುರುದೇವರು ಹೊರಗಿನಿಂದ ಬಾಡಿಗೆಗೆ ತಂದ ಒಂದು ರಥದಲ್ಲಿ ವಿರಾಜಮಾನರಾಗಿದ್ದರು. ಈ ವರ್ಷ (೨೦೨೩ರಲ್ಲಿ) ನಡೆಯಲಿರುವ ಗುರುದೇವರ ಜನ್ಮೋತ್ಸವದ ಸಮಯದಲ್ಲಿ ಗುರುದೇವರು ಮರದ ಹಲಗೆಯ ರಥದಲ್ಲಿ ವಿರಾಜಮಾನ ರಾಗಲಿದ್ದಾರೆ. ಇದಕ್ಕಾಗಿ ಸಾಧಕರು ಶ್ರೀವಿಷ್ಣುತತ್ತ್ವವನ್ನು ಆಕರ್ಷಿಸುವ ಒಂದು ಸುಂದರವಾದ ಕಟ್ಟಿಗೆಯ ರಥವನ್ನು ತಯಾರಿಸಬೇಕು.

ಆ. ಭೂತಲದಲ್ಲಿ ಗುರುದೇವರ ಈ ರಥೋತ್ಸವವನ್ನು ನೋಡಲು ಆಕಾಶದಲ್ಲಿ ತ್ರಿಮೂರ್ತಿಗಳು, ತ್ರೀದೇವಿಯರು, ದೇವದೇವತೆಗಳು, ೮೮ ಸಾವಿರ ಋಷಿಗಳು, ಯಕ್ಷ, ಕಿನ್ನರ, ಗಂಧರ್ವ ಹೀಗೆ ಎಲ್ಲ ದೇವ-ಋಷಿಗಣರು ಉಪಸ್ಥಿತ ಇರಲಿದ್ದಾರೆ.

ಈ. ಈ ವರ್ಷದ ಗುರುದೇವರ ಜನ್ಮೋತ್ಸವವು ಕೇವಲ ‘ರಥೋತ್ಸವವಲ್ಲ, ಅದು ಸಾಕ್ಷಾತ್ ‘ಶ್ರೀವಿಷ್ಣುವಿನ ಬ್ರಹ್ಮೋತ್ಸವ ಆಗಿರಲಿದೆ. ಯಾವ ರೀತಿ ತಿರುಪತಿಯಲ್ಲಿ ಶ್ರೀವಿಷ್ಣುವಿನ ಬ್ರಹ್ಮೋತ್ಸವನ್ನು ಆಚರಿಸಲಾಗುತ್ತದೆಯೋ ಅದೇ ರೀತಿಯ ಉತ್ಸವವನ್ನು ಗುರುದೇವರ ಜನ್ಮೋತ್ಸವದಂದು ಆಯೋಜಿಸಬೇಕು.

. ಶ್ರೀವಿಷ್ಣುವಿನ ರಥದಲ್ಲಿ ಭೂದೇವಿ ಮತ್ತು ಶ್ರೀದೇವಿ ಇರುವಂತೆ ಗುರುದೇವರ ರಥದಲ್ಲಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಭೂದೇವಿಯ ಅವತಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಸಹ ಕುಳಿತುಕೊಳ್ಳಬೇಕು.

ಶ್ರೀ. ವಿನಾಯಕ ಶಾನಭಾಗ

೨. ಬ್ರಹ್ಮೋತ್ಸವದ ತಿಥಿ ಮತ್ತು ಸಮಯ ಇವುಗಳ ವೈಶಿಷ್ಟ್ಯ

ಎಲ್ಲ ದೇವದೇವತೆಗಳು, ಸಪ್ತರ್ಷಿಗಳು ಮತ್ತು ಋಷಿಗಣರ ಸಭೆಯಲ್ಲಿ ಶ್ರೀವಿಷ್ಣುವಿನ ನಾಲ್ಕನೇ ಅವತಾರ ಶ್ರೀನರಸಿಂಹ ಮತ್ತು ಶ್ರೀ ಮಹಾಲಕ್ಷ್ಮೀ ಇವರ ನಡುವೆ ಆದ ಸಂವಾದಕ್ಕನುಸಾರ ನಾವು ೧೧ ಮೇ ೨೦೨೩ ರಂದು ಗುರುದೇವರ ಜನ್ಮೋತ್ಸವವನ್ನು ‘ಬ್ರಹ್ಮೋತ್ಸವವೆಂದು ಆಚರಿಸಲು ಹೇಳಿದ್ದೇವೆ. ತ್ರೇತಾಯುಗದಲ್ಲಿ ಶ್ರೀವಿಷ್ಣುವು ನವಮಿಯಂದು ಶ್ರೀರಾಮಾವತಾರವನ್ನು ತಾಳಿದ್ದನು. ದ್ವಾಪರ ಯುಗದಲ್ಲಿ ಶ್ರೀವಿಷ್ಣುವು ಅಷ್ಟಮಿಯಂದು ಶ್ರೀಕೃಷ್ಣಾವತಾರವನ್ನು ತಾಳಿದ್ದನು ಮತ್ತು ಈಗ ಈ ಕಲಿಯುಗದಲ್ಲಿ ಶ್ರೀವಿಷ್ಣುವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ರೂಪದಲ್ಲಿ ಸಪ್ತಮಿ ತಿಥಿಯಂದು ಜನ್ಮವನ್ನು ಪಡೆದಿದ್ದಾನೆ. (ಟಿಪ್ಪಣಿ) ‘ಉತ್ತರಾಷಾಢಾವು ಗುರುದೇವರ ಜನ್ಮನಕ್ಷತ್ರವಾಗಿದೆ. ‘ಶ್ರವಣ ನಕ್ಷತ್ರದಲ್ಲಿ ತಿರುಪತಿ ಬಾಲಾಜಿಯ ಜನ್ಮವು  ಆಗಿತ್ತು. ಇಂದು ನಾವು ಯಾವ ಬ್ರಹ್ಮೋತ್ಸವ ವನ್ನು ಆಚರಿಸುವವರಿದ್ದೆವೆಯೋ, ಆ ದಿನದ ವೈಶಿಷ್ಟ್ಯವೆಂದರೆ ಆ ದಿನ ಷಷ್ಠಿ ಮತ್ತು ಸಪ್ತಮಿ ಈ ಎರಡೂ ತಿಥಿಗಳು ಒಟ್ಟಿಗೆ ಬಂದಿವೆ, ಹಾಗೆಯೇ ಗುರುದೇವರ ಉತ್ತರಾಷಾಢಾ ಈ ಜನ್ಮ ನಕ್ಷತ್ರದ ಸಮಯವು ಮುಗಿದು ತಿರುಪತಿ ಬಾಲಾಜಿಯ ‘ಶ್ರವಣ ನಕ್ಷತ್ರ ಆರಂಭವಾಗಲಿದೆ. ಶ್ರೀನರಸಿಂಹ ಮತ್ತು ಶ್ರೀ ಮಹಾಲಕ್ಷ್ಮಿ ಇವರ ಆಜ್ಞೆಯಂತೆ, ‘ವೈಶಾಖ ಕೃಷ್ಣ ಸಪ್ತಮಿ ತಿಥಿಯು ಇರುವ ಸಮಯದಲ್ಲಿ ಮತ್ತು ಆಕಾಶದಲ್ಲಿ ಶ್ರವಣ ನಕ್ಷತ್ರದ ಕಾಲ ಆರಂಭವಾಗುವ ಸಮಯದಲ್ಲಿ ಶ್ರೀವಿಷ್ಣುವಿನ ಅವತಾರವಾಗಿರುವ ಗುರುದೇವರ ‘ಬ್ರಹ್ಮೋತ್ಸವವನ್ನು ಆಚರಿಸಬೇಕು.

