ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಸ್ಮರಣೆ, ‘ಸ್ತವನ, ‘ನಮನ ಹಾಗೂ ‘ಭಜನೆಗಳೆ ಸಾಧಕರ ಉದ್ಧಾರದ ಏಕೈಕ ಮಾರ್ಗ !

‘ಶ್ರೀಮತ್ಪರಬ್ರಹ್ಮ ಗುರುಮ್ ಸ್ಮರಾಮಿ |
ಶ್ರೀಮತ್ಪರಬ್ರಹ್ಮ ಗುರುಮ್ ವದಾಮಿ | ಶ್ರೀಮತ್ಪರಬ್ರಹ್ಮ ಗುರುಮ್ ನಮಾಮಿ |
ಶ್ರೀಮತ್ಪರಬ್ರಹ್ಮ ಗುರುಮ್ ಭಜಾಮಿ || – ಗುರುಗೀತೆ, ಶ್ಲೋಕ ೮೮
ಅರ್ಥ : ನಾನು ಶ್ರೀಮತ್ ಪರಬ್ರಹ್ಮ ಗುರುಗಳನ್ನು ಸ್ಮರಿಸುತ್ತೇನೆ. ನಾನು ಶ್ರೀಮತ್ ಪರಬ್ರಹ್ಮ ಗುರುಗಳ ಸ್ತವನ ಮಾಡುತ್ತೇನೆ. ನಾನು ಶ್ರೀಮತ್ ಪರಬ್ರಹ್ಮ ಗುರುಗಳಿಗೆ ನಮಿಸುತ್ತೇನೆ ಹಾಗೂ ನಾನು ಶ್ರೀಮತ್ ಪರಬ್ರಹ್ಮ ಗುರುಗಳನ್ನು ಭಜಿಸುತ್ತೇನೆ.
ಭಾವಾರ್ಥ : ಸನಾತನದ ಸಾಧಕರ ಜೀವನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವತರಿಸಿದರು ಹಾಗೂ ಅವರೇ ಸಾಧಕರ ಸರ್ವಸ್ವವಾದರು; ಆದ್ದರಿಂದ ಸಾಧಕರೆ, ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರನ್ನೇ ಅಖಂಡವಾಗಿ ಸ್ಮರಿಸೋಣ ! ಶ್ರೀಮತ್ ಪರಬ್ರಹ್ಮ ಸ್ವರೂಪಿ ಗುರುದೇವರ ದೈವೀ ಅವತಾರಿ ಕಾರ್ಯವನ್ನು ಹಾಗೂ ವಿವಿಧ ಗುಣಗಳನ್ನು ಅಖಂಡ ಸ್ತವನ ಮಾಡೋಣ ! ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರ ದೈವೀ ಅವತಾರಿ ಸ್ವರೂಪಕ್ಕೆ ಪ್ರತಿ ಕ್ಷಣ ನಮಿಸೋಣ ! ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರು ಕಲಿಸಿದ ಸಾಧನೆಯನ್ನು ಮಾಡಿ ಆ ಸಾಧನೆಯ ಪ್ರಯತ್ನದ ಮೂಲಕ ಅವರನ್ನು ಭಜಿಸೋಣ. ಇದೇ ನಮ್ಮ ಉದ್ಧಾರದ ಏಕೈಕ ಅಮೂಲ್ಯ ಮಾರ್ಗವಾಗಿದೆ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೧.೫.೨೦೨೩)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !