ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಹುಟ್ಟುಹಬ್ಬದ ನಿಮಿತ್ತ…
೧. ಸದ್ಯ ಪೃಥ್ವಿಯಲ್ಲಿ ಮೂರು ಮಂದಿ ಅವತಾರಗಳಿರುವುದರಿಂದ ದೇವಾನುದೇವಗಳ ದೃಷ್ಟಿ ಪೃಥ್ವಿಯತ್ತ ಇದೆ
‘ಸದ್ಯ ಪೃಥ್ವಿಯಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಶ್ರೀಜಯಂತ’, ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ’ ಮತ್ತು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ’ ಈ ಮೂರು ಮಂದಿ ಅವತಾರಗಳಿರುವುದರಿಂದ ದೇವತೆಗಳು, ಬ್ರಹ್ಮಾಂಡದಲ್ಲಿನ ಎಲ್ಲ ನಕ್ಷತ್ರಗಳು, ಪಂಚಮಹಾಭೂತಗಳು, ಪಂಚಾಗ್ನಿಗಳು, ಸೂರ್ಯ, ಚಂದ್ರ ಮತ್ತು ೮೮ ಸಾವಿರ ಋಷಿಮುನಿಗಳು, ಈ ಎಲ್ಲರ ದೃಷ್ಟಿ ಪೃಥ್ವಿಯ ಕಡೆಗಿದೆ.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೩, ೧೩.೫.೨೦೨೦)
೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರಲ್ಲಿ ‘ಮಹಾಸರಸ್ವತಿ’, ‘ಮಹಾಕಾಳಿ’ ಮತ್ತು ‘ಮಹಾಲಕ್ಷ್ಮೀ’ ಈ ಮೂರೂ ತತ್ತ್ವಗಳಿವೆ !
‘ಶ್ರೀವಿಷ್ಣುವಿನ ಲೀಲೆ ಆಗಾಧವಾಗಿದೆ. ‘ಶ್ರೀವಿಷ್ಣುವು ಸಮುದ್ರದಲ್ಲಿ ಉಪ್ಪನ್ನು ಹೇಗೆ ಉತ್ಪನ್ನ ಮಾಡಿದನು ? ಕಣ್ಣುಗಳಲ್ಲಿ ಕಣ್ಣೀರು ಬಂದಾಗ ಆ ಕಣ್ಣೀರಿಗೆ ಉಪ್ಪಿನ ರುಚಿಯನ್ನು ಹೇಗೆ ಉತ್ಪನ್ನ ಮಾಡಿದನು ?’, ಎಂಬುದು ಬಿಡಿಸಲಾಗದ ರಹಸ್ಯವಾಗಿದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರದ್ದು ಸಹ ಅದೇ ರೀತಿಯ ರಹಸ್ಯವಾಗಿದೆ. ಅದು ಎಲ್ಲರಿಗೂ ತಿಳಿಯಲು ಸಾಧ್ಯವಿಲ್ಲ. ‘ಶ್ರೀಸತ್‌ಶಕ್ತಿ’ ಇವರಲ್ಲಿ ‘ಮಹಾಸರಸ್ವತಿ’, ‘ಮಹಾಕಾಳಿ’ ಮತ್ತು ‘ಮಹಾಲಕ್ಷ್ಮೀ’ ಈ ಮೂರೂ ತತ್ತ್ವಗಳಿವೆ. ಮುಂಬರುವ ಕಾಲದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ‘ದೇವಿ’ ಎಂದೇ ಗುರುತಿ ಸಲ್ಪಡುವರು. ಅವರ ಸೌಂದರ್ಯ ಅನುಪಮ ಮತ್ತು ದೈವೀಯಾಗಿದೆ. ಅದು ಮಾನವೀ ಸೌಂದರ್ಯವಲ್ಲ !’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೩, ೧೩.೫.೨೦೨೦)
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ಮತ್ತು ದಿವ್ಯ ಸಂಬಂಧ !