ಟಿಪ್ಪಣಿ : ‘ಮೊದಲು ಅನೇಕ ವರ್ಷ ‘ನನ್ನ ಜನ್ಮದಿನವು ಷಷ್ಠಿಯಂದು ಇದೆ, ಎಂದು ನನಗೆ ಅನಿಸುತ್ತಿತ್ತು. ಮಹರ್ಷಿಗಳು ಹೇಳಿದಾಗಿನಿಂದ ‘ಸಪ್ತಮಿ ನನ್ನ ಜನ್ಮದಿನವಾಗಿದೆ, ಎಂದು ನನಗೆ ತಿಳಿಯಿತು.

– ಡಾ. ಜಯಂತ ಆಠವಲೆ

೩. ಬ್ರಹ್ಮೋತ್ಸವದಲ್ಲಿ ಮೂರು ಗುರುಗಳು ಯಾವ ಬಣ್ಣದ ವಸ್ತ್ರಗಳನ್ನು ಧರಿಸಬೇಕು ?

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಯವರು ಉದಯಿಸುವ ಸೂರ್ಯನಂತೆ ಕೇಸರಿ ಬಣ್ಣದ ರೇಷ್ಮೆ ವಸ್ತ್ರಗಳನ್ನು ಧರಿಸಬೇಕು. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಭೂದೇವಿಗೆ ಸಂಬಂಧಿತ ಹಸಿರು ರೇಷ್ಮೆ ಸೀರೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಶ್ರೀದೇವಿಗೆ ಸಂಬಂಧಿತ ಹಳದಿ ರೇಷ್ಮೆ ಸೀರೆಯನ್ನು ಉಡಬೇಕು.

೪. ರೇಷ್ಮೆಯ ವಸ್ತ್ರಗಳನ್ನು ಧರಿಸುವುದರ ಹಿಂದಿನ ಶಾಸ್ತ್ರ

ರೇಷ್ಮೆ ದಾರವು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಶುಕ್ರಗ್ರಹವು ಯಶಸ್ಸು, ಸಮೃದ್ಧಿ ಮತ್ತು ಕೀರ್ತಿ ಇವುಗಳಿಗೆ ಸಂಬಂಧಿಸಿದೆ, ಹಾಗೆಯೇ ರೇಷ್ಮೆಯ ದಾರದಲ್ಲಿ ‘ಲಕ್ಷ್ಮೀಕಟಾಕ್ಷವಿದೆ, ಅಂದರೆ ರೇಷ್ಮೆ ವಸ್ತ್ರಗಳತ್ತ ನೋಡುವವರಿಗೆ ಶ್ರೀ ಮಹಾಲಕ್ಷ್ಮೀಯ ಆಶೀರ್ವಾದ ಲಭಿಸುತ್ತದೆ, ಹಾಗಾಗಿ ದೇವರ ಮೂರ್ತಿಗೆ ರೇಷ್ಮೆ ವಸ್ತ್ರ ತೊಡಿಸುವ ಪದ್ಧತಿ ಇದೆ.

