ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಅಧ್ಯಾತ್ಮದ ಅಧ್ಯಯನ ಮತ್ತು ಸಾಧನೆ ಮಾಡಿದ ನಂತರ ವಿಜ್ಞಾನವು ಶಿಶುವಿಹಾರದ ಶಿಕ್ಷಣದಂತಿದೆ ಎಂದು ತಿಳಿಯುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ
ಅಧ್ಯಾತ್ಮದ ಅಧ್ಯಯನ ಮತ್ತು ಸಾಧನೆ ಮಾಡಿದ ನಂತರ ವಿಜ್ಞಾನವು ಶಿಶುವಿಹಾರದ ಶಿಕ್ಷಣದಂತಿದೆ ಎಂದು ತಿಳಿಯುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ
ರಾಮಜನ್ಮಭೂಮಿಯು ರಾಮಲಲ್ಲಾನಿಗೇ ಸೇರಿದೆಯೆಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು. ಈ ರಾಮಜನ್ಮಭೂಮಿಗಾಗಿ ಅನೇಕರು ಬಲಿದಾನ ನೀಡಿದರು. ಈ ಜ್ಞಾತ-ಅಜ್ಞಾತ ಧರ್ಮಾಭಿಮಾನಿ ಹಿಂದೂಗಳ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು ಈ ಸಂಚಿಕೆ ಹೊರಡಿಸಲಾಗಿದೆ.
ಅಯೋಧ್ಯೆಯ ಮಹಾತ್ಮೆಯನ್ನು ಹೇಳುವಾಗ ನ್ಯಾಯಾಲಯವು ‘ಸ್ಕಂದಪುರಾಣ ‘ವೃಹಧರ್ಮೋತ್ತರ ಪುರಾಣ, ‘ವಾಲ್ಮೀಕಿ ರಾಮಾಯಣದಲ್ಲಿನ ಬಾಲಕಾಂಡ ಇತ್ಯಾದಿ ಪ್ರಾಚೀನ ಸಂದರ್ಭಗಳನ್ನು ಉಲ್ಲೇಖಿಸಿ, ರಾಮದ್ವೇಷಿಗಳಿಗೆ ಕಪಾಳಮೋಕ್ಷ ಮಾಡಿದೆ.
ಪರಾತ್ಪರ ಗುರು ಡಾ. ಆಠವಲೆಯವರ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪಕ್ಕೆ ಪ್ರಭು ಶ್ರೀರಾಮನ ಆಶೀರ್ವಾದವನ್ನು ಪಡೆಯಲೆಂದು, ಸನಾತನದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಅಯೋಧ್ಯೆಯ ರಾಮಲಲ್ಲಾನ ದರ್ಶನವನ್ನು ಪಡೆದರು.
ರಾಮಜನ್ಮಭೂಮಿಯು ಹಿಂದೂ ಧರ್ಮದ ಆದ್ಯ ಧರ್ಮಪೀಠವಾಗಿದೆ. ಆದಿನಾರಾಯಣ ತ್ರೈಲೋಕ್ಯಾಧೀಶ ಪ್ರಭು ರಾಮಚಂದ್ರನೇ ಇದನ್ನು ಮುಕ್ತಗೊಳಿಸಿದನು. ರಾಮಾವತಾರದಲ್ಲಿ ಭಗವಂತನು ಮರ್ಯಾದಾ ಪುರುಷೋತ್ತಮನ ‘ಏಕಪತ್ನಿ, ಏಕಬಾಣಿ, ಏಕವಚನಿ’ ಮುಂತಾದ ಆದರ್ಶವನ್ನು ಎಲ್ಲರೆದುರು ಇಟ್ಟಿದ್ದಾನೆ.
ರಾಮಜನ್ಮಭೂಮಿಯ ಖಟ್ಲೆಯ ತೀರ್ಪು ಹಿಂದೂಗಳ ಪರವಾಗಿ ಬರಬೇಕೆಂದು ಅನೇಕ ನ್ಯಾಯವಾದಿಗಳು ಬಹುದೊಡ್ಡ ಯೋಗದಾನವನ್ನು ನೀಡಿದ್ದಾರೆ. ಅವರಲ್ಲಿನ ಒಬ್ಬರೆಂದರೆ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಸಂಘಟನೆಯ ಅಧ್ಯಕ್ಷರಾದ ಪೂ. (ನ್ಯಾಯವಾದಿ) ಹರಿಶಂಕರ ಜೈನ. ಹಿಂದೂ ಮಹಾಸಭೆಯ ಪರವಾಗಿ ಅವರು ೨ ದಶಕಗಳಿಗಿಂತಲೂ ಹೆಚ್ಚು ಕಾಲ ಖಟ್ಲೆಯನ್ನು ನಡೆಸುತ್ತಿದ್ದರು.