ಅ. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಶಂಖಚಕ್ರಧಾರಿ ಶ್ರೀಮನ್ನಾರಾಯಣ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ವರೂಪವಾಗಿದ್ದಾರೆ.
ಆ. ಗುರುದೇವರು ಒಂದು ವೇಳೆ ಚಿನ್ನದ ಆಭರಣಗಳನ್ನು ಧರಿಸಿದರೆ, ಅದರಲ್ಲಿನ ಚಿನ್ನ ಎಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮನಸ್ಸಿನಲ್ಲಿನ ವಿಚಾರ (ಇಚ್ಛಾಶಕ್ತಿ), ಅಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಈ. ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ಒಂದು ವೇಳೆ ವೃಕ್ಷವಾಗಿದ್ದರೆ, ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಆ ವೃಕ್ಷದ ‘ಫಲ’ ಆಗಿದ್ದಾರೆ !
ಉ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಮಾಧ್ಯಮದಿಂದ ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಸಾವಿರಾರು ಸಾಧಕರು ಸಿಕ್ಕಿದ್ದಾರೆ.
೪. ಆದಿಶಕ್ತಿ ಜಗದಂಬಾಸ್ವರೂಪ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ !
ಅ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಅಂದರೆ ಸಾಕ್ಷಾತ್ ‘ಭೂಮಿ.’ ಆದಿಶಕ್ತಿ ಜಗದಂಬಾ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಮಾಧ್ಯಮದಿಂದ ಪೃಥ್ವಿಯಲ್ಲಿ ಛಾಯಾರೂಪದಿಂದ ವಾಸ ಮಾಡುತ್ತಿದ್ದಾಳೆ. ಈ ಆದಿಶಕ್ತಿ ಜಗದಂಬೆಯ ಮೂಲ ಸ್ವರೂಪ ಕೇವಲ ಅಗ್ನಿನಾರಾಯಾಣನಿಗಷ್ಟೇ ಗೊತ್ತಿದೆ.
ಆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಲ್ಲಿ ಶ್ರೀಲಕ್ಷ್ಮೀಯ ತತ್ತ್ವವು ಅತ್ಯಧಿಕ ಪ್ರಮಾಣದಲ್ಲಿದೆ. ಇಂತಹ ಮಹಾಲಕ್ಷ್ಮೀ ಸ್ವರೂಪ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಮೇಲೆ ಸುಳ್ಳು ಆರೋಪ ಹೊರಿಸಿದರೆ ಅಥವಾ ಅವರ ನಿಂದನೆಯನ್ನು ಮಾಡಿದರೆ ಆದಿಶಕ್ತಿ ಜಗದಂಬಾ ಸಮಯ ಬಂದಾಗ ಪಾಠ ಕಲಿಸುವಳು !’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೭, ೧೬.೬.೨೦೨೦)
೫. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿನ ದೇವತ್ವ !
‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಯಾರಿಗೆ ಪ್ರಸಾದರೂಪದಲ್ಲಿ ಕುಂಕುಮ ಅಥವಾ ವಿಭೂತಿಯನ್ನು ಕೊಡುತ್ತಾರೆಯೋ’, ಆ ಜೀವಗಳಿಗೆ ಒಂದು ರೀತಿಯಲ್ಲಿ ಆದಿಶಕ್ತಿ ಜಗದಂಬೆಯ ಆಶೀರ್ವಾದವೇ ಪ್ರಾಪ್ತವಾಗುತ್ತದೆ !