೫. ಮೈದಾನದ ರಕ್ಷಣೆಗಾಗಿ ಹನುಮಂತ, ಗರುಡ ಮತ್ತು ಆದಿಶೇಷ ಇವರ ಸೂಕ್ಷ  ಉಪಸ್ಥಿತಿ

ಶ್ರೀರಾಮಾವತಾರದಲ್ಲಿ ಶಿವನು ಹನುಮಂತನ ರೂಪದಲ್ಲಿ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಸಹಾಯಕ್ಕೆ ಬಂದಿದ್ದನು ಮತ್ತು ಶ್ರೀಕೃಷ್ಣಾವತಾರದಲ್ಲಿ ಮಹಾಭಾರತದ ಯುದ್ಧದ ಸಮಯ ದಲ್ಲಿ ಅರ್ಜುನನ ರಥದ ಮೇಲೆ ಚಿರಂಜೀವಿ ಹನುಮಂತನು ಕುಳಿತಿದ್ದನು. ಅದೇ ರೀತಿ ಶ್ರೀವಿಷ್ಣುವಿನ ಅವತಾರವಾಗಿರುವ ಗುರುದೇವರ ರಥದಲ್ಲಿ ಧ್ವಜದ ಹತ್ತಿರ ಹನುಮಂತನು ಸೂಕ್ಷ್ಮದಲ್ಲಿ ಉಪಸ್ಥಿತ ಇರಲಿದ್ದಾನೆ. ಗೋವಾದ ಯಾವ ಭೂಪ್ರದೇಶದಲ್ಲಿ ಶ್ರೀವಿಷ್ಣುವಿನ ರಥವು ಚಲಿಸಲಿದೆಯೋ, ಆ ಮೈದಾನವನ್ನು ಅನೇಕ ದಿನಗಳಿಂದ ಗರುಡ ಮತ್ತು ಆದಿಶೇಷರು ರಕ್ಷಣೆ ಮಾಡುತ್ತಿದ್ದಾರೆ. ಈ ಮೈದಾನದಲ್ಲಿ ಎಲ್ಲರಿಗಿಂತ ಮೊದಲೇ ಗರುಡ ಮತ್ತು ಆದಿಶೇಷರು ಸೂಕ್ಷ್ಮದಿಂದ ಉಪಸ್ಥಿತರಿದ್ದಾರೆ. ಕೆಟ್ಟ ಶಕ್ತಿಗಳ ನೆರಳು ಮೈದಾನದ ಮೇಲೆ ಬೀಳಬಾರದೆಂದು ಗರುಡನು ಸೂಕ್ಷ್ಮದಿಂದ ಸಂಪೂರ್ಣ ಮೈದಾನದ ಮೇಲೆ ತನ್ನ ರೆಕ್ಕೆಗಳನ್ನು ಹರಡಿದ್ದಾನೆ.

೬. ಎಲ್ಲ ಸಾಧಕರು ಭಾವಪೂರ್ಣವಾಗಿ ಕಣ್ತುಂಬ ಭೂದೇವಿ ಮತ್ತು ಶ್ರೀದೇವಿ ಇವರೊಂದಿಗೆ ಶ್ರೀವಿಷ್ಣುವಿನ ದರ್ಶನ ತೆಗೆದು ಕೊಳ್ಳುವುದರಿಂದ ಅವರಿಗೆ ಈಶ್ವರನ ಆಶೀರ್ವಾದ ಸಿಗಲಿದೆ. !

ಶ್ರೀವಿಷ್ಣುವಿನ ರಥವು ಶುಭಯೋಗವನ್ನು ನೀಡುವ ‘ಮೋಕ್ಷರಥವಾಗಿದೆ. ಇದು ವೈಕುಂಠದಿಂದ ಭಕ್ತರಿಗಾಗಿ ಮಾನವನ ರೂಪದಲ್ಲಿ ಬಂದ ಭಗವಂತನ ಸುವರ್ಣಯೋಗವನ್ನು ನೀಡುವ ರಥವಾಗಿದೆ. ರಥಾರೂಢ ಭೂದೇವಿ ಮತ್ತು ಶ್ರೀದೇವಿಯರೊಂದಿಗೆ ಶ್ರೀವಿಷ್ಣುವಿನ ದರ್ಶನ ಪಡೆದರೆ ಎಲ್ಲ ಭಕ್ತರ ತಾಪ, ದೈನ್ಯ, ಪೀಡೆ, ಭೂತ-ಪಿಶಾಚಿಗಳ ಬಾಧೆ, ದಾರಿದ್ರ್ಯ, ರೋಗ, ದುಃಖ ಮತ್ತು ಗ್ರಹಬಾಧೆಗಳು ದೂರವಾಗುತ್ತವೆ. ಅನೇಕ ವರ್ಷಗಳಿಂದ ಸಾಧಕರು ಸಹಿಸುತ್ತಿರುವ ಕೆಟ್ಟ ಶಕ್ತಿಗಳ ವಿವಿಧ ತೊಂದರೆಗಳನ್ನು ದೂರಗೊಳಿಸಲು ಮತ್ತು ಆಶೀರ್ವಾದ ನೀಡಲು ಗುರುದೇವರು ರಥದಲ್ಲಿ ವಿರಾಜಮಾನರಾಗಿ ಸಾಧಕರಿಗೆ ದರ್ಶನವನ್ನು ನೀಡಲಿದ್ದಾರೆ. ಎಲ್ಲ ಸಾಧಕರು ಭಾವಪೂರ್ಣವಾಗಿ ಕಣ್ತುಂಬ ಭೂದೇವಿ ಮತ್ತು ಶ್ರೀದೇವಿ ಇವರೊಂದಿಗೆ ಶ್ರೀವಿಷ್ಣುವಿನ ದರ್ಶನ ಪಡೆಯುವುದರಿಂದ ಅವರಿಗೆ ಈಶ್ವರನ ಆಶೀರ್ವಾದ ಸಿಗಲಿದೆ.