ಇದರಲ್ಲಿ ಮೇಲಿನ ಚಿತ್ರ ಸಮಸ್ತ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ರಾಮಲಲ್ಲಾನ ಜನ್ಮಸ್ಥಳವೇ ಆಗಿದೆ ಹಾಗೂ ಪಕ್ಕದ ಚಿತ್ರ ಸೀತಾಮಾತೆಯ ಅರಮನೆಯಾಗಿದೆ. ಸೀತಾಮಾತೆ ಯಾವ ಸ್ಥಳದಲ್ಲಿ ಚಿಕ್ಕದಿಂದ ದೊಡ್ಡವರಾದರೋ, ಆ ಸ್ಥಳ ಸದ್ಯ ನೇಪಾಳದ ಜನಕಪುರದಲ್ಲಿದೆ.
ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಾಧೀಶರ ಪೀಠಗಳು ನಿರ್ಣಯದಲ್ಲಿ ಸಿಕ್ಖ್ ಧರ್ಮಗುರು ಗುರುನಾನಕ ದೇವ ಇವರ ಅಯೋಧ್ಯೆ ಯಾತ್ರೆಯನ್ನು ಉಲ್ಲೇಖಿಸಿದೆ. ‘೧೫೬೪ (ವಿಕ್ರಮ ಸಂವತ್ಸರ ೧೫೦೭) ರಲ್ಲಿ ಭಾದ್ರಪದದಲ್ಲಿನ ಹುಣ್ಣಿಮೆಗೆ ಈಶ್ವರನ ಸಾಕ್ಷಾತ್ಕಾರವಾದಾಗ ಗುರುನಾನಕ ದೇವ ಇವರು ತೀರ್ಥಯಾತ್ರೆಗೆ ಹೋಗುವ ನಿರ್ಧಾರ ಮಾಡಿದರು.
ಕಳೆದ ೭೦ ವರ್ಷಗಳಿಂದ ರಾಮಜನ್ಮಭೂಮಿಯ ತೀರ್ಪು ನೆನೆಗುದಿಯಲ್ಲಿತ್ತು. ಆದ್ದರಿಂದ ಅಯೋಧ್ಯೆ ಯಲ್ಲಿ ಪ್ರಭು ಶ್ರೀರಾಮನು ಒಂದು ಚಿಕ್ಕ ಡೇರೆಯಲ್ಲಿ ಕಟ್ಟಿ ಹಾಕಿದಂತೆ ವಿರಾಜಮಾನನಾಗಿದ್ದನು. ಪ್ರಭು ಶ್ರೀರಾಮನಿಗೆ ತನ್ನದೇ ಆದ ದೇವಸ್ಥಾನವನ್ನು ಪುನಃ ನಿರ್ಮಿಸಲು ನ್ಯಾಯಾಲಯದ ತೀರ್ಪು ಬೇಗನೆ ಬರುವುದು ಅವಶ್ಯಕವಿತ್ತು.
ಹಿಂದೂಗಳು ರಾಮಮಂದಿರಕ್ಕಾಗಿ ಇನ್ನೂ ಕಾಯುವ ಬದಲು ನಾಮಜಪದ ಮೂಲಕ ಪ್ರಭು ಶ್ರೀರಾಮನಿಗೆ ಹಿಂದೂಗಳು ಆತನ ಭಕ್ತಿಯನ್ನು ಮಾಡಿದರೆ ರಾಮಮಂದಿರವನ್ನು ನಿರ್ಮಿಸುವಲ್ಲಿನ ಅಡಚಣೆಗಳು ದೂರವಾಗಬಹುದು. ಈ ಭಕ್ತಿಯು ಕೇವಲ ಮಾನಸಿಕ ಸ್ತರದಲ್ಲಿ ಮಾಡದೇ, ಅದು ಅಧ್ಯಾತ್ಮಿಕ ಸ್ತರದಲ್ಲಾಗಬೇಕು.