ಇನ್ನು ಮುಂದೆ ಪೃಥ್ವಿಯ ಮೇಲಿನ ಅನೇಕ ಜೀವಗಳಿಗೆ ಸ್ವಪ್ನದೃಷ್ಟಾಂತ ಮತ್ತು ಅನುಭೂತಿಗಳ ಮೂಲಕ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಲ್ಲಿನ ದೇವತ್ವವು ಗಮನಕ್ಕೆ ಬರಲಿದೆ.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೫, ೧೭.೫.೨೦೨೦)
೬. ಮಾತೃಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ತಾಯಿಯ ಹಾಲಿನಲ್ಲಿ ಯಾವ ರೀತಿ ಕಲಬೆರಕೆ ಮಾಡಲು ಬರುವುದಿಲ್ಲವೋ, ಅದೇ ರೀತಿ ಎಷ್ಟೇ ಸಂಕಟಗಳು ಬಂದರೂ, ‘ಉತ್ತರಾಪುತ್ರಿ’ ಇವರಲ್ಲಿನ ಆದಿಶಕ್ತಿಯ ತತ್ತ್ವವು ಕಲಬೆರಕೆಯಾಗಲಾರದು. ತಾಯಿಗೆ ಯಾವ ರೀತಿ ಮಗುವಿನ ಬಗ್ಗೆ ಪ್ರೀತಿ, ಕರುಣೆ, ಶಿಸ್ತು, ಕರ್ತವ್ಯದಕ್ಷತೆ ಇತ್ಯಾದಿ ಗುಣಗಳು ಕಂಡು ಬರುತ್ತವೆಯೋ, ಅದೇ ರೀತಿ ‘ಉತ್ತರಾಪುತ್ರಿ’ಯಲ್ಲಿ ಸಾಧಕರ ಬಗ್ಗೆ ಪ್ರೀತಿ, ಕರುಣೆ, ಶಿಸ್ತು ಮತ್ತು ಕರ್ತವ್ಯದಕ್ಷತೆ ಈ ಗುಣಗಳಿವೆ.’ (ಮಹರ್ಷಿ ನಾಡಿಪಟ್ಟಿ ವಾಚನದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರÀನ್ನು ‘ಉತ್ತರಾಪುತ್ರಿ’ ಎಂದು ಉಲ್ಲೇಖಿಸುತ್ತಾರೆ, ಏಕೆಂದರೆ ಅವರ ಜನ್ಮನಕ್ಷತ್ರ ಉತ್ತರಫಾಲ್ಗುಣವಾಗಿದೆ.’ – ಸಂಕಲನಕಾರರು) (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೮, ೧೫.೪.೨೦೨೨)
೭. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ರಾಮನಾಥಿ ಆಶ್ರಮದಲ್ಲಿ ನಿಷ್ಠೆಯಿಂದ ಮಾಡಿದ ಪೂಜೆಯಿಂದ ಎಲ್ಲ ಸಾಧಕರ ರಕ್ಷಣೆಯಾಯಿತು !
‘ಉತ್ತರಾಪುತ್ರಿ’ಯು ರಾಮನಾಥಿ ಆಶ್ರಮದಲ್ಲಿ ಶ್ರದ್ಧೆಯಿಂದ ಮಾಡಿದ ಪೂಜೆಯಿಂದ ಕೊರೊನಾ ಮಹಾಮಾರಿಯ ಕಾಲದಲ್ಲಿ ಎಲ್ಲ ಸಾಧಕರ ರಕ್ಷಣೆಯಾಯಿತು.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೭೦, ೧೩.೨.೨೦೨೧)
೮. ‘ಉತ್ತರಾಪುತ್ರಿಯ’ ಗುರುಗಳ ಮೇಲಿನ ಅಖಂಡ ಶ್ರದ್ಧೆಯಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಬೇಗನೇ ಆಗಲಿದೆ’, ಇದರಲ್ಲಿ ಯಾವುದೇ ಸಂದೇಹವಿಲ್ಲ !’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೨೧೦, ೧೮.೯.೨೦೨೨)
– ಶ್ರೀ. ವಿನಾಯಕ ಶಾನಭಾಗ (ವಯಸ್ಸು ೩೯ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೭), ಚೆನ್ನೈ, ತಮಿಳುನಾಡು. (೧೮.೯.೨೦೨೨)