೨೦೨೨ ರಲ್ಲಿನ ದತ್ತಜಯಂತಿಯ ದಿನ, ಅಂದರೆ ೭.೧೨.೨೦೨೨ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮ ಹಸ್ತಾಕ್ಷರಗಳಲ್ಲಿ ಬರೆದಿರುವ ಆಧ್ಯಾತ್ಮಿಕ ಉತ್ತರಾಧಿಕಾರ ಪತ್ರವನ್ನು ನೀಡಿದ್ದರು. ಈ ಉತ್ತರಾಧಿಕಾರ ಪತ್ರವನ್ನು ಈಗ ತಾಮ್ರಪತ್ರದ ಮೇಲೆ ಕೆತ್ತಲಾಗಿದೆ. ಈ ಸಮಾರಂಭದಲ್ಲಿ ಆ ಲೋಹದಲ್ಲಿ ಕೆತ್ತಿದ ಉತ್ತರಾಧಿಕಾರ ಪತ್ರವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ನೀಡಿದರು. ಸನಾತನದ ಗುರುಪರಂಪರೆಯಲ್ಲಿನ ಈ ಅಮೂಲ್ಯ ಕ್ಷಣವನ್ನು ಸಾಧಕರು ಭಾವಪೂರ್ಣವಾಗಿ ಅನುಭವಿಸಿದರು. ಶ್ರೀ. ವಿನಾಯಕ ಶಾನಭಾಗ ಇವರು ಉತ್ತರಾಧಿಕಾರ ಪತ್ರವನ್ನು ಓದಿ ಹೇಳಿದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಸ್ತಾಕ್ಷರದಲ್ಲಿನ ಉತ್ತರಾಧಿಕಾರದ ಪತ್ರ
ಉತ್ತರಾಧಿಕಾರ ಪತ್ರದ ಕನ್ನಡ ಅನುವಾದ
ಉತ್ತರಾಧಿಕಾರ ಪತ್ರ
‘ಸನಾತನ ಧರ್ಮ’ ಇದುವೇ ನನ್ನ ನಿತ್ಯ ರೂಪವಾಗಿದೆ. ಆ ರೂಪದಿಂದ ನಾನು ಯಾವಾಗಲೂ ಎಲ್ಲೆಡೆ ಇರುತ್ತೇನೆ. ಯಾವ ರೀತಿ ವೇದಗಳ ’ಶ್ರುತಿ’ ಮತ್ತು ’ಸ್ಮೃತಿ’ ಎಂಬ ಹೆಸರಿನ ಎರಡು ಅಂಗಗಳಿವೆಯೋ ಅದೇ ರೀತಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಬ್ಬರು ನನ್ನ ಎರಡು ಅಂಗಗಳಾಗಿದ್ದಾರೆ. ನನ್ನ ನಂತರ ಸನಾತನ ಧರ್ಮದ ರಕ್ಷಣೆಯ ಕಾರ್ಯವನ್ನು ಅವರಿಬ್ಬರೂ ಮಾಡಲಿದ್ದಾರೆ. ಯಾವ ರೀತಿ ‘ಶ್ರುತಿ’ ಮತ್ತು ‘ಸ್ಮೃತಿ’ ಈ ಶಬ್ದಗಳು ‘ಶಬ್ದಪ್ರಮಾಣ’ ಆಗಿವೆಯೋ, ಅದೇ ರೀತಿ ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿ ಇವರ ಪ್ರತಿಯೊಂದು ಮಾತುಗಳೆಂದರೆ ನನ್ನದೇ ಮಾತುಗಳಾಗಿವೆ. ನನ್ನ ನಂತರ ಮುಂಬರುವ ಕಾಲದಲ್ಲಿ ಸನಾತನ ಸಂಸ್ಥೆಯ ಸದ್ಗುರು, ಸಂತ, ಶ್ರದ್ಧಾವಂತ ಸಾಧಕರ, ಭಕ್ತರ ರಕ್ಷಣೆ, ಪರಿಪಾಲನೆ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಅಧಿಕಾರ ಶ್ರೀಸತ್‌ಶಕ್ತಿ ಸೌ. ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರನ್ನು ಬಿಟ್ಟು ಬೇರೆ ಯಾರಿಗೂ ಇಲ್ಲ. ಯಾವ ರೀತಿ ವೇದಗಳು ಚಿರಂತನವಾಗಿವೆಯೋ ಅದೇ ರೀತಿ ನನ್ನ ಈ ಶಬ್ದಗಳು ಚಿರಂತನವಾಗಿವೆ.
– ಡಾ. ಜಯಂತ ಬಾಳಾಜಿ ಆಠವಲೆ (ದತ್ತ ಜಯಂತಿ) ೭.೧೨.೨೦೨೨