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭), ಚೆನೈ (೨೩.೨.೨೦೨೩)

‘ತಿರುಪತಿ ಬಾಲಾಜಿಯ ‘ಬ್ರಹ್ಮೋತ್ಸವ ಶ್ರೀವಿಷ್ಣುವು ಉತ್ಸವಪ್ರಿಯನಾಗಿದ್ದಾನೆ; ಹಾಗಾಗಿ ತಿರುಪತಿಯಲ್ಲಿ ಕಳೆದ ೧ ಸಾವಿರ ವರ್ಷಗಳಿಂದ ಪ್ರತಿ ವರ್ಷ ಭೂದೇವಿ ಮತ್ತು ಶ್ರೀದೇವಿ ಸಹಿತ ಶ್ರೀ ವೆಂಕಟೇಶ್ವರನ ಉತ್ಸವವನ್ನು ಆಚರಿಸಲಾಗುತ್ತದೆ. ಈ ೯ ದಿನಗಳ ಉತ್ಸವಕ್ಕೆ ‘ಬ್ರಹ್ಮೋತ್ಸವ ಎನ್ನುತ್ತಾರೆ. ಈ ಉತ್ಸವದಲ್ಲಿ ಶ್ರೀದೇವಿ ಮತ್ತು ಭೂದೇವಿ ಸಹಿತ ಶ್ರೀವಿಷ್ಣುವು ‘ಸುವರ್ಣರಥದಲ್ಲಿ ಆರೂಢನಾಗುತ್ತಾನೆ. ‘ಭಕ್ತರಿಗೆ ದರ್ಶನ ಸಿಗಬೇಕೆಂದು ಬ್ರಹ್ಮೋತ್ಸವ ಆಚರಿಸುವ ಪದ್ಧತಿ ಬಂದಿತು. ಬ್ರಹ್ಮೋತ್ಸವ ಪದದಲ್ಲಿ ‘ಬ್ರಹ್ಮ ಎಂದರೆ ‘ಸರ್ವೋಚ್ಚ, ಹಾಗಾಗಿ ಬ್ರಹ್ಮೋತ್ಸವವೆಂದರೆ ಸರ್ವೋಚ್ಚ ಉತ್ಸವ. ಶ್ರೀವಿಷ್ಣುವಿಗಾಗಿ ಆಚರಿಸಲಾಗುವ ಎಲ್ಲ ಉತ್ಸವಗಳಲ್ಲಿ ‘ಬ್ರಹ್ಮೋತ್ಸವವು ಸರ್ವೋಚ್ಚವಾಗಿದೆ.

‘ಎಲ್ಲ ಸಾಧಕರಿಗೆ ಗುರುದೇವರ ಬ್ರಹ್ಮೋತ್ಸವವು ನಿರ್ವಿಘ್ನವಾಗಿ ನೋಡಲು ಸಾಧ್ಯವಾಗಬೇಕೆಂದು ಮಹರ್ಷಿ ಶುಂಗಿ ಇವರು ಮಳೆ ಮತ್ತು ಚಂಡಮಾರುತವನ್ನು ತಡೆಹಿಡಿದಿದ್ದರು ! – ಸಪ್ತರ್ಷಿ (ಪೂ ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ)

‘ಶುಂಗಿಋಷಿಗಳು ಮಾಡಿದ ‘ಪುತ್ರಕಾಮೆಷ್ಟೀ ಯಾಗದಿಂದ ಭಗವಾನ ಶ್ರೀವಿಷ್ಣುವು ಶ್ರೀರಾಮರ ರೂಪದಲ್ಲಿ ದಶರಥ ಮಹಾರಾಜರ ಮನೆಯಲ್ಲಿ ಜನಿಸಿದರು. ಶುಂಗಿಋಷಿಗಳ ಆಗಮನದಿಂದ ರೋಮಪಾದ ರಾಜನ ರಾಜ್ಯದಲ್ಲಿ ಮಳೆ ಬಂದಿತು ಮತ್ತು ಬರಗಾಲ ದೂರವಾಯಿತು. ಶುಂಗಿಋಷಿಗಳ ವೈಶಿಷ್ಟ್ಯ ಹೇಗಿದೆಯೆಂದರೆ, ‘ಅವರ ಆಗಮನದಿಂದ ಮಳೆ ಬರುವುದು ಅಥವಾ ಬಾರದಿರುವುದು, ಹೀಗಾಗಬಹುದು. ‘ಎಲ್ಲ ಸಾಧಕರಿಗೆ ಗುರುದೇವರ ಬ್ರಹ್ಮೋತ್ಸವವನ್ನು ನಿರ್ವಿಘ್ನವಾಗಿ ನೋಡಲು ಸಾಧ್ಯವಾಗಬೇಕೆಂದು, ಹಾಗೆಯೇ ಗುರುದೇವರು ಮತ್ತು ಅವರ ರಥದ ದರ್ಶನ ಆಗಬೇಕೆಂದು, ಶುಂಗಿ ಋಷಿಗಳು ಬ್ರಹ್ಮೋತ್ಸವದಂದು ಮೈದಾನದಲ್ಲಿ ನಿಂತಿದ್ದರು. ಅವರು ಮಳೆಯನ್ನು ಮೈದಾನದಿಂದ ೨೧ ಕಿ.ಮೀ. ದೂರ ಮತ್ತು ಚಂಡಮಾರುತವನ್ನು ೧ ಸಾವಿರದ ೨೦೦ ಕಿ.ಮೀ. ದೂರಕ್ಕೆ ತಡೆಹಿಡಿದಿದ್ದರು. (‘ಮೋಖಾ ಚಂಡ ಮಾರುತವು ೨ ದಿನ ಬಂಗಾಲದ ಕಣಿವೆಯ ಅಂಡಮಾನ ದ್ವೀಪಸಮೂಹದ ಬಳಿ ನಿಂತಿತು. – ಸಂಕಲನಕಾರರು) ‘ಎಲ್ಲರಿಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ದರ್ಶನವಾಗಬೇಕು ಮತ್ತು ಕಾರ್ಯಕ್ರಮದ ಸ್ಥಳದಲ್ಲಿ ಮಳೆಯಿಂದ ಯಾವುದೇ ಅಡಚಣೆಗಳು ಬರಬಾರದೆಂದು ಮೈದಾನದಲ್ಲಿ ಸೂಕ್ಷ್ಮದಿಂದ ನಿಂತುಕೊಂಡು ಮಳೆಯನ್ನು ನಿಲ್ಲಿಸಿದ ಶುಂಗಿ ಋಷಿಗಳು ಮತ್ತು ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ನಾವು ಸಪ್ತರ್ಷಿಗಳು ಕೃತಜ್ಞರಾಗಿದ್ದೇವೆ.

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೧೨.೫.೨೦೨೩, ಬೆಳಗ್ಗೆ ೧೧.೩೦)